ಫೋಟೋದಲ್ಲಿರುವ ಬಾಲಕಿ ಯಾರು ಗೊತ್ತಾ? ಮಾದಕ ದೃಶ್ಯಗಳಿಂದಲೇ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಸ್ಟಾರ್​ ನಟಿ ಈಕೆ! Actress Childhood Photo

Actress Childhood Photo
Published on

Actress Childhood Photo : ಸಿನಿಪ್ರಿಯರಿಗೆ ಹೀರೋ ಮತ್ತು ಹೀರೋಯಿನ್​ಗಳ ವೈಯಕ್ತಿಕ ಮಾಹಿತಿ ತಿಳಿದುಕೊಳ್ಳುವ ಕುತೂಹಲ ಇದ್ದೇ ಇರುತ್ತದೆ. ಅವರು ಬಳಸುವ ಕಾರುಗಳು, ದಿನನಿತ್ಯ ಜೀವನದಲ್ಲಿ ಅವರ ಹವ್ಯಾಸಗಳು, ಧರಿಸುವ ಬಟ್ಟೆ, ಮೊಬೈಲ್​ ಹಾಗೂ ವಾಚ್​ ಬೆಲೆ ಎಷ್ಟು? ವಾಸಿಸುವ ಮನೆ ಎಷ್ಟು ಬೆಲೆ ಬಾಳುತ್ತದೆ? ಮತ್ತು ಯಾವ ಯಾವ ವಸ್ತುಗಳನ್ನು ಆಗಾಗ ಬಳಕೆ ಮಾಡುತ್ತಾರೆ? ಎಂಬಿತ್ಯಾದಿ ವಿಚಾರಗಳನ್ನು ತಿಳಿದುಕೊಳ್ಳಲು ಬಯಸುತ್ತಾರೆ. ಇದಿಷ್ಟೇ ಅಲ್ಲದೆ, ಬಾಲ್ಯದಲ್ಲಿ ಹೇಗಿದ್ದರು? ಸಿನಿಮಾಗೆ ಬರುವ ಮುಂಚೆ ಹೇಗೆ ಕಾಣುತ್ತಿದ್ದರು ಎಂದು ತಿಳಿದುಕೊಳ್ಳುವ ಕುತೂಹಲವೂ ಜಾಸ್ತಿ ಇರುತ್ತದೆ.

ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಒಂದು ಫೋಟೋವೊಂದು ವೈರಲ್​ ಆಗಿದೆ. ಆ ಫೋಟೋದಲ್ಲಿ ಮುದ್ದಾದ ಬಾಲಕಿ ಇದ್ದಾಳೆ. ಈಕೆ ಸಾಮಾನ್ಯ ಬಾಲಕಿ ಅಲ್ಲ, ಆಕೆ ಪ್ಯಾನ್​ ಇಂಡಿಯಾದ ಸ್ಟಾರ್​ ನಟಿ. ತನ್ನ ಸೌಂದರ್ಯದಿಂದಲೇ ಎಲ್ಲರ ಮನಸ್ಸು ಗೆದ್ದ ಚೆಲುವೆ. ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳನ್ನು ಮಾಡಿದ್ದಾರೆ. ಕನ್ನಡದಲ್ಲಿ ಎರಡು ಸಿನಿಮಾಗಳಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಕನ್ನಡಿಗರಿಗೂ ಪರಿಚಿತರಾಗಿದ್ದಾರೆ. ಅನೇಕ ವರ್ಷಗಳವರೆಗೆ ಕಿಸ್ಸಿಂಗ್​ ದೃಶ್ಯಗಳಲ್ಲಿ ನಟಿಸದಂತೆ ಸ್ವಒಪ್ಪಂದ ಮಾಡಿಕೊಂಡಿದ್ದರು. ಆದರೆ, ಇತ್ತೀಚಿಗೆ ಎಲ್ಲ ನಿಯಮಗಳನ್ನು ಮುರಿದು ಬೋಲ್ಡ್​ ದೃಶ್ಯಗಳಲ್ಲಿ ನಟಿಸುತ್ತಿದ್ದಾರೆ. ಹಾಟ್​ ವೆಬ್​ ಸರಣಿಗಳಲ್ಲೂ ನಟಿಸಿದ್ದಾರೆ. ಸರಣಿ ಐಟಂ ಡ್ಯಾನ್ಸ್​ಗಳಲ್ಲಿ ಸೊಂಟ ಬಳುಕಿಸಿದ್ದಾರೆ. ಇಷ್ಟೆಲ್ಲ ಸುಳಿವು ನೀಡಿದರೂ ಅವರು ಯಾರೆಂದು ಗೊತ್ತಾಗುತ್ತಿಲ್ಲವೇ? ಹಾಗಾದರೆ, ಮುಂದೆ ಉತ್ತರ ಸಿಗಲಿದೆ.

ಅಂದಹಾಗೆ, ಈ ಮೇಲಿನ ಫೋಟೋದಲ್ಲಿರುವುದು ಬೇರೆ ಯಾರೂ ಅಲ್ಲ ಅವರೇ ಮಿಲ್ಕಿ ಬ್ಯೂಟಿ. ಈ ಪದ ಹೇಳಿದ ಮೇಲೆ ಅವರು ಯಾರು ಅಂತ ನಿಮಗೆ ಖಂಡಿತವಾಗಿಯೂ ತಿಳಿದಿರುತ್ತದೆ. ಅವರೇ ಬಹುಭಾಷಾ ನಟಿ ತಮನ್ನಾ ಭಾಟಿಯಾ. ತಮನ್ನಾ ಭಾಟಿಯಾ ಕಳೆದ ಎರಡು ದಶಕಗಳಿಂದ ಸ್ಟಾರ್​ ನಾಯಕಿಯಾಗಿ ಸಿನಿಮಾ ರಂಗದಲ್ಲಿ ಮಿಂಚು ಹರಿಸುತ್ತಿದ್ದಾರೆ. ಹಿಂದಿ, ತೆಲುಗು, ತಮಿಳು ಮತ್ತು ಇತರ ಭಾಷೆಗಳಲ್ಲಿ ಅನೇಕ ಚಿತ್ರಗಳನ್ನು ಮಾಡಿದ್ದು, ಬಹುಭಾಷಾ ನಾಯಕಿ ಎನಿಸಿಕೊಂಡಿದ್ದಾರೆ. ಆದರೆ, ಕನ್ನಡದಲ್ಲಿ ಒಂದೇ ಒಂದು ಚಿತ್ರದಲ್ಲಿ ನಟನೆ ಮಾಡದಿದ್ದರೂ ನಿಖಿಲ್​ ಕುಮಾರಸ್ವಾಮಿ ನಟನೆಯ ಮೊದಲ ಸಿನಿಮಾ ಜಾಗ್ವಾರ್​ ಮತ್ತು ಯಶ್​ ನಟನೆಯ ಕೆಜಿಎಫ್​ 1 ಸಿನಿಮಾದಲ್ಲಿ ವಿಶೇಷ ಹಾಡಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಕನ್ನಡಿಗರಿಗೂ ಪರಿಚಿತರಾಗಿದ್ದಾರೆ.

Tamannaah Bhatia

ಅಂದಹಾಗೆ, ತಮನ್ನಾ ಅವರು 1989, ಡಿಸೆಂಬರ್ 21 ರಂದು ಮುಂಬೈನಲ್ಲಿ ಸಿಂಧಿ ಹಿಂದೂ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಹೆಸರು ಸಂತೋಷ್ ಭಾಟಿಯಾ ಮತ್ತು ತಾಯಿ ರಜನಿ ಭಾಟಿಯಾ. ಆನಂದ್ ಭಾಟಿಯಾ ಎಂಬ ಅಣ್ಣನಿದ್ದಾರೆ. ತಂದೆ ಸಂತೋಷ್​ ಅವರು ವಜ್ರ ವ್ಯಾಪಾರಿ. ತಮನ್ನಾ ಅವರು ಮುಂಬೈನ ಮಾನೆಕ್‌ಜಿ ಕೂಪರ್ ಎಜುಕೇಶನ್ ಟ್ರಸ್ಟ್ ಶಾಲೆಯಲ್ಲಿ ಶಿಕ್ಷಣ ಪಡೆದರು. 13 ನೇ ವಯಸ್ಸಿನಲ್ಲೇ ನಟನೆ ಆರಂಭಿಸಿದರು. ಪೃಥ್ವಿ ಥಿಯೇಟರ್‌ನಲ್ಲಿ ಒಂದು ವರ್ಷ ವೇದಿಕೆ ಪ್ರದರ್ಶನಗಳಲ್ಲಿ ಭಾಗವಹಿಸಿದರು. 2005 ರಲ್ಲಿ ಹಿಂದಿ ಚಿತ್ರ "ಚಾಂದ್ ಸಾ ರೋಷನ್ ಚೆಹ್ರಾ" ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಯಶಸ್ಸು ತೆಲುಗು ಮತ್ತು ತಮಿಳು ಚಿತ್ರಗಳ ಮೂಲಕ ಸಿಕ್ಕಿತು.

Tamannaah (1)

75 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ತಮನ್ನಾ, ಬಾಹುಬಲಿ ಸರಣಿ, ಹ್ಯಾಪಿ ಡೇಸ್, 100% ಲವ್, ಪೈಯಾ, ಅಯನ್​, ಮತ್ತು ಜೈಲರ್ ಚಿತ್ರಗಳ ಮೂಲಕ ಜನಪ್ರಿಯರಾದರು. ಕಲೈಮಾಮಣಿ, ಸೈಮಾ ಮತ್ತು ಸಂತೋಷಂ ಪ್ರಶಸ್ತಿಗಳನ್ನು ಗಳಿಸಿದ್ದಾರೆ. ಇನ್ನು ಒಟಿಟಿ ಪ್ಲಾಟ್‌ಫಾರ್ಮ್‌ಗಳಲ್ಲಿ "11ನೇ ಅವರ್" ಮತ್ತು "ಜೀ ಕರ್ದಾ" ಯಶಸ್ವಿಯಾಗಿವೆ. ನಟ ವಿಜಯ್ ವರ್ಮಾ ಜೊತೆಗಿನ ಲವ್​ ಸ್ಟೋರಿ ಕೂಡ ಭಾರಿ ಸುದ್ದಿಯಾಯಿತು. ಈ ನಡುವೆ ಇಬ್ಬರ ಸಂಬಂಧ ಮುರಿದು ಬಿದ್ದಿದೆ ಎಂಬ ವರದಿಯು ಕೂಡ ಇದೆ. 120 ಕೋಟಿ ರೂ. ಆಸ್ತಿ ಹೊಂದಿರುವ ತಮನ್ನಾ, ದಕ್ಷಿಣ ಭಾರತದ ಉನ್ನತ ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net