ಸೂರ್ಯ ರಾಜಕೀಯ ಪ್ರವೇಶಿಸುವ ವದಂತಿಗಳು ಹಿಂದೆಯೂ ಹಲವು ಬಾರಿ ಹರಿದಾಡಿತ್ತು. ಕಳೆದ ವರ್ಷ ಸೂರ್ಯ ಅವರ ಅಗರಂ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದ ಬಳಿಕ, ಸ್ಟಾರ್ ಹೀರೋ ರಾಜಕೀಯ ಪ್ರವೇಶಿಸುತ್ತಾರೆ ಎಂಬ ಸುದ್ದಿಗಳು ವ್ಯಾಪಕವಾಗಿ ಸದ್ದು ಮಾಡಿದವು. ಆದರೆ, ಇದನ್ನು ತಳ್ಳಿಹಾಕಿದ ಸೂರ್ಯ ಅವರ ಅಭಿಮಾನಿ ಸಂಘ, ವದಂತಿಗಳು ಆಧಾರರಹಿತ ಮತ್ತು ಸೂರ್ಯ ಅವರ ಆಲೋಚನೆಗಳಿಗೆ ವಿರುದ್ಧವಾಗಿವೆ ಎಂದಿತು. ಆದರೀಗ, ಮತ್ತೊಮ್ಮೆ ಸೂರ್ಯ ರಾಜಕೀಯ ವಿಷಯ ಹೊರಬಿದ್ದಿರುವುದಕ್ಕೆ ಯಾರೇನು ಹೇಳುತ್ತಾರೆ? ಎಂಬುದನ್ನು ಸ್ವತಃ ಸೂರ್ಯ ಅವರೇ ಇದಕ್ಕೆ ಪ್ರತಿಕ್ರಿಯೆ ನೀಡ್ತಾರಾ? ಎಂಬುದನ್ನು ಕಾದು ತಿಳಿಯಬೇಕಿದೆ,(ಏಜೆನ್ಸೀಸ್).