ನಟ ದುನಿಯಾ ವಿಜಯ್​ ತಲ್ವಾರ್​ನಿಂದ ಕೇಕ್ ಕಟ್ ಪ್ರಕರಣ: ನೋಟಿಸ್ ನೀಡಲು ಡಿಸಿಪಿ ರೋಹಿಣಿ ಸಪೇಟ್ ಸೂಚನೆ

State 5 duniya vijay
Published on

ಬೆಂಗಳೂರು: ನಟ ದುನಿಯಾ ವಿಜಿ ಹುಟ್ಟುಹಬ್ಬದಲ್ಲಿ ಕೇಕ್​ನ್ನು ಖಡ್ಗದಿಂದ ಕತ್ತರಿಸಿದ್ದಕ್ಕೆ ಇಂದು ನೋಟಿಸ್ ನೀಡಲು ಡಿಸಿಪಿ ರೋಹಿಣಿ ಸಪೇಟ್ ಸೂಚನೆ ನೀಡಿದ್ದಾರೆ.

ಗಿರಿನಗರ ಠಾಣೆ ಇನ್ಸ್​ಪೆಕ್ಟರ್​ ಸಿದ್ದಲಿಂಗಯ್ಯ ಅವರಿಗೆ ಡಿಸಿಪಿ ರೋಹಿಣಿ ಸಪೇಟ್ ಸೂಚನೆ ನೀಡಿದ್ದಾರೆ, ಆರ್ಮ್ಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು, ವಿಚಾರಣೆಗೆ ಪೊಲೀಸರು ಕರೆಸಲಿದ್ದಾರೆ.

ಐದು ಇಂಚಿಗೂ ಉದ್ದದ ಕತ್ತಿಯನ್ನು ಬಳಸುವಂತಿಲ್ಲ, ಇಟ್ಟುಕೊಳ್ಳುವಂತಿಲ್ಲ. ಪೊಲೀಸರು ಅಂತಹವರ ವಿರುದ್ಧ ಆರ್ಮ್ಸ್ ಆಕ್ಟ್ ಅಡಿ ಕೇಸ್ ಬುಕ್ ಮಾಡ್ತಾರೆ.

ದುನಿಯಾ ವಿಜಿ ಕೇಕ್ ಕಟ್ ಮಾಡಿರೋ ವಿಡಿಯೋ ಪರಿಶೀಲನೆ ನಡೆದಿರುವ ಗಿರಿನಗರ ಪೊಲೀಸರು. ದುನಿಯಾ ವಿಜಿ ಕೇಕ್ ಕತ್ತರಿಸಿರೋ ಕತ್ತಿ ಐದು ಇಂಚಿಗೂ ಉದ್ದ ಇರೋದು ಕಂಡು ಬಂದ್ರೇ ದೂರು ದಾಖಲಿಸಲು ನಿರ್ಧರಿಸಿರುವ ಪೊಲೀಸರು.

ನೋಟಿಸ್ ನೀಡಿ ವಿಚಾರಣೆಗೆ ಕರೆಸುತ್ತೇವೆ ಎಂದು ದಿಗ್ವಿಜಯ ನ್ಯೂಸ್​ಗೆ ಮಾಹಿತಿ ನೀಡಿದ ಪೊಲೀಸ್ ಮೂಲಗಳು. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net