ಸೌತ್ ಬ್ಯೂಟಿ, ಕನ್ನಡತಿ ಅನುಷ್ಕಾ ಶೆಟ್ಟಿ ಎಷ್ಟು ಕೋಟಿಯ ಒಡತಿ ಗೊತ್ತಾ? ಆಸ್ತಿ ಮೌಲ್ಯ ಕೇಳಿದ್ರೆ ಬೆರಗಾಗ್ತೀರಾ!

Anushka Shetty
Published on

ಹೈದರಾಬಾದ್​: ಟಾಲಿವುಡ್ ಮತ್ತು ಕಾಲಿವುಡ್‌ನಲ್ಲಿ ಗುರುತಿಸಿಕೊಂಡಿರುವ ನಟಿ ಅನುಷ್ಕಾ ಶೆಟ್ಟಿ ಕರ್ನಾಟಕದವರಾದರೂ, ಒಂದೇ ಒಂದು ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಆದರೂ ಕನ್ನಡದ ಮೇಲಿನ ಅವರ ಅಭಿಮಾನದ ಬಗ್ಗೆ ಎರಡು ಮಾತಿಲ್ಲ. ವಯಸ್ಸು 42 ಆದರೂ ಇನ್ನೂ ಮದುವೆಯಾಗಿಲ್ಲ. ನಟ ಪ್ರಭಾಸ್​ ಮತ್ತು ಅನುಷ್ಕಾ ಮದುವೆ ಸುದ್ದಿ ಆಗಾಗ ಕೇಳಿಬರುತ್ತಲೇ ಇರುತ್ತದೆ. ಆದರೆ, ಇದೆಲ್ಲ ವದಂತಿಯಾಗೇ ಉಳಿದಿದೆ.

ಸೂಪರ್​ ಸ್ಟಾರ್​ ರಜಿನಿಕಾಂತ್​, ವಿಜಯ್​, ಸೂರ್ಯ, ನಾಗಾರ್ಜುನ, ಪ್ರಭಾಸ್​ ಹಾಗೂ ವಿಕ್ರಮ್ ಸೇರಿದಂತೆ ಪ್ರಮುಖ ನಾಯಕರೊಂದಿಗೆ​ ನಟಿಸಿರುವ ಅನುಷ್ಕಾ, ಅರುಂಧತಿ, ಭಾಗಮತಿ ಸೇರಿದಂತೆ ಮಹಿಳಾ ಪ್ರಧಾನ ಸಿನಿಮಾಗಳಲ್ಲೂ ನಟನೆ ಮಾಡಿದ್ದಾರೆ. ಬಾಹುಬಲಿ ಸಿನಿಮಾದಲ್ಲಿ ಅನುಷ್ಕಾ ಅವರ ನಟನೆಯು ಅವರಿಗೆ ಜಾಗತಿಕ ಮನ್ನಣೆಯನ್ನು ತಂದುಕೊಟ್ಟಿದೆ. ಸ್ಟಾರ್​ ನಟಿಯಾಗಿ ಮಿಂಚಿದ್ದ ಅನುಷ್ಕಾ ಪ್ರಸ್ತುತ ಸಿನಿಮಾಗಳಿಂದ ಅಂತರ ಕಾಯ್ದುಕೊಂಡಿದ್ದಾರೆ. ಮಿಸ್ ಶೆಟ್ಟಿ ಮಿಸ್ಟರ್ ಪೋಲಿ ಶೆಟ್ಟಿ ಸಿನಿಮಾದಲ್ಲಿ ಕೊನೆಯದಾಗಿ ಅನುಷ್ಕಾ ನಟಿಸಿದ್ದಾರೆ.

ಅನುಷ್ಕಾ ಅವರ ಸಿನಿಮಾ ವಿಚಾರ ಗೊತ್ತಾಯ್ತು ಇದೀಗ ಅವರ ಆಸ್ತಿಯ ಬಗ್ಗೆ ತಿಳಿಯೋಣ. ಅನುಷ್ಕಾ ಅವರು ಎಷ್ಟು ಕೋಟಿಯ ಒಡೆತಿ ಎಂಬುದು ನಿಮಗೆ ಗೊತ್ತಾ? ಅನುಷ್ಕಾ ಅವರ ಬಳಿ ಬರೋಬ್ಬರಿ 130 ಕೋಟಿ ರೂ. ಇದೆ. ಈ ಸಂಪತ್ತನ್ನು ಹೂಡಿಕೆಗಳು, ಜಾಹೀರಾತು ಮತ್ತು ಸಿನಿಮಾಗಳಿಂದ ಗಳಿಸಿದ್ದಾರೆ.

ಅನುಷ್ಕಾ ಅವರು ಬೆಂಗಳೂರಿನಲ್ಲಿ ಐಷಾರಾಮಿ ಡಿಸೈನರ್ ನಿವಾಸವನ್ನು ಹೊಂದಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಅನೇಕ ರಿಯಲ್ ಎಸ್ಟೇಟ್ ಆಸ್ತಿಗಳೊಂದಿಗೆ ತಮ್ಮ ಬಂಡವಾಳವನ್ನು ಹೂಡಿದ್ದಾರೆ. ಅಲ್ಲದೆ ಅನುಷ್ಕಾ ಅವರು BMW ಮತ್ತು Audi ನಂತಹ ಪ್ರತಿಷ್ಠಿತ ಬ್ರ್ಯಾಂಡ್‌ ಕಾರುಗಳನ್ನು ಹೊಂದಿದ್ದಾರೆ.

ಮುಂದಿನ ಸಿನಿಮಾ ವಿಚಾರಕ್ಕೆ ಬರುವುದಾದರೆ ಅನುಷ್ಕಾ ಅವರು ಕಥನಾರ್- ದಿ ವೈಲ್ಡ್ ಸಾರ್ಸರರ್​ ಹೆಸರಿನ ಮಲಯಾಳಂ ಚಿತ್ರಕ್ಕೆ ಬಣ್ಣ ಹಚ್ಚಿದ್ದಾರೆ. (ಏಜೆನ್ಸೀಸ್​)​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net