ನಟ ದರ್ಶನ್ ಮತ್ತು ಇಂದ್ರಜಿತ್ ಲಂಕೇಶ್​ರನ್ನು 5 ವರ್ಷ ಬ್ಯಾನ್​ ಮಾಡಿ...

darshan
Published on

ಬೆಂಗಳೂರು: ಸ್ಯಾಂಡಲ್​ವುಡ್​ ನಟ ದರ್ಶನ್ ಮತ್ತು ನಿರ್ದೇಶಕ ಇಂದ್ರಜಿತ್ ಲಂಕೇಶ್ ಇಬ್ಬರನ್ನೂ ಕನ್ನಡ ಸಿನಿಮಾ ರಂಗದಿಂದ 5 ವರ್ಷ ಬ್ಯಾನ್​ ಮಾಡಬೇಕು ಎಂದು ಆಗ್ರಹಿಸಿ ಫಿಲ್ಮಂ ಚೇಂಬರ್​ಗೆ ದೂರು ಕೊಡಲಾಗಿದೆ.

ದರ್ಶನ್​ ಹೆಸ್ರಲ್ಲಿ ಲೋನ್​ ವಂಚನೆ ಪ್ರಕರಣದಡಿ ಶುರುವಾದ ದರ್ಶನ್​ ಮತ್ತು ಇಂದ್ರಜಿತ್​ ಲಂಕೇಶ್​ ನಡುವಿನ ವಾಕ್ಸಮರ ತಾರಕಕ್ಕೇರಿ ಹಲವರನ್ನು ಮುನ್ನಲೆಗೆ ಎಳೆದು ತಂದು ಫಜೀತಿಗೆ ಸಿಲುಕಿದ್ದಾರೆ ದರ್ಶನ್​.

ದರ್ಶನ್ ಅವರದ್ದು ಎನ್ನಲಾದ ಆಡಿಯೋ ವೈರಲ್​ ಆಗಿದ್ದು, ಅದರಲ್ಲಿ ಅವಾಚ್ಯ ಶಬ್ಧ ಬಳಕೆ ಇದೆ. ಹಾಗಾಗಿ ಫಿಲ್ಮಂ ಚೇಂಬರ್​ಗೆ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ದಳ ಸಂಸ್ಥೆ ಅಧ್ಯಕ್ಷ ಮೋಹನ್ ದೂರು ನೀಡಿದ್ದು, ದರ್ಶನ್ ಹಾಗೂ ಇಂದ್ರಜಿತ್ ಅವರನ್ನ 5 ವರ್ಷ ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ. ದರ್ಶನ್ ಮಾತಿಗೆ ಕಡಿವಾಣ ಹಾಕಬೇಕು ಎಂದೂ ಮನವಿ ಮಾಡಿದ್ದಾರೆ. ಇದಕ್ಕೆ ಕರುನಾಡ ಜನದ್ವನಿ ವೇದಿಕೆ, ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯೂ ದ್ವನಿಗೂಡಿಸಿದೆ.

ವಿವಾದವನ್ನು ಕಾನೂನು ಮುಖಾಂತರ ಪರಿಹಾರ ಮಾಡಲು ಸೂಚಿಸಲಾಗುವುದು ಎಂದು ಭರವಸೆ ನೀಡಿದ ಚಲನಚಿತ್ರ ವಾಣಿಜ್ಯ ಮಂಡಳಿಯ ಜೈರಾಜ್, ದರ್ಶನ್​ರನ್ನು ಕರೆಸಿ ಮಾತನಾಡಲು ಈಗಾಗಲೇ ದೊಡ್ಡಣ್ಣ ಅವರಿಗೆ ಹೇಳಿದ್ದೇವೆ. ದರ್ಶನ್​ರನ್ನು ಬ್ಯಾನ್ ಮಾಡೋದು ನಮ್ಮ ವ್ಯಾಪ್ತಿಗೆ ಬರಲ್ಲ. ಆದರೆ ಕರೆಸಿ ಮಾತನಾಡುವ ಬಗ್ಗೆ ಖಂಡಿತಾ ಯೋಚನೆ ಮಾಡ್ತೇವೆ. ಕಲಾವಿದರ ಸಂಘಕ್ಕೆ ಪತ್ರ ಬರೆಯುತ್ತೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net