

ನವದೆಹಲಿ: ಸದಾ ಸಾಮಾಜಿಕ ಕಳಕಳಿ ಹಾಗೂ ದೇಶದ ಮೇಲೆ ಅಭಿಮಾನ ತೋರುವ ಬಾಲಿವುಡ್ ನಟ ಅಕ್ಷಯ್ಕುಮಾರ್ ಇದೀಗ ಅಭಿಮಾನಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತಂಬಾಕು ಉತ್ಪನ್ನಗಳ ವಿರುದ್ಧವೇ ಹಲವು ಬಾರಿ ಜಾಹಿರಾತುಗಳಲ್ಲಿ ಸಂದೇಶ ನೀಡಿದ್ದ ಅಕ್ಷಯ್ ಇದೀಗ ತಂಬಾಕು ಉತ್ಪನ್ನದ ಜಾಹಿರಾತಿನಲ್ಲಿ ಕಾಣಿಕೊಳ್ಳುವ ಮೂಲಕ ಅಭಿಮಾನಿಗಳಿಂದ ಟೀಕೆಗೆ ಗುರಿಯಾಗಿದ್ದಾರೆ.
ವಿಮಲ್ ಇಲಾಚಿ ಎಂಬ ಜಾಹಿರಾತಿನಲ್ಲಿ ಅಕ್ಷಯ್ ಕುಮಾರ್ ಕಾಣಿಸಿಕೊಂಡಿರುವುದೇ ಅಭಿಮಾನಿಗಳಲ್ಲಿ ಬೇಸರ ಮೂಡಲು ಕಾರಣವಾಗಿದೆ. ತಂಬಾಕು ಸೇವನೆ ಮಾಡಬೇಡಿ ಎಂದು ಹೇಳುತ್ತಿದ್ದ ನೀವೇ ಇದೀಗ ಅದರ ಜಾಹಿರಾತಿನಲ್ಲಿ ಕಾಣಿಸಿಕೊಳ್ಳುವುದು ಎಷ್ಟರಮಟ್ಟಿಗೆ ಸರಿ ಎಂದು ಸಾಮಾಜಿಕ ಜಾಲತಾಣದಲ್ಲಿ ಅಕ್ಷಯ್ ಕುಮಾರ್ ಅಭಿಮಾನಿಗಳು ಪಶ್ನೆಯನ್ನಿಟ್ಟಿದ್ದರು.
ಅಭಿಮಾನಿಗಳ ಪ್ರಶ್ನೆಯನ್ನು ಮನಗಂಡಿರುವ ಅಕ್ಷಯ್ಕುಮಾರ್ ದಯವಿಟ್ಟು ಕ್ಷಮಿಸಿ ಎಂದು ಪ್ರತಿಕ್ರಿಯಿಸಿದ್ದಾರೆ. ನನ್ನ ಬಗ್ಗೆ ಒಳ್ಳೆ ಅಭಿಪ್ರಾಯ ಹೊಂದಿರುವ ನನ್ನ ಅಭಿಮಾನಿಗಳಲ್ಲಿ ಬೇಸರ ಮೂಡಿಸಲು ನನಗೆ ಇಷ್ಟವಿಲ್ಲ. ಹಾಗಾಗಿ ಈ ಜಾಹಿರಾತಿನಿಂದ ನಾನು ಹೊರಬರುವೆ ಕ್ಷಮಿಸಿ ಎಂದು ಕೇಳಿಕೊಂಡಿದ್ದಾರೆ.
ವಿಮಲ್ ಇಲಾಚಿ ಜಾಹಿರಾತಿನಲ್ಲಿ ಶಾರೂಖ್ ಖಾನ್ ಹಾಗೂ ಅಜಯ್ ದೇವಗನ್ ಕೂಡ ಕಾಣಿಸಿಕೊಂಡಿದ್ದು, ಅಭಿಮಾನಿಗಳು ಅವರ ಬಗ್ಗೆಯೂ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ ಈ ಇಬ್ಬರು ನಟರು ಈವರೆಗೂ ಏನೂ ಪ್ರತಿಕ್ರಿಯೆ ನೀಡಿಲ್ಲ.