

ಬೆಂಗಳೂರು: ಸದ್ಯ ಕರೊನಾದಿಂದ ಇಡೀ ದೇಶವೇ ಲಾಕ್ಡೌನ್ ಆಗಿದೆ. ಉಳ್ಳವರು ಸ್ಟೇಹೋಮ್ ಪದ್ಧತಿ ಅನುಸರಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿ ಹಾಕುತ್ತಿದ್ದರೆ, ಇಲ್ಲದವರ ಸ್ಥಿತಿ ಅಯೋಮಯವಾಗಿದೆ. ಹಾಗಾಗಿ ಅವರ ನೆರವಿಗಾಗಿ ಸಂ ಸಂಸ್ಥೆಗಳು ಆಗಮಿಸುತ್ತಿವೆ. ಚಾರಿಟಿಗಳು ಶ್ರಮಿಸುತ್ತಿವೆ. ಸಿನಿಮಾ ಕಲಾವಿದರೂ ಕೈಲಾದ ಮಟ್ಟಿಗೆ ದಿನಸಿ ಪದಾರ್ಥಗಳನ್ನು ಹಂಚಿಕೆ ಮಾಡುತ್ತಿದ್ದಾರೆ. ಅದೇ ರೀತಿ ಈಗ ನಟಿ ಅಮೂಲ್ಯ ಸರದಿ.
ಹೌದು, ಭಾನುವಾರ ರಾಜರಾಜೇಶ್ವರಿ ನಗರದ ಬಳಿಯ ಆರೆಸ್ಸೆಸ್ ಕಚೇರಿಗೆ ತೆರಳಿದ ಅಮೂಲ್ಯ ಮತ್ತು ಪತಿ ಜಗದೀಶ್, ಅಕ್ಕಿ ವಿತರಿಸಿದ್ದಾರೆ. ಜತೆಗೆ ಮಾಸ್ಕ್ ಸಹ ನೀಡಿದ್ದಾರೆ. "ದೇಶದಲ್ಲಿ ಪ್ರವಾಹ ಭೂಕಂಪದಂತ ಪ್ರಕೃತಿ ವಿಕೋಪಗಳಾದಾಗ ಮತ್ತು ಈಗಿನ ಕರೊನಾ ವಿಪತ್ತಿನ ಸಂದರ್ಭದಲ್ಲಿಯೂ ಯಾವುದೇ ಜಾತಿ ಧರ್ಮ ಎಂದು ಭೇದ ಮಾಡದೆ, ಪ್ರತಿಯೊಬ್ಬರೂ ಭಾರತೀಯರು ಎಂದು ಸಹಾಯ ಮಾಡುವ ಆರೆಸ್ಸೆಸ್ ಸಂಟನೆಗೆ ನಮ್ಮ ಕಿರುಕಾಣಿಕೆ' ಎಂದು ಟ್ವಿಟರ್ನಲ್ಲಿ ಅಕ್ಕಿ ವಿತರಿಸುತ್ತಿರುವುದನ್ನು ಫೋಟೋ ಸಮೇತ ಪೋಸ್ಟ್ ಮಾಡಿಕೊಂಡಿದ್ದಾರೆ.