More

    ಬಹುನಿರೀಕ್ಷಿತ ‘ದಿ ವ್ಯಾಕ್ಸಿನ್​ ವಾರ್​’ ಟ್ರೇಲರ್​ ಔಟ್​; ವಿವೇಕ್​ ಅಗ್ನಿಹೋತ್ರಿಗೆ ಪ್ರೇಕ್ಷಕರು​ ಹೇಳಿದ್ದೇನು?

    ಮುಂಬೈ: ‘ದಿ ಕಾಶ್ಮೀರ್​ ಫೈಲ್ಸ್’​ ಚಿತ್ರದ ಮುಖೇನ ಭಾರತೀಯ ಚಿತ್ರರಂಗದಲ್ಲಿ ಹೆಚ್ಚು ಖ್ಯಾತಿ ಗಳಿಸಿದ ರಾಷ್ಟ್ರ ಪ್ರಶಸ್ತಿ ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ನಿರ್ದೇಶನದ ಬಹುನಿರೀಕ್ಷಿತ ‘ದಿ ವ್ಯಾಕ್ಸಿನ್ ವಾರ್’​ ಚಿತ್ರದ ಟ್ರೇಲರ್​ ಇಂದು ಯೂಟ್ಯೂಬ್​ನಲ್ಲಿ ಅಧಿಕೃತವಾಗಿ ಬಿಡುಗಡೆಗೊಂಡಿದೆ.

    ಇದನ್ನೂ ಓದಿ: ರಾಷ್ಟ್ರೀಯ ಶಿಕ್ಷಣ ನೀತಿ ಬದಲಾಗದಿರಲಿ: ಬದುಕು ಬೆಳಕು ಸೇವಾ ಸಮಿತಿ ಅಧ್ಯಕ್ಷ ಎಚ್.ಆರ್.ಅರವಿಂದ್ ಒತ್ತಾಯ

    ಚಿತ್ರದ ಶೀರ್ಷಿಕೆಗೆ ತಕ್ಕಂತೆ ಸಾಂಕ್ರಾಮಿಕ ರೋಗ ಆವರಿಸಿಕೊಂಡಾಗ ವ್ಯಾಕ್ಸಿನ್​ ಕಂಡು ಹಿಡಿಯಲು ವಿಜ್ಞಾನಿಗಳು ಪಟ್ಟ ಶ್ರಮ, ಒತ್ತಡದ ಪರಿಸ್ಥಿತಿ ಹೇಗಿತ್ತು ಎಂಬುದರ ಝಲಕ್ ಅನ್ನು ಚಿತ್ರತಂಡ​ ಟ್ರೇಲರ್​ನಲ್ಲಿ ಪ್ರದರ್ಶಿಸಿದೆ.

    ನಿರ್ದೇಶಕ ವಿವೇಕ್​ ಅಗ್ನಿಹೋತ್ರಿ ಮತ್ತು ನಿರ್ಮಾಪಕಿ, ನಟಿ ಪಲ್ಲವಿ ಜೋಶಿ ಅವರ ಕಾಂಬಿನೇಷನ್​ನಲ್ಲಿ ತಯಾರಾದ ಈ ಸಿನಿಮಾದ ಟ್ರೇಲರ್​ನಲ್ಲಿ ಹೇಳಿದಂತೆ, ಇದೊಂದು ನೈಜ ಕಥೆ ಆಧರಿತ ಸಿನಿಮಾವಾಗಿದ್ದು, ಭಾರತದ ಮೊದಲ ಜೀವವಿಜ್ಞಾನ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಸ್ಪೂರ್ತಿದಾಯಕ ಕಥೆಯನ್ನು ಹೇಳುತ್ತಿದ್ದೇವೆ ಎಂದು ತಿಳಿಸಿರುವ ಚಿತ್ರತಂಡ, ಟ್ರೇಲರ್​ ಮೂಲಕ ಬಹುತೇಕ ಸಿನಿಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.

    ಇದನ್ನೂ ಓದಿ: ಪರಿಣಾಮಕಾರಿಯಾಗಿ ಜಾರಿಯಾಗದ ಕಾಯ್ದೆ: ನೀರು ಬಳಕೆದಾರರ ಸಂಘದ ನಿರ್ದೇಶಕ ಮಂಗಲ ಎಂ.ಯೋಗೀಶ್ ಬೇಸರ

    ಕೋವಿಡ್​ ವೈರಸ್ ವಿರುದ್ಧ ಹೋರಾಡುವ ಲಸಿಕೆಯನ್ನು ಕಂಡುಹಿಡಿಯಲು ವಿಜ್ಞಾನಿಗಳು ಯಾವೆಲ್ಲಾ ಸವಾಲುಗಳನ್ನು ಎದುರಿಸಿದ್ದಾರೆ ಎಂಬುದೇ ಚಿತ್ರದ ಕಥಾಹಂದರ. ಈ ಪ್ಯಾನ್​ ಇಂಡಿಯಾ ಸಿನಿಮಾ ಸೆ. 28 ರಂದು ಜಾಗತಿಕವಾಗಿ ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲು ಸಜ್ಜಾಗಿದೆ.

    ಚಿತ್ರದಲ್ಲಿ ನಾನಾ ಪಾಟೇಕರ್, ಪಲ್ಲವಿ ಜೋಶಿ, ರೈಮಾ ಸೇನ್, ಅನುಪಮ್ ಖೇರ್, ಗಿರಿಕಾ ಓಕ್, ಸಪ್ತಮಿ ಗೌಡ, ನಿವೇದಿತಾ ಭಟ್ಟಾಚಾರ್ಯ ಸೇರಿದಂತೆ ಮುಂತಾದವರ ತಾರಗಣವಿದೆ. ಸದ್ಯ ಚಿತ್ರದ ಟ್ರೇಲರ್​ಗೆ ಪ್ರೇಕ್ಷಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ,(ಏಜೆನ್ಸೀಸ್).

    VIDEO | ಶಿಕ್ಷಣಾಧಿಕಾರಿ ವಿರುದ್ಧ ಪ್ರತಿಭಟನೆ; ಕಾರನ್ನು ಧ್ವಂಸಗೊಳಿಸಿದ ವಿದ್ಯಾರ್ಥಿನಿಯರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts