ನಟ ಕೋಮಲ್​ಗೆ '2020' ಉರುಳು!

Komal
Published on

ಬೆಂಗಳೂರು: ಹಾಸ್ಯದ ಹಳಿಗೆ ಮರಳಿರುವ ಕೋಮಲ್ ‘2020’ ಶೀರ್ಷಿಕೆಯ ಸಿನಿಮಾ ಮಾಡುತ್ತಿರುವುದು ಗೊತ್ತಿರುವ ವಿಚಾರ. ಆದರೆ, ಆ ಚಿತ್ರದಲ್ಲಿ ಅವರ ಅವತಾರ ಹೇಗಿರಲಿದೆ ಎಂಬ ಬಗ್ಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ. ಇದೀಗ ಭಾನುವಾರ ಅವರ ಬರ್ತ್​ಡೇ ನಿಮಿತ್ತ, ‘2020’ ಚಿತ್ರತಂಡ ಫಸ್ಟ್​ಲುಕ್ ಬಿಡುಗಡೆ ಮಾಡಿದೆ. ಶೀರ್ಷಿಕೆಯೇ ಹೇಳುವಂತೆ ಲಾಕ್​ಡೌನ್ ಸಂದರ್ಭವನ್ನೇ ಪ್ರಧಾನವಾಗಿರಿಸಿಕೊಂಡು ಈ ಚಿತ್ರ ನಿರ್ದೇಶಿಸುತ್ತಿದ್ದಾರೆ ಕೆ.ಎಲ್. ರಾಜಶೇಖರ್. ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಬ್ಯಾನರ್​ನಲ್ಲಿ ನಿರ್ವಣವಾಗುತ್ತಿರುವ ಈ ಚಿತ್ರಕ್ಕೆ ಟಿ.ಆರ್ ಚಂದ್ರಶೇಖರ್ ಬಂಡವಾಳ ಹೂಡುತ್ತಿದ್ದಾರೆ. ಸಂಭಾಷಣೆಕಾರರಾಗಿ ಗುರುತಿಸಿಕೊಂಡಿದ್ದ ರಾಜಶೇಖರ್, ಈ ಚಿತ್ರದ ಮೂಲಕ ಚೊಚ್ಚಲ ನಿರ್ದೇಶನಕ್ಕೆ ಇಳಿದಿದ್ದಾರೆ.

‘ಶೇ.99 ಹಾಸ್ಯ, ಕೇವಲ ಶೇ. 1 ಭಾಗ ಎಮೋಷನ್ಸ್ ಈ ಚಿತ್ರದಲ್ಲಿ ಇರಲಿದೆ. ಲಾಕ್​ಡೌನ್ ವೇಳೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಸಮಸ್ಯೆ ಎದುರಾಗಿತ್ತು. ಸಿನಿಮಾದಲ್ಲಿ ನಮ್ಮ ನಾಯಕನಿಗೆ ಏನೆಲ್ಲ ಸಮಸ್ಯೆಗಳು ಎದುರಾಗುತ್ತವೆ. ಅದರಿಂದ ಆತ ಹೊರಬರುವುದು ಹೇಗೆ ಎಂಬುದೇ ಸಿನಿಮಾದ ಕಥೆ. ಈಗಾಗಲೇ ಚಿತ್ರದ ಶೇ. 40ರಷ್ಟು ಭಾಗದ ಶೂಟಿಂಗ್ ಸಹ ಮುಗಿದಿದೆ’ ಎನ್ನುತ್ತಾರೆ ನಿರ್ದೇಶಕ ರಾಜಶೇಖರ್. ಕೋಮಲ್​ಗೆ ನಾಯಕಿಯಾಗಿ ಧನ್ಯಾ ಬಾಲಕೃಷ್ಣ ನಟಿಸುತ್ತಿದ್ದು, ಇನ್ನೂ ಹಲವು ಹಾಸ್ಯ ನಟರು ಚಿತ್ರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net