

ಕಾರ್ಗಿಲ್: ಒಂದು ಕಡೆ ಲಾಕ್ಡೌನ್ನಿಂದ ಬಾಲಿವುಡ್ನಲ್ಲಿ ಚಿತ್ರೀಕರಣ ಚಟುವಟಿಕೆಗಳೆಲ್ಲ ಸ್ಥಗಿತವಾಗಿವೆ. ಚಿತ್ರೀಕರಣ ಇಲ್ಲದೆ, ಹಲವು ಕಲಾವಿದರು ಮತ್ತು ತಂತ್ರಜ್ಱರು ಸದ್ದಿಲ್ಲದೆ ಮನೆ ಸೇರಿಕೊಂಡಿದ್ದಾರೆ. ಯಾರ್ಯಾರು ಏನೇನು ಮಾಡುತ್ತಿದ್ದಾರೆ ಎಂಬ ಸುದ್ದಿ ಆಗಾಗ ಬರುತ್ತಿರುತ್ತದೆ. ಆದರೆ, ಆಮೀರ್ ಖಾನ್ ಮಾತ್ರ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಇಷ್ಟು ದಿನ ಉತ್ತರ ಸಿಕ್ಕಿರಲಿಲ್ಲ.
ಹೌದು, ಬಾಲಿವುಡ್ನಲ್ಲಿ ಏನೆಲ್ಲ ಬೆಳವಣಿಗೆಗಳಾದರೂ, ಆಮೀರ್ ಖಾನ್ ಸುದ್ದಿ ಇರಲಿಲ್ಲ. ಅವರೆಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ. ಅದೀಗ ಗೊತ್ತಾಗಿದೆ. ಆಮೀರ್ ಖಾನ್, ಒಂದಿಷ್ಟು ಜನರ ಜತೆಗೆ ಕಾರ್ಗಿಲ್ನಲ್ಲಿ ಬೀಡುಬಿಟ್ಟಿದ್ದಾರೆ.
ಇಷ್ಟಕ್ಕೂ ಆಮೀರ್ ಖಾನ್, ಕಾರ್ಗಿಲ್ನಲ್ಲಿ ಏನು ಮಾಡುತ್ತಿದ್ದಾರೆ ಎಂಬ ಪ್ರಶ್ನೆ ಸಹಜ. ಆಮೀರ್ ಅಭಿನಯದ ಲಾಲ್ ಸಿಂಗ್ ಛಡ್ಡಾ ಚಿತ್ರಕ್ಕಾಗಿ ಅವರು ತಮ್ಮ ತಂಡದವರ ಜತೆಗೆ ಕಾರ್ಗಿಲ್ಗೆ ಲೊಕೇಶನ್ ನೋಡುವುದಕ್ಕೆ ಹೋಗಿದ್ದಾರಂತೆ. ಲಾಕ್ಡೌನ್ ಎಲ್ಲ ಮುಗಿದು, ಚಿತ್ರೀಕರಣಕ್ಕೆ ಅನುಮತಿ ಸಿಕ್ಕ ಮೇಲೆ ಅವರು ಕಾರ್ಗಿಲ್ನಲ್ಲಿ ಒಂದಿಷ್ಟು ಮಹತ್ವದ ಭಾಗದ ಚಿತ್ರೀಕರಣ ಅಲ್ಲಿ ಮಾಡುವುದಕ್ಕೆ ಯೋಚಿಸಿದ್ದು, ಈ ಸಂಬಂಧ ಲೊಕೇಶನ್ ಹುಡುಕುವುದಕ್ಕೆ ಹೋಗಿದ್ದಾರೆ.
ಅಂದಹಾಗೆ, ಲಾಲ್ ಸಿಂಗ್ ಛಡ್ಡಾ ಚಿತ್ರದ ಬಹುಳಷ್ಟು ಭಾಗದ ಚಿತ್ರೀಕರಣ ಮುಗಿದಿದೆ. ಎಲ್ಲ ಅಂದುಕೊಂಡಂತೆ ಆದರೆ, ಈ ವರ್ಷದ ಕೊನೆಯ ವಾರ ಚಿತ್ರವನ್ನು ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಯೋಚಿಸಿದೆ. ಹಾಲಿವುಡ್ನ ಫಾರೆಸ್ಟ್ ಗಂಪ್ನ ರೀಮೇಕ್ ಆಗಿರುವ ಲಾಲ್ ಸಿಂಗ್ ಛಡ್ಡಾ ಚಿತ್ರದಲ್ಲಿ ಆಮೀರ್ ಖಾನ್ ಜತೆಗೆ, ಕರೀನಾ ಕಪೂರ್, ನಾಗಚೈತನ್ಯ ಮುಂತಾದವರಿದ್ದು, ಶಾರೂಖ್ ಖಾನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.