ಅಪಘಾತದಲ್ಲಿ ಸಂಚಾರಿ ವಿಜಯ್ ಸಾವಾಗುತ್ತಿದ್ದಂತೆ, ಈ ಶಪಥ ಮಾಡಿದ್ರು ‘ಒಳ್ಳೆ ಹುಡುಗ’ ಪ್ರಥಮ್!

Sanchari Vijay
Published on

ಬೆಂಗಳೂರು: ಸಂಚಾರಿ ವಿಜಯ್ ಮಾಡಿದ ಒಂದೇ ಒಂದು ಸಣ್ಣ ಎಡವಟ್ಟು ಅವರನ್ನು ಸಾವಿನ ಮನೆಗೆ ಕರೆದೊಯ್ದಿದೆ. ಒಂದು ವೇಳೆ ಅಪಘಾತದ ವೇಳೆಯಲ್ಲಿ ಅವರು ತಲೆಗೆ ಹೆಲ್ಮೆಟ್ ಧರಿಸಿದ್ದರೆ, ಬದುಕುಳಿಯುವ ಸಾಧ್ಯತೆಗಳು ಹೆಚ್ಚಿದ್ದವು. ಆದರೆ, ಹೆಲ್ಮೆಟ್ ಧರಿಸದೆ, ಪ್ರಯಾಣ ಮಾಡಿ ಜೀವವನ್ನೇ ಕಳೆದುಕೊಂಡಿದ್ದಾರೆ. ಇದೀಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ನಟ ಪ್ರಥಮ್ ಹೊಸದಾದ ನಿರ್ಧಾರವನ್ನೇ ತೆಗೆದುಕೊಂಡಿದ್ದಾರೆ.

ಇಷ್ಟು ದಿನ ಹೆಲ್ಮೆಟ್ ಇಲ್ಲದೆ, ಒನ್ ವೇ ರಸ್ತೆಯಲ್ಲಿ ಬೇಕಾಬಿಟ್ಟಿಯಾಗಿ ಪ್ರಥಮ್ ಓಡಾಡುತ್ತಿದ್ದರಂತೆ. ಇನ್ಮುಂದೆ ಹಾಗೆಲ್ಲ ಓಡಾಡದೆ, ಬೈಕ್ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ವಾಹನ ಚಲಾವಣೆ ಮಾಡುತ್ತಾರಂತೆ. ಈ ಸಂಬಂಧ ಟ್ವಿಟರ್​ನಲ್ಲಿ ಪೋಸ್ಟ್​ ಹಾಕಿ ಇತರರಿಗೂ ಈ ನಿಯಮವನ್ನು ಪಾಲಿಸಿ ಎಂದಿದ್ದಾರೆ.

‘ವಿಜಯ್ ಅವರ ಸಾವಾದ ಬಳಿಕ ನನ್ನಲ್ಲಾದ ಬದಲಾವಣೆ! ನಾನು ಸಾಮಾನ್ಯವಾಗಿ ಸಂಚಾರ ನಿಯಮವನ್ನು ಪಾಲಿಸುತ್ತಿದ್ದೆ. ಇನ್ಮೇಲೆ ಕಡ್ಡಾಯವಾಗಿ ಪಾಲಿಸ್ತೀನಿ. ದ್ವಿಚಕ್ರ ವಾಹನ ಏರಿ ಎಲ್ಲದರಲ್ಲಿಯೂ ಓಡಾಡ್ತಿರ್ತೀನಿ. ಒನ್ ವೇ, ಓವರ್ ಸ್ಪೀಡ್ ಇರಲ್ಲ. ಹೆಲ್ಮೆಟ್ ಮಿಸ್ಸಿಲ್ಲ. ಯಾರು ಈ ಸಮಯದಲ್ಲಿ ಹೇಳ್ತಾರೋ ಇಲ್ವೋ, ನಾನು ಪಾಲಿಸೋದ್ರಿಂದ ಹೇಳ್ತೀನಿ. ದಯಮಾಡಿ ಹೆಲ್ಮೆಟ್ ಮಿಸ್ ಮಾಡಬೇಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net