ಚೆನೈ: ಕಳೆದ ಕೆಲವು ವಾರಗಳಲ್ಲಿ, ಅನೇಕ ಸೆಲೆಬ್ರಿಟಿಗಳು ಕೋವಿಡ್ -19 ಪಾಸಿಟಿವ್ ಆಗಿದ್ದಾರೆ. ಈಗ ಕರೊನಾ ವೈರಸ್ ನಟ ಚಿಯಾನ್ ವಿಕ್ರಂ ಅವರನ್ನು ಬಿಟ್ಟಿಲ್ಲ. ವಿಕ್ರಂ ಸಹ ಕರೊನಾ ಪಾಸಿಟಿವ್ ಆಗಿದ್ದು, ವೈದ್ಯರ ಸಲಹೆಯ ಪ್ರಕಾರ ಚೆನ್ನೈನಲ್ಲಿರುವ ತಮ್ಮ ಮನೆಯಲ್ಲಿ ಪ್ರತ್ಯೇಕಿಸಿ ಕೊಂಡಿದ್ದಾರೆ. ನಟನ ಮಗ ಧ್ರುವ್ ಮತ್ತು ಇತರ ಕುಟುಂಬ ಸದಸ್ಯರು ಕರೊನಾಗೆ ಪಾಸಿಟಿವ್ ಅಥವಾ ನೆಗೆಟಿವ್ ಎಂಬುದು ಇನ್ನು ತಿಳಿಯಬೇಕಿದೆ. ವಿಕ್ರಮ್ ಅವರ ಹೆಲ್ತ್ ಬುಲೆಟಿನ್ ಇನ್ನೂ ಬಿಡುಗಡೆಯಾಗಬೇಕಿದೆ. ಸದ್ಯ, ನಟ ಹೋಮ್ ಕ್ವಾರಂಟೈನ್‌ನಲ್ಲಿದ್ದು, ವಿಕ್ರಮ್‌ಗೆ ಚಿಕಿತ್ಸೆ ನೀಡಿದ ವೈದ್ಯರು ಅವರಲ್ಲಿ ರೋಗಲಕ್ಷಣಗಳು ಹೆಚ್ಚು ಕಾಣಿಸದಿರುವುದರಿಂದ ಮನೆಯಲ್ಲಿಯೇ ಪ್ರತ್ಯೇಕವಾಗಿರುವಂತೆ ಸೂಚಿಸಿದರು ಎಂಬ ಮಾಹಿತಿ ಕೇಳಿಬಂದಿದೆ.