ಅಲ್ಲಿಂದ ಇವರನ್ನು ಕರೆತರಲು ಸರ್ಕಾರಕ್ಕೂ ಆಗದು!! ಚಿತ್ರತಂಡದ ಸ್ಥಿತಿ ಈಗ ಚಿಂತಾಜನಕ

ಪರುತವಿ
Published on

ಮಾಲಿವುಡ್ ನಟ ಪ್ರಥ್ವಿರಾಜ್ ಮತ್ತು ‘ಆಡುಜೀವಿತಂ’ ಚಿತ್ರತಂಡ ಜೋರ್ಡಾನ್‌ನಲ್ಲಿ ಶೂಟಿಂಗ್ ಎಂದು ತೆರಳಿ ಲಾಕ್‌ಡೌನ್ ಹಿನ್ನೆಲೆಯಲ್ಲಿ ಅಲ್ಲಿಯೇ ಬಂಧಿಯಾಗಿದೆ. ಲಾಕ್‌ಡೌನ್ ನಡುವೆಯೂ ಒಂದಷ್ಟು ದೃಶ್ಯಗಳ ಚಿತ್ರೀಕರಣವನ್ನೂ ಮಾಡಿಕೊಂಡಿದೆ. ಸರ್ಕಾರ ನಮ್ಮನ್ನು ಕರೆತರಲಿದೆ ಎಂಬ ನಂಬಿಕೆಯೂ ನಮಗಿದೆ ಎಂದು ಪ್ರಥ್ವಿರಾಜ್ ಹೇಳಿಕೊಂಡಿದ್ದರು. ಕೇಂದ್ರ ಸರ್ಕಾರವೂ ವಿಸಾ ಅವಧಿ ಮುಗಿಯುವುದರೊಳಗೆ 56 ಜನರ ತಂಡವನ್ನು ಕರೆತರುವುದಾಗಿ ಭರವಸೆ ನೀಡಿತ್ತು. ಆದರೆ ಇದೀಗ ಅದೆಲ್ಲವೂ ಉಲ್ಟಾ ಆಗಿದೆ. ಅಂದರೆ, ಸ್ವತಃ ಕೇಂದ್ರ ಸಚಿವ ವಿ ಮುರಳಿಧರನ್ ಆ ಭರವಸೆಯನ್ನು ಹಿಂತೆಗೆದುಕೊಂಡಿದ್ದಾರೆ. ಅವರನ್ನು ಕರೆತರುವಲ್ಲಿ ಕೇರಳದ ಸಚಿವ ಎ.ಕೆ ಬಾಲನ್ ಮಧ್ಯಸ್ಥಿಕೆ ವಹಿಸಿದ್ದರು. ಆದರೆ, ಸದ್ಯದ ಪರಿಸ್ಥಿತಿ ಗಂಭೀರವಾಗಿದ್ದು, ಆಡುಜೀವಿತಂ ತಂಡವನ್ನು ಕರೆತರುವುದು ಅಸಾಧ್ಯವಾದ ಮಾತು ಎಂದು ಸ್ವತಃ ಎ.ಕೆ ಬಾಲನ್ ೇಸ್‌ಬುಕ್‌ನಲ್ಲಿ ತಿಳಿಸಿದ್ದಾರೆ. ಈ ನಿರ್ಧಾರ ಚಿತ್ರತಂಡವನ್ನು ಮತ್ತಷ್ಟು ಇಕ್ಕಟ್ಟಿಗೆ ದೂಡಿದ್ದು, ಸದ್ಯ ಜೋರ್ಡಾನ್‌ನಲ್ಲಿರುವ ಎಲ್ಲರ ವಿಸಾ ಅವಧಿಯನ್ನು ವಿಸ್ತರಣೆ ಮಾಡುವ ಬಗ್ಗೆ ಕೇರಳ ಸರ್ಕಾರ ನಿರ್ಧರಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net