ಆನ್ಯಾ ಕೈಹಿಡಿದ ದಾನಿಷ್​

Danish
Published on

ಸ್ಯಾಂಡಲ್​ವುಡ್​ನಲ್ಲಿ ನಾಯಕನಾಗಿ ಗುರುತಿಸಿಕೊಂಡಿರುವ ನಟ, ನಿರೂಪಕ ಮತ್ತು ಆರ್​ಸಿಬಿ ಇನ್​ಸೈಡರ್​ ದಾನಿಷ್​ ಸೇಠ್​ ತಮ್ಮ ಬಹುಕಾಲದ ಗೆಳತಿ ಆನ್ಯಾ ರಂಗಸ್ವಾಮಿ ಅವರನ್ನು ವರಿಸಿದ್ದಾರೆ. ಬುಧವಾರ ವಿವಾಹ ನೋಂದಣಿ ಕಚೇರಿಯಲ್ಲಿ ರಿಜಿಸ್ಟರ್​ ಮದುವೆ ಆದ ಅವರು, ಗುರುವಾರ ಕುಟುಂಬ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನಡೆದ ಸರಳ ಸಮಾರಂಭದಲ್ಲಿ ಉಂಗುರ ಬದಲಿಸಿಕೊಳ್ಳುವ ಮೂಲಕ ದಾಂಪತ್ಯಕ್ಕೆ ಕಾಲಿರಿಸಿದ್ದಾರೆ. ವಿರಾಟ್​ ಕೊಹ್ಲಿ ಪತ್ನಿ ಮತ್ತು ಬಾಲಿವುಡ್​ ನಟಿ ಅನುಷ್ಕಾ ಶರ್ಮಾ ನವ ಜೋಡಿಗೆ ಶುಭಾಶಯ ಕೋರಿದ್ದಾರೆ. "ಹಂಬಲ್​ ಪೊಲಿಟಿಷಿಯನ್​ ನಾಗರಾಜ್​', "್ರೆಂಚ್​ ಬಿರಿಯಾನಿ' ಸಿನಿಮಾದಲ್ಲಿ ನಟಿಸಿರುವ ದಾನಿಷ್​ ಸೇಠ್​, "777 ಚಾರ್ಲಿ', "ಒನ್​ ಕಟ್​ ಟೂ ಕಟ್​' ಚಿತ್ರದಲ್ಲಿಯೂ ನಟಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net