ಬಿಗ್ ಬಾಸ್ ಮನೆಯಲ್ಲಿ ಮೊದಲ ವಾರವೇ ಭರ್ಜರಿ ಜಗಳ: ‘ಬಾಯಿ ಬಡ್ಕೋಬೇಡ’ ಎಂದ ಗಗನ್ ಚಿನ್ನಪ್ಪ; ‘ನನ್ನ ಹತ್ರವೂ ನಡಿಯಲ್ಲ’ ಎಂದ ಕಾವ್ಯಾ ಗೌಡ! Bigg Boss Kannada

ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಗನ್ ಚಿನ್ನಪ್ಪ ಮತ್ತು ಕಾವ್ಯಾ ಗೌಡ ನಡುವಿನ ವಾಗ್ವಾದದ ಸಾಂಕೇತಿಕ ಚಿತ್ರ
ಬಿಗ್ ಬಾಸ್ ಕನ್ನಡ ಮನೆಯಲ್ಲಿ ಗಗನ್ ಚಿನ್ನಪ್ಪ ಮತ್ತು ಕಾವ್ಯಾ ಗೌಡ ನಡುವಿನ ವಾಗ್ವಾದದ ಸಾಂಕೇತಿಕ ಚಿತ್ರ
Published on
ಬಿಗ್​ ಬಾಸ್​​: ಬಿಗ್​​ ಬಾಸ್ ಕನ್ನಡ (Bigg Boss Kannada) ದ ಸೀಸನ್​ 13 ಪ್ರಾರಂಭವಾಗಿ ಇನ್ನೂ ಸರಿಯಾಗಿ ಒಂದು ವಾರವೂ ಕಳೆದಿಲ್ಲವಾದರೂ ಮನೆಯಲ್ಲಿ ಈಗಲೇ ಘರ್ಷಣೆ ವಾತಾವರಣ ಕಂಡು ಬರುತ್ತಿದೆ. ಶುಕ್ರವಾರ (ಸೆ.11) ಬಿಡುಗಡೆಯಾಗಿರುವ ಪ್ರೊಮೊನಲ್ಲಿ ಗಗನ್​ ಚಿನ್ನಪ್ಪ ಹಾಗೂ ಕಾವ್ಯಾ ಗೌಡ ನಡುವೆ ಮಾತಿನ ಜಾಟಾಪಟಿ ಜೋರಾಗಿಯೇ ನಡೆದಿದೆ. ​​

ಪ್ರೊಮೊನಲ್ಲೇನಿದೆ? 

ಬಿಡುಗಡೆಮಾಡಿರುವ ಪ್ರೊಮೊನಲ್ಲಿ, ಗಗನ್​ ಚಿನ್ನಪ್ಪ, ಕಾವ್ಯಾ ಗೌಡ ಅವರಿಗೆ ಅಡುವೆ ಮನೆ ಉಸ್ತವಾರಿಯನ್ನು ನೀಡಿದ್ದಾಗಿ, ಆದರೆ ಅಲ್ಲಿಯ ಕಸವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲ ಎನ್ನುವುದಕ್ಕೆ ತಕರಾರು ಮಾಡಿದ್ದಾರೆ.
ಅದಕ್ಕೆ ಕಾವ್ಯಾ, ಇಲ್ಲ ತಾವು ಅಲ್ಲಿದ್ದ ಕಸವನ್ನು ಸ್ವಚ್ಚಗೊಳಿಸಿದ್ದೇನೆಂದು ಹೇಳುತ್ತಾರೆ. ಆಗ, ಇನ್ನೊಬ್ಬ ಸ್ಪರ್ಧಿ ಸಂಗೀತಾ ಭಟ್​​, ಅಡುಗೆ ಮನೆಯಲ್ಲಿ ಹಸಿ ಕಸ ಎಲ್ಲಾ ಹಾಗೆ ಬಿದ್ದಿತ್ತೆಂದು ಗಗನ್​ ಬಳಿ ಹೇಳುತ್ತಾರೆ. ಕಾವ್ಯಾ ಆ ಮಾತಿಗೆ ಅಡ್ಡ ಪಡಿಸಲು ಮುಂದಾದಾಗ ಗಗನ್​, ಅವರ ಮಾತಿಗೆ ಅಡ್ಡ ಪಡಿಸಬೇಡಿ, ಬೇರೆಯವರನ್ನು ಇನ್ಫ್ಲುಯೆನ್ಸ್ ಏಕೆ ಮಾಡ್ತಿರ? ಎಂದು ಗದರಿದ್ದಾರೆ.
ನಂತರ ತಾಳ್ಮೆ ಕಳೆದುಕೊಂಡ ಗಗನ್, ಕಾವ್ಯಾಳಿಗೆ ಅಯ್ಯೋ.. ಹಸಿ ಕಸ ನಾನು ಮುಟ್ಟಲ್ಲ, ಛೀ ಎಲ್ಲಾ ಅನ್ನೋಹಾಗಿಲ್ಲ, ಸುಮ್ನೆ ಬಾಯಿ ಬಡ್ಕೊಬೇಡ ಎಂದಿದ್ದಾರೆ. ಅದಕ್ಕೆ ಕಾವ್ಯ ನಾನು ಇಲ್ಲಿ ಯಾರನ್ನು ಇನ್ಫ್ಲುಯೆನ್ಸ್ ಮಾಡುತ್ತಿಲ್ಲ ಮತ್ತೆ ನೀವು ಈ ರೀತಿ ಮಾತನಾಡಬೇಡಿ ಎಂದಿದ್ದಾರೆ.
ಆಗ, ಗಗನ್​ ಚಿನ್ನಪ್ಪ, ನನ್ನ ಹತ್ರ ಇವೆಲ್ಲಾ ನಡಿಯಲ್ಲ ಎಂದಿದ್ದಾರೆ, ಅದಕ್ಕೆ ಕಾವ್ಯಾ ಗೌಡ ನನ್ನ ಹತ್ರನೂ ಇವೆಲ್ಲಾ ನಡಿಯಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ. ಸದ್ಯ ಮನೆಯಲ್ಲಿ ಸ್ಪರ್ಧಿಗಳು ಒಬ್ಬರಿಗೊಬ್ಬರು ಪರಿಚಯವಾಗುವ ಮುನ್ನವೇ ಜಗಳಕ್ಕಿಳಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. 

ನಾಳೆ ಮೊದಲ ಕಿಚ್ಚನ ಪಂಚಾಯ್ತಿ!

ಬಿಗ್​ ಬಾಸ್​ ಕನ್ನಡ ಸೀಸನ್​ 13 ಶುರುವಾಗಿ ನಾಳೆ (ಸೆ.12) ಏಳನೇ ದಿನವಾಗಿದ್ದು, ಕಾರ್ಯಕ್ರಮದ ನಿರೂಪಕ ಕಿಚ್ಚ ಸುದೀಪ್​ ಮೊದಲ ವಾರದ ಪಂಚಾಯ್ತಿ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಯಾರ್ಯಾರಿಗೆ ಕ್ಲಾಸ್​ ತೆಗೆದುಕೊಳ್ಳಲಿದ್ದಾರೆ? ಹಾಗೂ ಯಾರಿಗೆ ಮೊದಲ ಕಿಚ್ಚನ ಮೆಚ್ಚುಗೆ ಚಪ್ಪಾಳೆ ದೊರೆಯಲಿದೆ? ಅಂತೆಯೇ ಮೊದಲ ವಾರದಲ್ಲೇ ಯಾರು ಮನೆಯಿಂದ ಆಚೆ ಹೊರಡಲಿದ್ದಾರೆ ಎನ್ನುವ ಪ್ರಶ್ನೆಗೆ ನಾಳೆ ಉತ್ತರ ಸಿಗಲಿದೆ, (ಏಜನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net