ಸಾವಿರಾರು ಅಭಿಮಾನಿಗಳ ನಡುವೆ ತಡರಾತ್ರಿ ಬೃಹತ್​ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡ ನಟ ಯಶ್​

yash jan 07
Published on

ಬೆಂಗಳೂರು: ಖ್ಯಾತ ನಟ ಯಶ್​ ನಗರ ನಂದಿಲಿಂಕ್​ ಗ್ರೌಂಡ್ಸ್​ನಲ್ಲಿ ಹತ್ತು ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳ ಜೊತೆ ಮಧ್ಯರಾತ್ರಿಯಲ್ಲಿ ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿಕೊಂಡರು.

ನಟನಿಗಾಗಿ ಅಭಿಮಾನಿಗಳು ರಾಮ್​ಭವನ್​ ಸ್ವೀಟ್ಸ್​ನಲ್ಲಿ ತಯಾರಿಸಿದ್ದ 5705 ಕೆಜಿ ತೂಕದ ವಿಶೇಷ ಕೇಕ್​ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು.

ವಿಶ್ವದಾಖಲೆ ಬರೆದ ಈ ಅಪರೂಪದ ಕಾರ್ಯಕ್ರಮಕ್ಕೆ ಪತ್ನಿ ರಾಧಿಕಾ ಸಾಕ್ಷಿಯಾದರು.

ನಂದಿಲಿಂಕ್​ ಗ್ರೌಂಡ್​ ಆವರಣದಲ್ಲಿ 10 ಸಾವಿರ ಮಂದಿ ಅಭಿಮಾನಿಗಳು ಇದ್ದರೆ, ಹೊರಗಡೆ 6 ಸಾವಿರಕ್ಕೂ ಅಧಿಕ ಮಂದಿ ಅಭಿಮಾನಿಗಳು ಕಿಕ್ಕಿರಿದಿದ್ದರು. ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟರು.
ಆವರಣದೊಳಗೆ ಬಿಡುವಂತೆ ಪೊಲೀಸರ ಜೊತೆ ಅಭಿಮಾನಿಗಳು ವಾಗ್ವಾದಕ್ಕೆ ಇಳಿದಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net