

ಬೆಂಗಳೂರು: ಪ್ರೀತಿಪಾತ್ರರು ಜೊತೆಗಿದ್ದರೆ ಬೇಸರ ಎಂಬುದೇ ಇರುವುದಿಲ್ಲ. ಸಿನಿಮಾ ನಟಿಯುರು ಎಂದ ಮೇಲೆ ಅಂಥ ಪ್ರೀತಿಪಾತ್ರರು ಸಾಮಾನ್ಯವಾಗಿ ಇದ್ದೇ ಇರುತ್ತಾರೆ. ಕೆಲವರು ಬಹಿರಂಗವಾಗಿ ಹೇಳಿಕೊಂಡೂ ಇರುತ್ತಾರೆ. ಅಂಥದ್ದೇ ಒಂದು ಕೆಲಸವನ್ನು ಜನಪ್ರಿಯ ನಟಿಯೊಬ್ಬರು ಮಾಡಿದ್ದು, ಅವರ ಅಭಿಮಾನಿಗಳ ಗಮನ ಸೆಳೆದಿದೆ.
ಬಾಯ್ಫ್ರೆಂಡ್ ಜತೆಗಿರುವ ಫೋಟೋ ಹಂಚಿಕೊಂಡಿರುವ ಆ ನಟಿ, ನೀನು ಜೊತೆಗಿದ್ದರೆ ಒಂದು ಕ್ಷಣವೂ ಬೇಸರವೆಂಬುದು ಹತ್ತಿರ ಸುಳಿಯುವುದಿಲ್ಲ ಎಂಬರ್ಥದಲ್ಲಿ ಕ್ಯಾಪ್ಷನ್ವೊಂದನ್ನು ಹಾಕಿಕೊಂಡಿದ್ದಾರೆ. ವಿಶೇಷವೆಂದರೆ ನಟಿಯ ಪೋಸ್ಟ್ಗೆ ಆ ಬಾಯ್ಫ್ರೆಂಡ್ ಕೂಡ ಪ್ರತಿಕ್ರಿಯಿಸಿದ್ದು, 'ನಾನು ಒಪ್ಪುತ್ತೇನೆ' ಎಂಬುದಾಗಿ ಕಮೆಂಟ್ ಮಾಡಿದ್ದಾರೆ.
ಅಂದಹಾಗೆ ಬಾಯ್ಫ್ರೆಂಡ್ ಬಗ್ಗೆ ಹೀಗೊಂದು ಪೋಸ್ಟ್ ಹಾಕಿಕೊಂಡ ನಟಿ ಮಲೈಕಾ ಅರೋರಾ. ಬಾಯ್ಫ್ರೆಂಡ್ ಅರ್ಜುನ್ ಕಪೂರ್ ಜತೆಗಿರುವ ಫೋಟೋವೊಂದನ್ನು ಭಾನುವಾರ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿಕೊಂಡಿರುವ ಇವರು, ಅರ್ಜುನ್ ಜತೆಗಿದ್ದರೆ ಒಂದು ಕ್ಷಣವೂ ಬೇಸರವೆಂಬುದು ಹತ್ತಿರಕ್ಕೆ ಸುಳಿಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.
ಪೋಸ್ಟ್ ನೋಡಲು ಇಲ್ಲಿ ಕ್ಲಿಕ್ ಮಾಡಿ: https://www.instagram.com/p/CIKxB3DhcEo/