ಕೋಮಲ್​ ಹೊಸ ಸಿನಿಮಾ ಹೆಸರು 2020; ಹಳೇ ಕಾಮಿಡಿ ಲಯಕ್ಕೆ ಮರಳಿದ ನಟ

hqdefault
Published on

ಬೆಂಗಳೂರು: ಕೋಮಲ್ ಕುಮಾರ್ ಮತ್ತೆ ಕಾಮಿಡಿ ಅಲೆಯ ಜತೆಗೆ ಆಗಮಿಸುತ್ತಿದ್ದಾರೆ. ಈ ಹಿಂದಿನ ಸಿನಿಮಾ ಮೂಲಕ ಆ್ಯಕ್ಷನ್​ ಹೀರೋ ಆಗಿ ಬದಲಾಗಿದ್ದ ಕೋಮಲ್​ ಇದೀಗ ಮತ್ತೆ ಹೊಟ್ಟೆ ಹಣ್ಣಾಗುವಷ್ಟು ನಗು ಹೊತ್ತು ಬರುತ್ತಿದ್ದಾರೆ. ಆ ಕಾಮಿಡಿಯ ಚಿತ್ರಕ್ಕೆ ‘2020’ ಎಂಬ ಶೀರ್ಷಿಕೆಯೂ ಅಂತಿಮವಾಗಿದೆ.

ಈಗಾಗಲೇ ಹಲವು ಸಿನಿಮಾ ನಿರ್ಮಾಣ ಮಾಡಿರುವ ನಿರ್ದೇಶಕ. ಟಿ. ಆರ್. ಚಂದ್ರಶೇಖರ್ ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಧನ್ಯ ಬಾಲಕೃಷ್ಣ, ಕುರಿ ಪ್ರತಾಪ್ ತಬಲಾ ನಾಣಿ, ಗಿರಿ, ಅಪೂರ್ವ, ಉಮೇಶ್ ಹಾಗೂ ಇತರರೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ರಾಬರ್ಟ್, ವಿಕ್ಟರಿ2, ಅಮ್ಮ ಐ ಲವ್ ಯು, ತ್ರಿಬಲ್ ರೈಡಿಂಗ್, ಉಪಾಧ್ಯಕ್ಷ ಹಾಗೂ ಇನ್ನೂ ಹಲವು ಚಿತ್ರಗಳಿಗೆ ಸಂಭಾಷಣೆ ಬರೆದ ಕೆ.ಎಲ್.ರಾಜಶೇಖರ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇದೆ ನವಂಬರ್ ನಲ್ಲಿ ಬೆಂಗಳೂರಿನಲ್ಲಿ ಮೊದಲ ಹಂತದ ಶೂಟಿಂಗ್ ಶುರುವಾಗಲಿದೆ. ಸಂಪೂರ್ಣ ಹಾಸ್ಯ ಪ್ರಧಾನ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ಬಹುತೇಕ ಪಾತ್ರಗಳ ಆಯ್ಕೆ ಪೂರ್ಣಗೊಂಡಿದ್ದು ಮಿಕ್ಕ ಕೆಲವು ಮುಖ್ಯ ಪಾತ್ರಗಳ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ.

ತಾಂತ್ರಿಕ ವರ್ಗದಲ್ಲಿ ನವೀನ್ ಕುಮಾರ್ .ಎಸ್ ಛಾಯಾಗ್ರಹಣ, ಕೆ.ಎಮ್. ಪ್ರಕಾಶ್ ಸಂಕಲನ, ಶ್ರೀಧರ್ ಸಂಭ್ರಮ ಸಂಗೀತ, ಬಾಲು ಕುಮುಟ ನಿರ್ಮಾಣ ನಿರ್ವಹಣೆ, ದಯಾನಂದ್ ಭದ್ರಾವತಿ ವಸ್ತ್ರಾಲಂಕಾರ, ಮಲ್ಲಿಕಾರ್ಜುನ ವರ್ಣಾಲಂಕಾರ ಮಾಡುತ್ತಿದ್ದು ನಿರ್ದೇಶನ ತಂಡದಲ್ಲಿ ಸತೀಶ್ ಕುಮಾರ್, ವಿನೋದ್, ರವಿ ಸಾಥ್ ನೀಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net