

ದೆಹಲಿ: ಅವಧೇಶ್ ರೈ ಹತ್ಯೆ ಪ್ರಕರಣದಲ್ಲಿ ಗ್ಯಾಂಗ್ಸ್ಟರ್ ಹಾಗೂ ರಾಜಕಾರಣಿ ಮುಕ್ತಾರ್ ಅನ್ಸಾರಿ ತಪ್ಪಿತಸ್ಥ ಎಂದು ಸಾಬೀತಾದ ಬೆನ್ನಲ್ಲೇ ನ್ಯಾಯಾಲಯವು ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.
1991ರ ಆಗಸ್ಟ್ 3ರಂದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಶಾಸಕ ಅಜಯ್ ರೈ ಅವರ ಸಹೋದರ ಅವಧೇಶ್ ರೈಯನ್ನು ವಾರಣಾಸಿಯಲ್ಲಿ ಆತನ ಮನೆಯ ಹೊರಗೆ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಸಂಬಂಧ ಅನ್ಸಾರಿ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿತ್ತು. ಈ ಕುರಿತು ಸುದೀಘವಾಗಿ ವಿಚಾರಣೆ ನಡೆಸಿದ ನ್ಯಾಯಾಲಯವು ಇಂದು ತನ್ನ ತೀರ್ಪನ್ನು ನೀಡಿದೆ.
ಈ ಕುರಿತು ಮಾತನಾಡಿದ ಅಜಯ್ ರೈ, ನಾನು, ನನ್ನ ತಂದೆ-ತಾಯಿ, ಅವಧೇಶ್ ಅವರ ಮಗಳು ಮತ್ತು ಇಡೀ ಕುಟುಂಬದ ಹಲವು ವರ್ಷಗಳ ಕಾಯುವಿಕೆಗೆ ಅಂತ್ಯವಾಗಿದೆ. ಇಂದು ನ್ಯಾಯಾಲಯವು ನನ್ನ ಸಹೋದರನ ಹತ್ಯೆ ಪ್ರಕರಣದಲ್ಲಿ ಮುಕ್ತಾರ್‌ನನ್ನು ದೋಷಿ ಎಂದು ಘೋಷಿಸಿದೆ ಎಂದು ಹೇಳಿದ್ದಾರೆ.
ಈ ಹಿಂದೆ ಉತ್ತರ ಪ್ರದೇಶದ ದರೋಡೆಕೋರರು ಮತ್ತು ಸಮಾಜ ವಿರೋಧಿ ಚಟುವಟಿಕೆಗಳ ತಡೆಗಟ್ಟುವಿಕೆ ಆಕ್ಟ್ ಪ್ರಕರಣದಲ್ಲಿ ಘಾಜಿಯಾಪುರ ನ್ಯಾಯಾಲಯವು ಅನ್ಸಾರಿಯನ್ನು ತಪ್ಪಿತಸ್ಥರೆಂದು ಘೋಷಿಸಿ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು.(ಏಜೆನ್ಸೀಸ್)