VIDEO: ಅಭಿಮಾನಿಗಳಿಗೆ ಕಿಚ್ಚನ ಅಭಿಮಾನದ ಮಾತು..

collage (6)
Published on

ಸೆ. 2ರಂದು ಸ್ಯಾಂಡಲ್​ವುಡ್ ನಟ ಸುದೀಪ್​ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಕರೊನಾ ಹಿನ್ನೆಲೆಯಲ್ಲಿ ಇದ್ದಲ್ಲಿಂದಲೇ ಆಶೀರ್ವಾದ ಮಾಡಿ ಎಂದೂ ಅವರು ಕೇಳಿಕೊಂಡಿದ್ದರು. ಹಾಗಾಗಿ ಸೋಷಿಯಲ್ ಮೀಡಿಯಾದಲ್ಲಿ ಲಕ್ಷಾಂತರ ಅಭಿಮಾನಿಗಳು ನೆಚ್ಚಿನ ನಟನಿಗೆ ಶುಭಾಶಯ ಕೋರಿದ್ದಾರೆ. ಸುದೀಪ್​ ಫೋಟೋಕ್ಕೆ ಮಾಲೆ ಹಾಕಿ ಸಂಭ್ರಮಿಸಿದ್ದಾರೆ. ಕೇಕ್​ ಕತ್ತರಿಸಿ ಸೆಲೆಬ್ರೆಟ್​ ಮಾಡಿದ್ದಾರೆ. ದೇವಸ್ಥಾನದಲ್ಲಿ ಸುದೀಪ್​ ಹೆಸರಲ್ಲಿ ಅರ್ಚನೆಯನ್ನೂ ಮಾಡಿಸಿದ್ದಾರೆ. ಇತ್ತ ಸಿನಿಮಾ ಮಂದಿಯಿಂದ ಬಗೆ ಬಗೆ ಪೋಸ್ಟರ್​ಗಳು ಬಿಡುಗಡೆಯಾಗಿವೆ. ಕೋಟಿಗೊಬ್ಬ 3 ಚಿತ್ರತಂಡ ಅಭಿಮಾನಿಗಳಿಗಾಗಿ ಟೀಸರ್​ ಉಡುಗೊರೆಯಾಗಿ ನೀಡಿದೆ. ಇದೆಲ್ಲವನ್ನು ಗಮನದಲ್ಲಿಟ್ಟುಕೊಂಡೇ ಕಿಚ್ಚ ಸುದೀಪ್​ ಸೋಷಿಯಲ್​ ಮೀಡಿಯಾದಲ್ಲಿ ಕಿರುವಿಡಿಯೋ ಸಂದೇಶವೊಂದನ್ನು ಹರಿಬಿಟ್ಟಿದ್ದಾರೆ. ಆ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದ ಅರ್ಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net