

ನಟಿ ಹರಿಪ್ರಿಯಾ ಸದ್ಯ ಶೂಟಿಂಗ್ ಮೂಡ್ನಲ್ಲಿದ್ದಾರೆ. ಬಗೆ ಬಗೆ ವೇಷ ತೊಟ್ಟು ಮಿಂಚುತ್ತಿದ್ದಾರೆ. ಒಮ್ಮೆ ಜರತಾರಿ ಸೀರೆಯಲ್ಲಿ ಕಾಣಿಸಿಕೊಂಡರೆ, ಮತ್ತೊಂದರಲ್ಲಿ ಅಜ್ಜಿಯಾಗಿಯೂ ಗಮನ ಸೆಳೆದಿದ್ದಾರೆ. ಇನ್ನೊಂದು ಕಡೆಗೆ ಸನ್ಯಾಸಿನಿಯಾಗಿಯೂ ಅವರು ಪ್ರತ್ಯಕ್ಷರಾಗಿದ್ದಾರೆ. ಅರೇ ಏನಾಯ್ತು ಹರಿಪ್ರಿಯಾಗೆ ಎಂದು ಹುಬ್ಬೇರಿಸಬೇಡಿ. ಈ ಎಲ್ಲ ಅವತಾರಗಳು ಸೀರಿಯಲ್ವೊಂದರ ಸಲುವಾಗಿ ಅಂತೆ. ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವ ಸಂಘರ್ಷ ಧಾರಾವಾಹಿಯಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಸಂಚಿಕೆಗಳನ್ನು ಚಿತ್ರೀಕರಿಸಲಾಗುತ್ತಿದೆ. ಅದರ ಶೂಟಿಂಗ್ನಲ್ಲಿ ಹರಿಪ್ರಿಯಾ ಭಾಗವಹಿಸಿ ಬಂದಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ವಿಡಿಯೋಗಳನ್ನೂ ಶೇರ್ ಮಾಡಿಕೊಂಡಿದ್ದಾರೆ. ಅವು ಇಲ್ಲಿವೆ..