

ಬೆಂಗಳೂರು: ‘ರಾಧಾ ಕಲ್ಯಾಣ’, ‘ಲಕ್ಷ್ಮೀ ಬಾರಮ್ಮ’, ‘ಮರಳಿ ಮನಸಾಗಿದೆ’ ಧಾರಾವಾಹಿಗಳಲ್ಲಿ ನಟಿಸಿರುವ ಚಂದನ್, ‘ಪರಿಣಯ’, ‘ಕಟ್ಟೆ’, ‘ಲವ್ ಯೂ ಆಲಿಯಾ’ ಸೇರಿ ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ. 2018ರಲ್ಲಿ ತೆರೆಗೆ ಬಂದ ಅರ್ಜುನ್ ಸರ್ಜಾ ನಿರ್ದೇಶಿಸಿದ್ದ ‘ಪ್ರೇಮ ಬರಹ’ ಚಿತ್ರದ ಬಳಿಕ ಅವರು ನಾಯಕನಾಗಿ ನಟಿಸಿರಲಿಲ್ಲ.
ಇದೀಗ ಐದು ವರ್ಷಗಳ ಬ್ರೇಕ್‌ನ ಬಳಿಕ ಚಂದನ್ ನಾಯಕನಾಗಿ ಬಿಗ್ ಸ್ಕ್ರೀನ್ ಮೇಲೆ ಮಿಂಚಲು ರೆಡಿಯಾಗಿದ್ದಾರೆ. ಜತೆಗೆ ನಿರ್ದೇಶನ, ನಿರ್ಮಾಣಕ್ಕೂ ಕೈಹಾಕಿದ್ದಾರೆ. ಇತ್ತೀಚೆಗಷ್ಟೆ ಅವರ ಹುಟ್ಟುಹಬ್ಬದಂದು ‘್ಲರ್ಟ್’ ಚಿತ್ರದ ಸ್ಟ್ ಲುಕ್ ಬಿಡುಗಡೆಯಾಗಿದೆ. ಈ ಬಗ್ಗೆ ಚಂದನ್, ‘‘್ಲರ್ಟ್’ ಚಿತ್ರವನ್ನು ನಾನೇ ನಿರ್ದೇಶಿಸುತ್ತಿದ್ದೇನೆ. ಜತೆಗೆ ಗೆಳೆಯರ ಜತೆ ಸೇರಿ ನಿರ್ಮಿಸಲಿದ್ದೇನೆ. ಈಗಾಗಲೇ ಪ್ರಿ-ಪ್ರೊಡಕ್ಷನ್ ಕೆಲಸಗಳು ಅಂತಿಮ ಹಂತದಲ್ಲಿದ್ದು, ಜೆಸ್ಸಿ ಗ್‌ಟಿ ಸಂಗೀತ ನೀಡಲಿದ್ದಾರೆ. ಇದೇ ಮಾಸಾಂತ್ಯಕ್ಕೆ ಚಿತ್ರೀಕರಣ ಪ್ರಾರಂಭಿಸಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ‘್ಲರ್ಟ್’ ರೊಮ್ಯಾಂಟಿಕ್ ಕಾಮಿಡಿ ಜಾನರ್ ಚಿತ್ರವಾಗಿದ್ದು, ಎಲ್ಲ ಹುಡುಗರಿಗೂ ಕನೆಕ್ಟ್ ಆಗುವ ವಿಷಯ ಎಂಬುದು ಚಂದನ್ ಅಭಿಪ್ರಾಯ.
ನಾಯಕನಾಗಿ ನಟಿಸುವುದರ ಜತೆಗೆ ಮೊದಲ ಬಾರಿಗೆ ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿರುವ ಬಗ್ಗೆ ಚಂದನ್, ‘ಇದುವರೆಗೂ ಕಥೆಯಿಂದ ಹಿಡಿದು ಪ್ರಿ-ಪ್ರೊಡಕ್ಷನ್ ಕೆಲಸಗಳಲ್ಲಿ ಏನೂ ಸಮಸ್ಯೆ ಆಗಿಲ್ಲ. ಎಲ್ಲವೂ ಸರಾಗವಾಗಿ ನಡೆದಿವೆ. ನಿರ್ದೇಶನ, ನಿರ್ಮಾಣ ಹೆಚ್ಚು ಜವಾಬ್ದಾರಿ ನಿಜ. ಆದರೆ, ಇದುವರೆಗೆ ನಡೆದಂತೆಯೇ ಎಲ್ಲ ಕೆಲಸಗಳೂ ಚೆನ್ನಾಗಿ ನಡೆಯಲಿವೆ ಎಂಬ ಭರವಸೆಯಿದೆ’ ಎಂದು ಹೇಳಿಕೊಳ್ಳುತ್ತಾರೆ.