

ಸ್ಯಾಂಡಲ್ವುಡ್ ನಟಿ ಆಶಿಕಾ ರಂಗನಾಥ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅಭಿಮಾನಿ ಬಳಗ ಸೋಷಿಯಲ್ ಮೀಡಿಯಾದಲ್ಲಿ ಸಿಡಿಪಿ ಬಿಡುಗಡೆ ಮಾಡಿ ಹಾರೈಸಿದರೆ, ಇತ್ತ ಚಿತ್ರತಂಡದವರು ಆಶಿಕಾ ಜನ್ಮದಿನಕ್ಕೆ ಬಗೆಬಗೆ ಪೋಸ್ಟರ್ ಬಿಡುಗಡೆ ಮಾಡಿ ಶುಭಕೋರಿದ್ದಾರೆ.
‘ಮದಗಜ’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಲುಕ್ನಲ್ಲಿ ಕಾಣಿಸಿಕೊಂಡಿದ್ದ ಆಶಿಕಾ, ಇದೀಗ ಅವರ ಬರ್ತ್ಡೇಗೆ ಅವರ ಮತ್ತೊಂದು ಹೊಸ ಅವತಾರವನ್ನು ಪೋಸ್ಟರ್ ಮೂಲಕ ತಂಡ ಬಿಡುಗಡೆ ಮಾಡಿದೆ. ಸಿಗರೇಟ್ ಸೇದುವ ಭಂಗಿಯ ಅವರ ಲುಕ್ ಕುತೂಹಲ ಮೂಡಿಸಿದೆ. ಅದೇ ರೀತಿ ‘ಅವತಾರ ಪುರುಷ’, ‘ರೇಮೊ’, ‘ಗರುಡ’ ಚಿತ್ರತಂಡಗಳಿಂದಲೂ ಪೋಸ್ಟರ್ಗಳ ಉಡುಗೊರೆ ಸಿಕ್ಕಿದೆ. ಈ ಎಲ್ಲ ಸಿನಿಮಾಗಳ ಕೆಲಸಗಳು ಮುಗಿದಿದ್ದು, ಇನ್ನೇನು ಎಲ್ಲವೂ ಮೊದಲಿನಂತಾಗುತ್ತಿದ್ದಂತೆ ಚಿತ್ರಗಳು ಒಂದೊಂದಾಗಿ ಬಿಡುಗಡೆ ಆಗಲಿವೆ.