More

    ರಾಮನವಮಿಗೆ ಪೊಗರಿನ ಖರಾಬು ತೋರಿಸಲು ಧ್ರುವ ಸಜ್ಜು

    ಬೆಂಗಳೂರು: ಎಲ್ಲ ಅಂದುಕೊಂಡಂತೆ ಆಗಿದ್ದರೆ, ಮಾ. 27ಕ್ಕೆ ‘ಪೊಗರು’ ಚಿತ್ರದ ಖರಾಬು ಹಾಡು ಬಿಡುಗಡೆ ಆಗಬೇಕಿತ್ತು. ಆದರೆ, ಕರೊನಾ ಲಾಕ್‌ಡೌನ್ ಹಿನ್ನೆಲೆಯಲ್ಲಿ ಚಿತ್ರದ ನಾಯಕ ಧ್ರುವ ಸರ್ಜಾ ಇಂಥ ವಾತಾವರಣದಲ್ಲಿ ಹಾಡು ಬಿಡುಗಡೆ ಮಾಡುವುದು ಒಳ್ಳೆಯದಲ್ಲ ಎಂದಿದ್ದರು. ಈಗ ಮತ್ತೆ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ ಧ್ರುವ. ಅಂದರೆ, ಹಾಡಿನ ಬಿಡುಗಡೆ ಬೇಡ ಎಂದಿದ್ದ ಚಿತ್ರತಂಡ ಈಗ ಶ್ರೀರಾಮನವಮಿ ನಿಮಿತ್ತ ಖರಾಬು ಹಾಡನ್ನು ರಿಲೀಸ್ ಮಾಡಲು ನಿರ್ಧರಿಸಿದೆ. ಗುರುವಾರ ಸಂಜೆ 5.55ಕ್ಕೆ ಆನಂದ್ ಆಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಚಿತ್ರದ ಹಾಡು ಬಿತ್ತರಗೊಳ್ಳಲಿದೆ.
    ಸದ್ಯ ಬಹುತೇಕ ಸಿನಿಮಾ ಕೆಲಸಗಳನ್ನು ಮುಗಿಸಿಕೊಂಡಿರುವ ‘ಪೊಗರು’ ತಂಡ, ಡಬ್ಬಿಂಗ್ ಸಹ ಮುಗಿಸಿದೆ. ಕರೊನಾದಿಂದಾಗಿ ಹಾಡಿನ ಶೂಟಿಂಗ್ ಬಾಕಿ ಉಳಿದಿದ್ದು, ಎಲ್ಲವೂ ತಣ್ಣಗಾದ ಮೇಲೆ ಹಾಡುಗಳ ಚಿತ್ರೀಕರಣ ಮಾಡಿಕೊಳ್ಳಲಿದೆ. ನಂದಕಿಶೋರ್ ನಿರ್ದೇಶನ ಇರುವ ಈ ಸಿನಿಮಾ ಏಪ್ರಿಲ್ ತಿಂಗಳಲ್ಲಿ ತೆರೆಕಾಣಲಿದೆ ಎನ್ನಲಾಗಿತ್ತಾದರೂ, ಸದ್ಯಕ್ಕೆ ಆ ಬಗ್ಗೆ ಯಾವುದೇ ಮಾಹಿತಿಯನ್ನು ಚಿತ್ರತಂಡ ಹೊರಹಾಕಿಲ್ಲ. ಬಿ.ಕೆ ಗಂಗಾಧರ್ ಚಿತ್ರಕ್ಕೆ ಬಂಡವಾಳ ಹೂಡಿದ್ದು, ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ವಿಜಯ್ ಮಿಲ್ಟನ್ ಛಾಯಾಗ್ರಹಣ ನಿಭಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts