ಮತ್ತೆ ಬಂದ ಆಯೇಷಾ; ರಾಜಕೀಯ v/s ಪೊಲೀಸ್

Ayesha
Published on

ಬೆಂಗಳೂರು: ‘ಲೇಡಿ ಬ್ರೂಸ್​ಲೀ’ ಎಂದೇ ಜನಪ್ರಿಯರಾಗಿರುವ ಆಯೇಷಾ, ಮೂರ್ನಾಲ್ಕು ವರ್ಷಗಳಿಂದ ಕನ್ನಡ ಚಿತ್ರರಂಗದಲ್ಲಿ ಪತ್ತೆಯೇ ಇರಲಿಲ್ಲ. ಎಲ್ಲಿದ್ದರು, ಏನು ಮಾಡುತ್ತಿದ್ದರು ಎಂಬುದು ಗೊತ್ತಿರಲಿಲ್ಲ. ಈಗ ಆಯೇಷಾ, ಬಹಳ ದಿನಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ, ‘ಖಲ್ಲಾಸ್’ ಎಂಬ ಚಿತ್ರದ ಮೂಲಕ.

‘ಖಲ್ಲಾಸ್’ ಚಿತ್ರದ ಮುಹೂರ್ತ ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿತು. ಈ ಚಿತ್ರವನ್ನು ತೆಲುಗಿನ ಬೋಯಪಾತಿ ಸುಬ್ಬರಾವ್ ನಿರ್ವಿುಸಿದರೆ, ಶಶಿಕಾಂತ್ ಆನೇಕಲ್ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಕಥೆ ಏನಿರಬಹುದು? ಆಯೇಷಾ ಪಾತ್ರವೇನಿರಬಹುದು ಎಂಬ ಕುತೂಹಲವೇ ಬೇಡ. ಹಿಂದಿನ ಚಿತ್ರಗಳಂತೆ ಇಲ್ಲೂ ಆಯೇಷಾ, ಖಡಕ್ ಪೊಲೀಸ್ ಅಧಿಕಾರಿಯಾಗಿ ಅಭಿನಯಿಸುತ್ತಿದ್ದಾರೆ. ಭ್ರಷ್ಟ ರಾಜಕಾರಣಿಗಳು ಮತ್ತು ರೌಡಿಗಳ ವಿರುದ್ಧ ಹೋರಾಡಲಿದ್ದಾರೆ.

ಈ ಕುರಿತು ಮಾತನಾಡುವ ಅವರು, ‘ನನ್ನದು ಇದರಲ್ಲಿ ಪೊಲೀಸ್ ಅಧಿಕಾರಿ ಪಾತ್ರ. ದುಷ್ಟ ರಾಜಕಾರಣಿಗಳನ್ನು ಸರಿದಾರಿಗೆ ತಂದು ಸಮಾಜಕ್ಕೆ ಒಳಿತು ಮಾಡುವ ದಿಟ್ಟ ಅಧಿಕಾರಿಯಾಗಿ ಕಾಸಿಕೊಳ್ಳಲಿದ್ದೇನೆ’ ಎನ್ನುತ್ತಾರೆ ಆಯೇಷಾ. ಈ ಚಿತ್ರದಲ್ಲಿ ಸುಮನ್, ಉಮೇಶ್ ಬಣಕಾರ್, ಕುರಿ ರಂಗ ಹಾಗೂ ಅತಿಥಿ ಪಾತ್ರದಲ್ಲಿ ರವಿಕಾಳೆ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನಲ್ಲಿ 40 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಕ್ಲಾರೆನ್ಸ್ ಅಲೇನ್ ಸಂಗೀತ ಸಂಯೋಜಿಸಿದರೆ, ಸಿದ್ದಾರ್ಥ್ ರಾಜ್ ಛಾಯಾಗ್ರಹಣ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net