ಪತ್ನಿ ಅವಿವಾ ಕುಟುಂಬದಿಂದ ಅಭಿಷೇಕ್​ಗೆ 1.5 ಕೋಟಿ ಮೌಲ್ಯದ ಬಿಎಂಡಬ್ಯ್ಯೂ ಕಾರು ಗಿಫ್ಟ್!

BMW car
Published on

ಬೆಂಗಳೂರು: ಇಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ(Palace Grounds) ಅಭಿಷೇಕ್ ಅಂಬರೀಶ್(Abhishek Ambareesh) ಮತ್ತು ಅವಿವಾ ಹಲವು ಗಣ್ಯರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ.

ನಟ ಅಭಿಷೇಕ್ ಅಂಬರೀಶ್ ತಮ್ಮ ಪ್ರೇಯಸಿ ಅವಿವಾ(Aviva Bidappa) ಅವರ ಕೈಹಿಡಿದು ಹಸೆಮಣೆ ಏರುವ ಮೂಲಕ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈ ವೇಳೆ ಅಭಿಷೇಕ್​ಗೆ ತಮ್ಮ ಪತ್ನಿ ಅವಿವಾ ಕುಟುಂಬಸ್ಥರ ಕಡೆಯಿಂದ ಬರೋಬ್ಬರಿ 1.5 ಕೋಟಿ ಮೌಲ್ಯದ ಬಿಎಂಡಬ್ಲ್ಯೂ(BMW) ಕಾರು ಗಿಫ್ಟ್ ಆಗಿ ಲಭಿಸಿದೆ.

ಮದುಮಗ ಅಭಿಷೇಕ್ ಅವರಿಗೆ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿರುವ ಅವಿವಾ ಕುಟುಂಬದವರು ಸಂತಸವನ್ನು ವ್ಯಕ್ತಪಡಿಸಿದ್ದಾರೆ. KA 04 NB0999 ಸಂಖ್ಯೆಯನ್ನು ಒಳಗೊಂಡ ಬಿಎಂಡಬ್ಲ್ಯೂ ಕಾರನ್ನು ನೋಡಿದ ಅಭಿಷೇಕ್ ಅಂಬರೀಶ್ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಅಭಿನಂದನೆಗಳನ್ನು ಕಮೆಂಟ್ ಮೂಲಕ ತಿಳಿಸುತ್ತಿದ್ದಾರೆ.

ಪತ್ನಿ ಅವಿವಾ ಅವರ ಕುಟುಂಬದಿಂದ ಅಂಬಿ ಪುತ್ರನಿಗೆ ಇದು ಸರ್ಪೈಸ್ ಗಿಫ್ಟ್ ಎಂಬುದು ವಿಶೇಷ! ಕನ್ನಡ ಚಿತ್ರರಂಗ ಸೇರಿದಂತೆ ಗಣ್ಯಾತಿ ಗಣ್ಯರು ನವದಂಪತಿಗಳಿಗೆ ಶುಭಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net