ಶಾಹಿದ್​ ಕಪೂರ್- ವಿಜಯ್​ ಸೇತುಪತಿ ಕಾಂಬಿನೇಷನ್​ ವೆಬ್​ಸಿರೀಸ್​ಗೆ ಶೀರ್ಷಿಕೆ ಅಂತಿಮ

Shahid
Published on

ಮುಂಬೈ: ಸೌತ್​ ಸ್ಟಾರ್ ವಿಜಯ್​ ಸೇತುಪತಿ ಮತ್ತು ಬಾಲಿವುಡ್​ ನಟ ಶಾಹೀದ್ ಕಪೂರ್​ ಇಬ್ಬರೂ ಒಟ್ಟಿಗೆ ತೆರೆಹಂಚಿಕೊಳ್ಳಲಿದ್ದಾರೆ. ಹಾಗೆಂದ ಮಾತ್ರಕ್ಕೆ ಇದ್ಯಾವುದೋ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದುಕೊಳ್ಳಬೇಡಿ. ಬದಲಿಗೆ ವೆಬ್​ಸಿರೀಸ್​ನಲ್ಲಿ ಇವರಿಬ್ಬರು ಮೊದಲ ಬಾರಿಗೆ ಎದುರಾಗಲಿದ್ದಾರೆ.

ಈಗಾಗಲೇ ಈ ಇಬ್ಬರು ಸ್ಟಾರ್ ನಟರು ನಟಿಸಲಿರುವುದು ಸುದ್ದಿಯಾಗಿತ್ತಾದರೂ, ಆ ವೆಬ್​ಸಿರೀಸ್​ನ ಶೀರ್ಷಿಕೆ ಏನಾಗಿರಲಿದೆ ಎಂಬುದು ಬಹಿರಂಗವಾಗಿರಲಿಲ್ಲ. ಇದೀಗ ಆ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ವೆಬ್​ಸರಣಿಗೆ ‘ಗವಾರ್’ ಎಂಬ ಶೀರ್ಷಿಕೆ ಇಡಲಾಗಿದೆ.

ಈಗಾಗಲೇ ಹಿಂದಿಯಲ್ಲಿ ಗೋ ಗೋವಾ ಗಾನ್ ಸಿನಿಮಾ ನಿರ್ದೇಶನ ಮಾಡಿದ್ದ ರಾಜ್ ನಿಂಬಿಮೋರು ಮತ್ತು ಕೃಷ್ಣ ಡಿಕೆ ಈ ವೆಬ್​ಸರಣಿಯನ್ನು ನಿರ್ದೇಶನ ಮಾಡಲಿದ್ದಾರೆ. ಆ್ಯಕ್ಷನ್​ ಥ್ರಿಲ್ಲರ್​ ಶೈಲಿಯ ವೆಬ್​ಸರಣಿ ಜನವರಿಯಿಂದ ಶುರುವಾಗಲಿದೆ.

ಮುಂಬೈ ಮತ್ತು ಗೋವಾದಲ್ಲಿ ಸಿರೀಸ್​ನ ಬಹುತೇಕ ಶೂಟಿಂಗ್​ ನಡೆಯಲಿದೆ. 8 ಅಥವಾ 10 ಏಪಿಸೋಡ್​ಗಳಿರುವ ಸರಣಿಯ ಚಿತ್ರೀಕರಣ ಏಪ್ರಿಲ್​ ವೇಳೆಗೆ ಮುಗಿಸುವ ಪ್ರಾನ್​ ತಂಡದ್ದು. ಇದಾದ ಬಳಿಕ ಯೋಧ ಚಿತ್ರದಲ್ಲಿಯೂ ಶಾಹಿದ್​ ನಟಿಸಲಿದ್ದಾರೆ. ಇತ್ತ ಹಲವು ತಮಿಳು ಪ್ರಾಜೆಕ್ಟ್​ಗಳಲ್ಲಿ ಸೇತುಪತಿ ತೊಡಗಿಸಿಕೊಳ್ಳಲಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net