

ಬೆಂಗಳೂರು: ಸಹಜವಾಗಿ ಸಿನಿಮಾ ನಟ, ನಟಿಯರು ತಮ್ಮ ವಿದ್ಯಾಭ್ಯಾಸ ಮತ್ತು ಅಂಕಗಳ ಬಗ್ಗೆ ಹೆಚ್ಚು ಗೌಪ್ಯತೆ ಕಾಯ್ದುಕೊಂಡಿರುತ್ತಾರೆ. ಅದು ಯಾರಿಗೂ ಗೊತ್ತಾಗುವುದು ಬೇಡ ಎಂಬುದು ಅವರ ಉದ್ದೇಶ ಆಗಿರಬಹುದು. ಇತ್ತ ಅಭಿಮಾನಿ ಬಳಗದಲ್ಲಿ ನೆಚ್ಚಿನ ನಟ, ನಟಿ ಎಷ್ಟು ಅಂಕ ಪಡೆದಿರಬಹುದು ಎಂಬುದನ್ನು ತಿಳಿದುಕೊಳ್ಳುವ ಬಗ್ಗೆ ಸಹಜ ಕುತೂಹಲ ಇರುತ್ತದೆ. ಅದೇ ರೀತಿ ಈಗ ನಟಿ ಹರಿಪ್ರಿಯಾ ಎಸ್ಸೆಸ್ಸೆಲ್ಸಿಗೆ ಪಡೆದ ಅಂಕಗಳು ಎಷ್ಟು ಎಂಬುದಕ್ಕೆ ಉತ್ತರ ಸಿಕ್ಕಿದೆ. ಹೌದು, 10ನೇ ತರಗತಿಗೆ 470 ಅಂಕಗಳನ್ನು ಪಡೆದುಕೊಂಡು, ಶೇ. 75.20 ಪರ್ಸೆಂಟೇಜ್ ಮಾಡಿದ್ದಾರೆ ಹರಿಪ್ರಿಯಾ. ಈ ವಿಚಾರವನ್ನು ತಮ್ಮದೆ ಬೇಬ್ ನೋಸ್ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ. ನಿಮ್ಮ ಪ್ರಶ್ನೆ ನನ್ನ ಉತ್ತರ ವಿಭಾಗದಲ್ಲಿ ಅಭಿಮಾನಿಯೊಬ್ಬ ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದ್ದಾರೆ.