14 ವರ್ಷ ಕಾಯುವಿಕೆಗೆ ಅಂತ್ಯ; ಬಹುಕಾಲದ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್..Irumudi

14 ವರ್ಷ ಕಾಯುವಿಕೆಗೆ ಅಂತ್ಯ;  ಬಹುಕಾಲದ ಗೆಳೆಯನೊಂದಿಗೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್..Irumudi
Published on: 
  • ಹಸೆಮಣೆ ಏರಿದ ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್​.

  • 14 ವರ್ಷದಿಂದ ಪ್ರೀತಿಯಲ್ಲಿದ್ದ ಹುಡುಗನ ಜೊತೆಗೆ ಕೊನೆಗೂ ಮದುವೆ.

  • ಕುಟುಂಬಸ್ಥರು, ಸ್ನೇಹಿತರ ಸಮ್ಮುಖದಲ್ಲಿ ಸರಳವಾಗಿ ವಿವಾಹವಾದ ತಿರುಚಿತ್ರಂಬಲಂನ ನಟಿ.

Priya Bhavani Shankar marries longtime boyfriend : ತಿರುಚಿತ್ರಂಬಲಂ, ಇರುಮುಡಿ, ಝೀಬ್ರಾ, ಯಾನೈ, ಕಡೈ ಕುಟ್ಟಿ ಸಿಂಗಂ ಸೇರಿದಂತೆ ಕಾಲಿವುಡ್​​, ಟಾಲಿವುಡ್​ನಲ್ಲಿ ಮಿಂಚಿರುವ ನಟಿ ಪ್ರಿಯಾ ಭವಾನಿ ಶಂಕರ್​​ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರ ಬಹುಕಾಲದ ಗೆಳೆಯ ರಾಜ್​ ವೇಲ್​ ರಾಜ್ ಅವರೊಂದಿಗೆ ಹಸಮಣೆ ಏರಿದ್ದು, ಸೋಶಿಯಲ್​ ಮೀಡಿಯಾದಲ್ಲಿ ಮದುವೆ ಸಂಭ್ರಮದ ವಿಡಿಯೋಗಳು ಭಾರಿ ವೈರಲ್ ಆಗಿದೆ.

ನವ ಜೋಡಿಯ ವಿಡಿಯೋ ವೈರಲ್

ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪ್ರಕಾರ, ಕಾಲಿವುಡ್​ ನಟಿ ಪ್ರಿಯಾ ಭವಾನಿ ಶಂಕರ್​​​​​ ಕೆಂಪು ಸೀರೆ, ಹರಿಬಿಟ್ಟ ಕೂದಲಿಗೆ ಒಂದು ಚಿಕ್ಕ ಬನ್, ಸಿಂಪಲ್​ ಗೋಲ್ಡನ್​ ಜ್ಯುವೆಲ್ಲರಿ ಧರಿಸಿ ಮಿಂಚುತ್ತಿದ್ದರೆ, ರಾಜ್​ವೇಲ್​ ರಾಜ್​ ಅವರು ವರನಂತೆ ಬಿಳಿ ಧೋತಿ, ಕ್ರೀಮ್​ ಬಣ್ಣದ ಕುರ್ತಾ ಧರಿಸಿ ಮಿಂಚಿದ್ದಾರೆ. ಇಬ್ಬರನ್ನು ಅವರ ಗೆಳೆಯ-ಗೆಳೆತಿಯರು ಮಂಟಪಕ್ಕೆ ಕರೆದುಕೊಂಡು ಬರುತ್ತಿರುವ ದೃಶ್ಯ, ತಾಳಿ ಕಟ್ಟುತ್ತಿರುವ ದೃಶ್ಯವು ವೈರಲ್ ಆಗಿದೆ.

Also Read
‘ಇರುಮುಡಿ’ ಹೊತ್ತ ರವಿತೇಜ : 77ನೇ ಸಿನಿಮಾದಲ್ಲಿ ‘ಸ್ವಾಮಿಯೇ ಶರಣಂ ಅಯ್ಯಪ್ಪ’ ಎಂದ ಟಾಲಿವುಡ್ ನಟ
14 ವರ್ಷ ಕಾಯುವಿಕೆಗೆ ಅಂತ್ಯ;  ಬಹುಕಾಲದ ಗೆಳೆಯನೊಂದಿಗೆ  ದಾಂಪತ್ಯ ಜೀವನಕ್ಕೆ ಕಾಲಿಟ್ಟ ಇರುಮುಡಿ ನಟಿ ಪ್ರಿಯಾ ಭವಾನಿ ಶಂಕರ್..Irumudi

14 ವರ್ಷದಿಂದ ಪ್ರೀತಿಯಲ್ಲಿದ್ದ ಪ್ರಿಯಾ

ಇರುಮುಡಿ ಖ್ಯಾತಿಯ ನಟಿ ಪ್ರಿಯಾ ಭವಾನಿ ಶಂಕರ್​ ಮತ್ತು ರಾಜ್​​ವೇಲ್ ರಾಜ್ ಸಂಬಂಧ ಇಂದು ನಿನ್ನೆಯದಲ್ಲ. ಕಾಲೇಜು ದಿನಗಳಿಂದ ಅಂದರೆ, 14 ವರ್ಷದಿಂದ ಇಬ್ಬರು ಪ್ರೀತಿಯಲ್ಲಿದ್ದರು. 2022ರಲ್ಲಿ ಇಬ್ಬರು ಒಟ್ಟಾಗಿ ಫ್ಲಾಟ್ ಖರೀದಿ ಮಾಡಿದ್ದು, ಭಾರಿ ಸದ್ದು ಮಾಡಿತ್ತು. ಈ ಒತ್ತಡ ಮತ್ತು ನಾನಾ ಚರ್ಚೆಯ ಮಧ್ಯೆಯೂ ಈ ನವ ಜೋಡಿ ಮದುವೆ ಬಗ್ಗೆ ನಿರ್ಧರಿಸಿರಲಿಲ್ಲ.

ಮುಂದಿನ ಸಿನಿಮಾ ಯಾವುದು?

ಪ್ರಿಯಾ ಭವಾನಿ ಶಂಕರ್​ ಮತ್ತು ರಾಜ್​​ವೇಲ್ ರಾಜ್ ಮದುವೆ ನ.11ರಂದು ಸರಳವಾಗಿ, ಕುಟುಂಬಸ್ಥರು, ಗೆಳೆಯ-ಗೆಳತಿಯರ ಸಮ್ಮುಖದಲ್ಲಿ ಮಾತ್ರ ನಡೆದಿದೆ. ಇಲ್ಲಿ ಯಾವುದೇ ಸೆಲಬ್ರೆಟಿಗಳ ಅಬ್ಬರವಿರಲಿಲ್ಲ. ಜೊತೆಗೆ ಇತ್ತೀಚೆಗೆ ಹಿಟ್ ಕಂಡ ಇರುಮುಡಿ ಸಿನಿಮಾ ತಂಡವು ಸಹ ಇರಲಿಲ್ಲ.

ನಿರೂಪಕಿಯಾಗಿ ಸ್ಕ್ರೀನ್​​ ಮೇಲೆ ಕಾಣಿಸಿಕೊಂಡ ಪ್ರಿಯಾ ಭವಾನಿ ಶಂಕರ್​..ನಂತರ ನಟಿಯಾಗಿ ಕಾಲಿವುಡ್​ನಲ್ಲಿ ಮಿಂಚಿದರು. ಟಾಲಿವುಡ್​ನಲ್ಲಿ ಮನ್ನಣೆ ಪಡೆದುಕೊಂಡರು. ಹಾಟ್​ಸ್ಪಾಟ್​ 2 ಪ್ರಿಯಾ ಭವಾನಿ ಶಂಕರ್ ನಟಿಸಿದ ಕೊನೆಯ ತಮಿಳು ಸಿನಿಮಾ. ಶಂಕರ್​ ನಿರ್ದೇಶನದ ಕಮಲ್​ ಹಾಸನ್​ ಮತ್ತು ಸಿಧಾರ್ಥ್​ ನಟನೆಯ ಇಂಡಿಯನ್​ ಫ್ರಾಂಚೈಸಿಯಲ್ಲಿ ಪ್ರಿಯಾ ನಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ, (ಏಜೆನ್ಸೀಸ್).