

ಈ ಬಾರಿಯ ಗಣಪತಿ ಹಬ್ಬವನ್ನು ಚಿತ್ರರಂಗದ ಸೆಲೆಬ್ರಿಟಿಗಳು ಹೇಗೆ ಆಚರಿಸುತ್ತಾರೆ ಎಂಬುದರ ಕುರಿತು ಚೇತನ್ ವಿಜಯವಾಣಿ ಜತೆಗೆ ಮಾತನಾಡಿದ್ದಾರೆ.
ನಾನು ಬಾಲ್ಯವನ್ನು ಅಮೆರಿಕದಲ್ಲಿ ಕಳೆದಿದ್ದರಿಂದ, ಸಂಭ್ರಮ ಕಡಿಮೆ. ಅಲ್ಲಿ ಹಬ್ಬದ ದಿನ ಮನೆಯಲ್ಲಿ ಮುದ್ದೆ ಮಾಡೋರು. ಅದೇ ನಮಗೆ ಹಬ್ಬದೂಟ. ಹಬ್ಬ, ಪೂಜೆ ಎನ್ನುವುದಕ್ಕಿಂತ ಅದೊಂದು ಸಂತೋಷದ ಸಂದರ್ಭ. ಎಲ್ಲರೂ ಒಟ್ಟಿಗೇ ಸೇರುವ ಸಂದರ್ಭ. ಈ ಬಾರಿ ಸಹ ಅದು ಮುಂದುವರಿಯುತ್ತದೆ. ಈಗ ಎಲ್ಲ ಕಡೆ ಕರೊನಾ ಹಾವಳಿ ಇರುವುದರಿಂದ, ಅದರ ಗಂಭೀರತೆ ಅರಿತುಕೊಂಡು, ಎಲ್ಲರೂ ಸೇಫ್ ಆಗಿ ಆಚರಿಸಿ ಎಂಬುದಷ್ಟೇ ನನ್ನ ಮನವಿ. ಸುಮ್ಮನೆ ಹೊರಗೆ ತಿರುಗದೆ, ಮನೆಯಲ್ಲೇ ಸರಳವಾಗಿ ಹಬ್ಬವನ್ನು ಆಚರಿಸಿ.