'ಆಶಿಖಿ' ಖ್ಯಾತಿಯ ನಟ ರಾಹುಲ್​ ರಾಯ್​ಗೆ ಬ್ರೇನ್​ ಸ್ಟ್ರೋಕ್​

collage
Published on

ಮುಂಬೈ: 'ಆಶಿಖಿ' ಖ್ಯಾತಿಯ ನಟ ರಾಹುಲ್ ರಾಯ್​ ಶೂಟಿಂಗ್ ಸಮಯದಲ್ಲೇ ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಹೊಸ ಸಿನಿಮಾ ಎಲ್​ಎಸಿ- ಲಿವ್​ ದ ಬ್ಯಾಟಲ್ ಇನ್​ ಕಾರ್ಗಿಲ್ ಸಿನಿಮಾದ ಶೂಟಿಂಗ್ ವೇಳೆ ಬ್ರೇನ್​ ಸ್ಟ್ರೋಕ್​ ಸಂಭವಿಸಿದೆ.

ಚಳಿ ನಡುವೆ ಕಾರ್ಗಿಲ್​ನಲ್ಲಿ ಶೂಟಿಂಗ್ ನಡೆಯುತ್ತಿದ್ದು, ಪ್ರತಿಕೂಲ ವಾತಾವರಣದಿಂದಾಗಿ ಅವರು ಬ್ರೇನ್​ ಸ್ಟ್ರೋಕ್​ಗೆ ಒಳಗಾಗಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಇವರು ಮುಂಬೈಗೆ ಮರಳಿದ್ದು, ಮತ್ತೆ ಸ್ಟ್ರೋಕ್​ ಉಂಟಾದ್ದರಿಂದ ಎರಡು ದಿನಗಳ ಹಿಂದೆಯೇ ಅವರು ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ.

ಈ ವಿಷಯನ್ನು ರಾಹುಲ್ ರಾಯ್ ಸೋದರ ರೋಮಿರ್ ಸೇನ್​ ಖಚಿತಪಡಿಸಿದ್ದು, ರಾಹುಲ್ ತೀವ್ರ ನಿಗಾ ವಿಭಾಗದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಏನೂ ಚಿಂತೆ ಬೇಡ ಎಂಬುದಾಗಿ ಹೇಳಿದ್ದಾರೆ. ರಾಹುಲ್​ಗೆ 52 ವರ್ಷವಾಗಿದ್ದು, ಅವರನ್ನು ಕೋವಿಡ್​-19 ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿ ನೆಗೆಟಿವ್ ಎಂಬುದನ್ನು ತಿಳಿಸಿದೆ ಎಂದೂ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net