

ಬೆಂಗಳೂರು: ಫೋರ್ಬ್ಸ್ ಇಂಡಿಯಾ ಪಟ್ಟಿಯಲ್ಲಿ ಸದಾ ಬಾಲಿವುಡ್ನವರ ಹೆಸರೇ ಕಾಣಿಸುತ್ತಿತ್ತು. ಇದೀಗ ಮೊದಲ ಬಾರಿ ದಕ್ಷಿಣದ ಸ್ಟಾರ್ಗಳನ್ನೂ ನೋಡಬಹುದು. ಆ ಪಟ್ಟಿಯಲ್ಲಿ ಚಂದನವನದ ಯಶ್ ಸ್ಥಾನ ಪಡೆದಿರುವುದಲ್ಲದೆ, ಮುಖಪುಟದಲ್ಲೂ ಮಿಂಚಿದ್ದಾರೆ ಎಂಬುದು ವಿಶೇಷ. ಬಾಲಿವುಡ್ನಷ್ಟೇ ದಕ್ಷಿಣದ ಸಿನಿಮಾ ಕ್ಷೇತ್ರವೂ ಯಾವುದರಲ್ಲಿಯೂ ಕಡಿಮೆ ಇಲ್ಲ. ದೊಡ್ಡ ಬಜೆಟ್ನ ಸಿನಿಮಾ ನಿರ್ಮಾಣದಿಂದ ಹಿಡಿದು, ಬಾಕ್ಸ್ ಆಫೀಸ್ನಲ್ಲಿಯೂ ಅಷ್ಟೇ ದೊಡ್ಡ ಮಟ್ಟದ ಗಳಿಕೆ ಮಾಡುತ್ತಿವೆ. ಒಟಿಟಿ ವೇದಿಕೆಯಲ್ಲಿಯೂ ದಕ್ಷಿಣದ ಕೊಡುಗೆ ಗಣನೀಯ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಮೊದಲ ಸಲ ಫೋರ್ಬ್ಸ್, ದಕ್ಷಿಣದ ಸೆಲೆಬ್ರಿಟಿ ವಿಶೇಷ ಎಂಬ ಮ್ಯಾಗ್ಜೀನ್ ಬಿಡುಗಡೆ ಮಾಡಿದೆ.
ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡ, ಹಿಂದಿಯೇತರ ತಾರೆಗಳನ್ನು ಈ ಮ್ಯಾಗಜೀನ್ನಲ್ಲಿ ಕಾಣಬಹುದಾಗಿದೆ. ಯಶ್ ಮುಖಪುಟದಲ್ಲಿ ಸ್ಥಾನ ಪಡೆದರೆ, ನಯನತಾರಾ, ದುಲ್ಖರ್ ಸಲ್ಮಾನ್ ಸಹ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇನ್ನು ಕನ್ನಡದ ಮಟ್ಟಿಗೆ ಯಶ್ ಹೊರತುಪಡಿಸಿದರೆ ಈ ವರೆಗೆ ಯಾವ ನಟ, ನಟಿಯರಿಗೂ ಈ ಅವಕಾಶ ಸಿಕ್ಕಿಲ್ಲ.