More

    ಕರೊನಾ ವೈರಸ್ ಲಕ್ಷಣಗಳು 14 ದಿನಗಳಲ್ಲೇ ಕಾಣಿಸಿಕೊಳ್ಳಬೇಕೆಂದೇನೂ ಇಲ್ಲ..17 ದಿನಗಳ ಬಳಿಕವೂ ಪತ್ತೆಯಾಗಬಹುದು..ಎಚ್ಚರ ಇರಲಿ…!

    ಕರೊನಾ ವೈರಸ್ ಸೋಂಕಿನ ಲಕ್ಷಣಗಳು ಎಲ್ಲರಲ್ಲೂ ಒಂದೇ ತೆರನಾಗಿ ಗೋಚರಿಸುತ್ತಿಲ್ಲ. ಸದ್ಯ ವಿದೇಶದಿಂದ ಬಂದವರಿಗೆ, ಅವರ ಸಂಪರ್ಕಕ್ಕೆ ಹೋದವರಿಗೆ 14 ದಿನಗಳ ಕಾಲ ಪ್ರತ್ಯೇಕವಾಗಿರಿ ಎಂದು ಸೂಚಿಸಲಾಗುತ್ತಿದೆ. ಅಂದರೆ ಕರೊನಾ ಸೋಂಕು ತಗುಲಿದ್ದರೆ ಆ ಎರಡು ವಾರಗಳ ಒಳಗೆ ಲಕ್ಷಣ ಕಾಣಿಸಿಕೊಳ್ಳುತ್ತದೆ ಎಂಬುದು ವೈದ್ಯರ ಅನಿಸಿಕೆಯಾಗಿತ್ತು.

    ಆದರೆ ಅಧ್ಯಯನವೊಂದರ ಪ್ರಕಾರ ಎಲ್ಲರಿಗೂ 14 ದಿನಗಳಲ್ಲೇ ಲಕ್ಷಣಗಳು ಕಾಣಿಸುತ್ತಿಲ್ಲ. ಕೆಲವರಿಗೆ ತಡವಾಗಿ ಕರೊನಾ ಲಕ್ಷಣಗಳು ಗೋಚರಿಸುತ್ತಿವೆ. ಅವರಿಗೆ ಕರೊನಾ ಸೋಂಕು ತಗುಲಿದೆಯೋ, ಇಲ್ಲವೋ ಎಂಬುದು ಗೊತ್ತಾಗಲು 14 ದಿನಗಳಿಗಿಂತಲೂ ಜಾಸ್ತಿ ಸಮಯ ಬೇಕಾಗುತ್ತದೆ ಎಂದು ಅಧ್ಯಯನದ ವರದಿ ತಿಳಿಸಿದೆ.

    ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಸೋಂಕು ನಿಯಂತ್ರಣ ಮತ್ತು ಆಸ್ಪತ್ರೆ ಸಾಂಕ್ರಾಮಿಕ ರೋಗಶಾಸ್ತ್ರದ ಜರ್ನಲ್​ನಲ್ಲಿ ಈ ಅಧ್ಯಯನದ ವರದಿಯನ್ನು ನೀಡಲಾಗಿದೆ. ಜನವರಿ 20 ರಿಂದ ಫೆಬ್ರವರಿ 12ರವರೆಗೆ ಒಟ್ಟು 175 ಜನರನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಕೆಲವರಿಗೆ 14 ದಿನಗಳ ಕ್ವಾರಂಟೈನ್​ ಸಾಕಾಯಿತು. ಆದರೆ ಇನ್ನೂ ಕೆಲವರಿಗೆ ಆ ಅವಧಿಯಲ್ಲಿ ಲಕ್ಷಣ ಗೋಚರವಾಗದೆ, ಇನ್ನೂ ಹೆಚ್ಚಿನ ಸಮಯ ಬೇಕಾಯಿತು ಎಂದು ವರದಿ ತಿಳಿಸಿದೆ.

    ಈ ಅಧ್ಯಯನದಲ್ಲಿ ಮಧ್ಯವಯಸ್ಕರನ್ನೇ ಹೆಚ್ಚಾಗಿ ತಪಾಸಣೆಗೆ ಒಳಪಡಿಸಲಾಗಿತ್ತು. ಅವರಲ್ಲಿ ಸುಮಾರು ಶೇ.59.8 ಮಂದಿ ಕರೊನಾ ವೈರಸ್ ಉಗಮ ಸ್ಥಾನವಾದ ಚೀನಾದ ಹುಬೈ ಪ್ರಾಂತ್ಯಕ್ಕೆ ಪ್ರಯಾಣ ಮಾಡಿದವರಾಗಿದ್ದರು. ಉಳಿದವರು ಹೀಗೆ ಸೋಂಕು ಪೀಡಿತರ ಸಂಪರ್ಕಕ್ಕೆ ಹೋಗಿ ವೈರಸ್ ತಗುಲಿದವರು. ಅವರೆಲ್ಲ ಸ್ಥಳೀಯರು. ಈ ಎರಡೂ ಗುಂಪನ್ನೂ ಅಧ್ಯಯನ ಮಾಡಿದಾಗ ಅವರಲ್ಲಿ ಕಾಯಿಲೆಗಳ ಲಕ್ಷಣಗಳು ಒಂದೇ ಇದ್ದವು. ಜ್ವರ, ಕೆಮ್ಮುಗಳಿಂದ ಬಳಲುತ್ತಿದ್ದರು.

    ಹುಬೈಗೆ ಹೋಗಿ ಬಂದ ಶೇ.95 ಮಂದಿಯಲ್ಲಿ ಕರೊನಾ ಲಕ್ಷಣಗಳು ಒಂದರಿಂದ ಮೂರುದಿನಗಳಲ್ಲಿ ಕಾಣಿಸಿಕೊಂಡಿತು. ಆದರೆ ಇವರ ಸಂಪರ್ಕಕ್ಕೆ ಹೋಗಿ ವೈರಸ್ ತಗುಲಿಸಿಕೊಂಡ ಸ್ಥಳೀಯರಲ್ಲಿ ಕರೋನಾ ಲಕ್ಷಣಗಳು ಕಾಣಿಸಿಕೊಳ್ಳಲು ತಡವಾಯಿತು. ಶೇ.95ರಷ್ಟು ಮಂದಿಗೆ ಕರೊನಾ ಇರವುದು ಪತ್ತೆಯಾಗಲು 12. 17ದಿನಗಳು ಬೇಕಾಯಿತು ಎಂದು ಅಧ್ಯಯನ ಸಾಬೀತು ಪಡಿಸಿದೆ. ಅಂದರೆ ಸರಾಸರಿ ಕ್ವಾರೆಂಟೈನ್ ಅವಧಿ 14.6ರಷ್ಟು.

    ಹಾಗಾಗಿ ಈಗ ಪ್ರತ್ಯೇಕವಾಗಿರಲು ನಿಗದಿ ಪಡಿಸಿದ 14 ದಿನ ಅಂದರೆ ಎರಡು ವಾರಗಳು ಸೋಂಕು ಪತ್ತೆಗೆ ಸಾಕಾಗುವುದಿಲ್ಲ ಎನ್ನಲಾಗಿದೆ. ಈ ಅವಧಿಯನ್ನು ಇನ್ನೂ ವಿಸ್ತರಿಸಿಕೊಳ್ಳುವುದು ಒಳಿತು ಎಂದು ಅಧ್ಯಯನ ಎಚ್ಚರಿಸಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts