

ಮುಂಬೈ: ಬಾಲಿವುಡ್ನ ಮಿಸ್ಟರ್ ಫರ್ಫೆಕ್ಷನಿಸ್ಟ್ ಆಮೀರ್ ಖಾನ್ ಸದ್ಯ ಲಾಲ್ ಸಿಂಗ್ ಛಡ್ಡಾ ಚಿತ್ರದ ಶೂಟಿಂಗ್ನಲ್ಲಿ ಬಿಜಿಯಾಗಿದ್ದಾರೆ. ಹೀಗಿರುವಾಗಲೇ ಇದೀಗ ಆಮೀರ್ ಪುತ್ರನ ಸಿನಿಮಾ ವಿಚಾರವೊಂದು ಸದ್ದು ಮಾಡುತ್ತಿದೆ. ಅಂದರೆ, ಜುನೈದ್ ಖಾನ್ ಬಾಲಿವುಡ್ಗೆ ಆಗಮಿಸುವ ತಯಾರಿ ನಡೆಸಿದ್ದಾರೆ.
ಈಗಾಗಲೇ ವಿದೇಶದಲ್ಲಿ ನಟನೆಯ ಪಾಠ ಕಲಿತು ಬಂದಿರುವ ಜುನೈದ್, ದಕ್ಷಿಣ ಭಾರತದ ಹಿಟ್ ಸಿನಿಮಾವೊಂದನ್ನು ಆಯ್ದುಕೊಂಡಿದ್ದಾರೆ. ಆ ಚಿತ್ರದ ರಿಮೇಕ್ನಲ್ಲಿ ನಟಿಸಲಿದ್ದಾರೆ. ಮಲಯಾಳಂನಲ್ಲಿ ಕಳೆದ ವರ್ಷ ತೆರೆಕಂಡು ಹಿಟ್ ಪಟ್ಟಿ ಸೇರಿದ್ದ ಇಶ್ಕ್ ಚಿತ್ರದ ರಿಮೇಕ್ನಲ್ಲಿ ನಟಿಸುವುದು ಅಧಿಕೃತವಾಗಿದೆ.
ಮೂಲ ಮಲಯಾಳಂನ ಇಶ್ಕ್ ಚಿತ್ರವನ್ನು ಅನುರಾಜ್ ಮನೋಹರ್ ನಿರ್ದೇಶನ ಮಾಡಿದ್ದರು. ನಾಯಕನಾಗಿ ಶೇನ್ ನಿಗಮ್, ಅನ್ ಶೀತಲ್ ನಾಯಕಿಯಾಗಿ ನಟಿಸಿದ್ದರು. ಹಿಂದಿಯಲ್ಲಿ ನಿರ್ದೇಶನ ಯಾರು ಮಾಡಲಿದ್ದಾರೆ? ನಾಯಕಿ ಯಾರು, ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ವಿಚಾರ ಇನ್ನಷ್ಟೇ ಬಹಿರಂಗವಾಗಬೇಕಿದೆ.
ಅಮೆರಿಕಾದ ಲಾಸ್ ಏಂಜಲಸ್ನಲ್ಲಿರುವ ಅಮೆರಿಕನ್ ಅಕಾಡೆಮಿ ಆಫ್ ಡ್ರಾಮಿಟಿಕ್ ಆರ್ಟ್ಸ್ನಲ್ಲಿ ಹಲವು ನಾಟಕಗಳಲ್ಲಿ ಅಭಿನಯಿಸಿದ್ದಾರೆ. ಎ ಫಾರ್ಮಿಂಗ್ ಸ್ಟೋರಿ, ಎ ಫಿವ್ ಗುಡ್ ಮೆನ್ಗಳಲ್ಲಿ ನಟಿಸಿದ್ದಾರೆ. ಇದೀಗ ಬಾಲಿವುಡ್ಗೆ ಪದಾರ್ಪಣೆ ಮಾಡುವ ಖುಷಿಯಲ್ಲಿದ್ದಾರೆ. (ಏಜೆನ್ಸೀಸ್)