ವಿದೇಶದಿಂದ ಶೂಟಿಂಗ್​ ಮುಗಿಸಿ ಮರಳಿದ ನಟ ಪ್ರಭಾಸ್​ಗೆ ಮನೆಯಲ್ಲೇ ದಿಗ್ಬಂಧನ

Prabhas 21 Dec 19
Published on

ಹೈದರಾಬಾದ್​: ವಿದೇಶದಲ್ಲಿ ಶೂಟಿಂಗ್​ ಮುಗಿಸಿ ಹೈದರಾಬಾದ್​ಗೆ ಮರಳಿರುವ ಟಾಲಿವುಡ್ ಸೂಪರ್​ಸ್ಟಾರ್​​ ಪ್ರಭಾಸ್​ ತಮ್ಮ ಮನೆಯಲ್ಲಿಯೇ ದಿಗ್ಬಂಧನ ವಿಧಿಸಿಕೊಂಡಿರುವುದಾಗಿ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿರುವ ಪ್ರಭಾಸ್​, ವಿದೇಶದಲ್ಲಿ ಶೂಟಿಂಗ್​ ಮುಗಿಸಿ ಸುರಕ್ಷಿತವಾಗಿ ಮರಳಿದ್ದೇನೆ. ಕೋವಿಡ್​ -19 ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ನನ್ನಷ್ಟಕ್ಕೆ ನಾನು ದಿಗ್ಬಂಧನ ವಿಧಿಸಿಕೊಳ್ಳಲು ನಿರ್ಧರಿಸಿದ್ದೇನೆ. ನೀವು ಕೂಡ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತೀರಾ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.

ಅಂದಹಾಗೆ ಪ್ರಭಾಸ್​ ತಮ್ಮ ಮುಂದಿನ ಚಿತ್ರಕ್ಕಾಗಿ ಜಾರ್ಜಿಯಾ ದೇಶಕ್ಕೆ ತೆರಳಿದ್ದರು. ಇವರೊಂದಿಗೆ ನಟಿ ಪೂಜಾ ಹೆಗ್ಡೆ ಮತ್ತು ಚಿತ್ರದ ನಿರ್ದೇಶಕರು ಸೇರಿದಂತೆ ಕೆಲ ಸಿಬ್ಬಂದಿ ತೆರಳಿದ್ದರು ಎಂಬ ಮಾಹಿತಿ ಇದೆ. ಮಾರ್ಚ್​ 18ರಂದು ವಿದೇಶದಿಂದ ಚಿತ್ರತಂಡ ಮರಳಿತ್ತು. ಜಾನ್​ ಹೆಸರಿನ ಚಿತ್ರದ ಶೂಟಿಂಗ್​ ತೆರಳಿದ್ದರು.

ಪೂಜಾ ಹಗ್ಡೆ ಕೂಡ ಮುಖಕ್ಕೆ ಮಾಸ್ಕ್​ ಧರಿಸಿರುವ ಫೋಟೋವನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ. ಮನೆಯಲ್ಲಿ ದಿಗ್ಬಂಧನ ವಿಧಿಸಿಕೊಳ್ಳಲು ಇದು ಸೂಕ್ತ ಸಮಯ ಎಂದು ಬರೆದುಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net