ಡಿ.15 ರಂದು 'ಪುಷ್ಪ' ಸಿನಿಮಾ ಪತ್ರಿಕಾಗೋಷ್ಠಿಗೆಂದು ಸ್ಟೈಲಿಶ್ ಸ್ಟಾರ್ ಬೆಂಗಳೂರಿಗೆ ಆಗಮಿಸಿದರು. ಈ ಸಂದರ್ಭದಲ್ಲಿ ಪತ್ರಕರ್ತರು ನಟನನ್ನು ಅಪ್ಪು ಅವರ ಮನೆಗೆ ಯಾಕೆ ಹೋಗಿಲ್ಲ ಎಂದು ಪ್ರಶ್ನಿಸಿದರೆ ಅವರು ಒಂದೊಳ್ಳೆ ಉತ್ತರ ಕೊಟ್ಟಿದ್ದು, ಅದು ಸದ್ಯ ಎಲ್ಲರ ಗಮನ ಸೆಳೆದಿದೆ. ''ಇಷ್ಟು ದಿನ ನಾನು 'ಪುಷ್ಪ' ಸಿನಿಮಾದ ಕೆಲಸದ ಒತ್ತಡದಲ್ಲಿ ಇದ್ದೆ. ಹಾಗಾಗಿ, ಅಪ್ಪು ಮನೆಗೆ ಹೇಗಲು ಸಾಧ್ಯವಾಗಿಲ್ಲ'' ಎಂದು ಹೇಳಿದರು. ಜೊತೆಗೆ, ಅಪ್ಪು ಅವರ ಮನೆಗೆ ನೆನ್ನೆನು ಹೋಗಲ್ಲ ಎಂದಿದ್ದಾರೆ. ಏಕೆಂದರೆ, ''ಸಿನಿಮಾದ ಪ್ರಚಾರಕ್ಕೆಂದು ಬೆಂಗಳೂರಿಗೆ ಬಂದು ಈಗ ಪುನೀತ್ ಮನೆಗೆ ಹೋದರೆ, ಅದು ಪ್ರಚಾರದ ಗಿಮ್ಮಿಕ್ಕು ಎಂದು ಭಾವಿಸುತ್ತಾರೆ ಜನ''.