ವಿಶೇಷ ಚೇತನರ ಟಿ-10 ಕ್ರಿಕೆಟ್ ಟೂರ್ನಿ: ರಾಗಿಣಿ ರಾಯಭಾರಿ, ಬಿಗ್ ಬಾಸ್​ ಬಗ್ಗೆ ತುಪ್ಪದ ಬೆಡಗಿ ಏನಂದ್ರು ಗೊತ್ತಾ?

ragini
ragini
Published on

ಬೆಂಗಳೂರು: ಕರ್ನಾಟಕ ರಾಜ್ಯ ಫಿಜಿಕಲಿ ಚಾಲೆಂಜ್ಡ್ ಕ್ರಿಕೆಟ್ ಅಸೋಸಿಯೇಶನ್ ವತಿಯಿಂದ ಆಯೋಜಿಸುತ್ತಿರುವ ವಿಶೇಷ ಚೇತನರ ಕ್ರಿಕೆಟ್ ಟೂರ್ನಿಗೆ ನಟಿ ರಾಗಿಣಿ ದ್ವಿವೇದಿ ರಾಯಭಾರಿಯಾಗಿದ್ದಾರೆ.

ನೋಯ್ಡಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಈ ಪಂದ್ಯಾವಳಿಗಳು ನಡೆಯಲಿದ್ದು, ಮಾರ್ಚ್ 11ರಿಂದ ಆರಂಭಗೊಳ್ಳಲಿವೆ. ಒಟ್ಟು ಟೂರ್ನಿಯಲ್ಲಿ 28 ತಂಡಗಳು ಭಾಗವಹಿಸಲಿವೆ. ದೇಶದಲ್ಲೇ ಮೊದಲ ಬಾರಿಗೆ ವಿಶೇಷ ಚೇತನರ ಟಿ-10 ಪಂದ್ಯಾವಳಿ ನಡೆಯುತ್ತಿದೆ.

ಈ ಬಗ್ಗೆ ದಿಗ್ವಿಜಯ ನ್ಯೂಸ್ ಜೊತೆ ನಟಿ ರಾಗಿಣಿ ದ್ವಿವೇದಿ ಮಾತನಾಡಿ, ವಿಶೇಷ ಚೇತನರ ಕ್ರಿಕೆಟ್ ತಂಡಕ್ಕೆ ರಾಯಭಾರಿ ಆಗಿರೋದು ಖುಷಿ ಕೊಟ್ಟಿದೆ. ಯಾವಾಗಲೂ ನಾನು ಅವರ ಜೊತೆ ಇರುತ್ತೇನೆ. ಬಿಗ್ ಬಾಸ್ ಗೆ ನಾನು ಹೋಗಲ್ಲ. ಡ್ರಗ್ಸ್ ಕೇಸ್ ವಿಚಾರವಾಗಿ ನಾನು ಕಮೆಂಟ್ ಮಾಡಲ್ಲ ಎಂದರು.

ನನಗೆ ಅಭಿಮಾನಿಗಳಿಂದ ಪ್ರೀತಿ ಬಿಟ್ಟು ಏನು ಸಿಕ್ಕಿಲ್ಲ. ಅಭಿಮಾನಿಗಳು ಯಾವಾಗಲೂ ನನ್ನ ಜೊತೆ ಇರ್ತಾರೆ. ನಾನು ಏನು ಅನ್ನೋದನ್ನ ನಮ್ಮ ಜನರಿಗೆ ಗೊತ್ತಿದೆ. ಸಮಯ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದರು. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net