ಮಲಯಾಳಂ ನಟಿ ಜತೆಗಿನ ಸಂಬಂಧವೇ ನಟ ವಿಜಯ್​ ಡಿವೋರ್ಸ್​ಗೆ ಕಾರಣ? ವೈರಲ್​ ಫೋಟೋ ಅಸಲಿಯತ್ತೇನು?

Vijay
Published on

ಚೆನ್ನೈ: ಕಲಾವಿದರ ವೈಯಕ್ತಿಕ ವಿಚಾರಗಳ ಬಗ್ಗೆ ವದಂತಿಗಳು ಹರಡುವುದು ಸರ್ವೇ ಸಾಮಾನ್ಯ ಎಂಬುದು ಎಲ್ಲರಿಗು ತಿಳಿದಿರುವ ಸಂಗತಿ. ಇದೀಗ ಕಾಲಿವುಡ್​ ಸೂಪರ್​ ಸ್ಟಾರ್​ ವಿಜಯ್​ ಅವರ ವೈವಾಹಿಕ ಜೀವನ ಕುರಿತ ಗಾಳಿ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಯಾವುದು ಆ ಸುದ್ದಿ ಅಂದರೆ, ವಿಜಯ್​ ಮತ್ತು ಅವರ ಪತ್ನಿ ಸಂಗೀತಾ ನಡುವೆ ಡಿವೋರ್ಸ್​ ಆಗಿದೆಯಂತೆ.

ವಿಕಿಪೀಡಿಯಾ ಮಾಹಿತಿಯನ್ನು ಎಡಿಟ್​ ಮಾಡಲಾದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವುದು ಈ ವದಂತಿಗೆ ಕಾರಣವಾಗಿದೆ. ಹರಿದಾಡುತ್ತಿರುವ ಫೋಟೋದಲ್ಲಿ ವಿಜಯ್​ ಅವರ ಪತ್ನಿ ಕಾಲಂ ಮುಂದೆ ಸಂಗೀತಾ ಅವರ ಹೆಸರನ್ನು ಬರೆಯಲಾಗಿದೆ. ಅಲ್ಲದೆ, ಬ್ರಾಕೆಟ್​ನಲ್ಲಿ 1999ರಲ್ಲಿ ಮದುವೆ, 2022ರಲ್ಲಿ ಡಿವೋರ್ಸ್​ ಅಂತಾ ಬರೆಯಲಾಗಿದೆ.

ದಂಪತಿ ಪರಸ್ಪರ ಒಪ್ಪಿಗೆಯಿಂದ ಬೇರ್ಪಟ್ಟಿದ್ದು, ವಿಚ್ಛೇದನಕ್ಕೆ ಮಲಯಾಳಿ ನಟಿಯೊಂದಿಗಿನ ವಿಜಯ್ ಸಂಬಂಧವೇ ಕಾರಣ ಎಂಬ ಗಾಸಿಪ್ ಹಬ್ಬಿದೆ.

ವಿಜಯ್ ಅವರ ಹೊಸ ಚಿತ್ರ ‘ವಾರಿಸು’ ಆಡಿಯೋ ಬಿಡುಗಡೆ ಕಾರ್ಯಕ್ರಮ ಮತ್ತು ಪ್ರಿಯಾ ಅಟ್ಲೀ ಅವರ ಚೊಚ್ಚಲ ಸೀಮಂತಕ್ಕೆ ವಿಜಯ್​ ಜೊತೆ ಸಂಗೀತಾ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಡಿವೋರ್ಸ್​ ವದಂತಿ ಹರಿದಾಡುತ್ತಿದೆ. ಆದರೆ, ಮಾಧ್ಯಮವೊಂದರ ವರದಿ ಪ್ರಕಾರ, ಇವೆಲ್ಲವೂ ಸುಳ್ಳು ಎಂದು ವಿಜಯ್ ಆಪ್ತ ಮೂಲಗಳು ತಿಳಿಸಿವೆ. ಸಂಗೀತಾ ಮತ್ತು ಅವರ ಮಕ್ಕಳು ಅಮೆರಿಕದಲ್ಲಿ ಇದ್ದುದರಿಂದ ವಿಜಯ್​ ಜೊತೆ ಬಂದಿರಲಿಲ್ಲ. ಸದ್ಯದಲ್ಲೇ ಕುಟುಂಬದೊಂದಿಗೆ ಇರಲು ವಿಜಯ್​ ಸಹ ಅಮೆರಿಕಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net