ಬೆಂಗಳೂರು: ಸ್ಯಾಂಡಲ್ವುಡ್ ನಟ ದಿ. ಚಿರಂಜೀವಿ ಸರ್ಜಾ ಮತ್ತು ಮೇಘನಾ ರಾಜ್ ಅವರ ಪುತ್ರ ರಾಯನ್ ರಾಜ್ ಸರ್ಜಾನಿಗೆ ನಿನ್ನೆ(ಅ.22) ಮೊದಲ ಹುಟ್ಟುಹಬ್ಬದ ಸಂಭ್ರಮ. ಮೇಘನಾ ಅವರ ಮನೆಯಲ್ಲೇ ಅದ್ದೂರಿಯಾಗಿ ರಾಯನ್ ಬರ್ತ್ ಡೇ ಆಚರಿಸಲಾಗಿದೆ. ಕಾಡಿನ ಥೀಮ್ನಲ್ಲಿ ಸಿಂಗಾರಗೊಂಡಿದ್ದ ಬರ್ತ್ ಡೇ ಆವರಣ ಕಣ್ಮನ ಸೆಳೆಯುವಂತಿತ್ತು. ಮನೆಯ ಪ್ರವೇಶದ್ವಾರವನ್ನ 'ವೆಲ್ಕಮ್ ಟು ರಾಯನ್ ಕಿಂಗ್ಡಮ್' ಎಂಬ ಅಕ್ಷರ ಬಳಸಿ ಕಾಡಿನ ಹೆಬ್ಬಾಗಿಲಿನಂತೆ ಅಲಂಕರಿಸಲಾಗಿತ್ತು. ಕೆಂಪು ಮತ್ತು ನೀಲಿ ಬಣ್ಣದ ಬಟ್ಟೆ ತೊಟ್ಟಿದ್ದ ರಾಯನ್ ನೋಡಲು ಮುದ್ದು ಉಕ್ಕಿಸುವಂತಿದ್ದ. ಸ್ಯಾಂಡಲ್ವುಡ್ನ ನಟಿಯರಾದ ಸುಧಾರಾಣಿ, ಶ್ರುತಿ ಸೇರಿದಂತೆ ಹಲವರು ಬರ್ತ್ ಡೇ ಪಾರ್ಟಿಗೆ ಬಂದು ಶುಭಕೋರಿದರು. ಆ ಕ್ಷಣದ ಫೋಟೋಗಳು ಇಲ್ಲಿವೆ.