ಬಾಲಿವುಡ್ ನಟ ಅಜಯ್ ದೇವಗನ್​ಗೆ ಬೆದರಿಕೆ ಹಾಕಿದ್ದ ಯುವಕನ ಬಂಧನ

Ajay Devgn
Ajay Devgn
Published on

ಮುಂಬೈ: ಬಾಲಿವುಡ್ ನಟ ಅಜಯ್ ದೇವಗನ್ ಅವರನ್ನು ನಿನ್ನೆ ಯುವಕನೊಬ್ಬ ತರಾಟೆಗೆ ತೆಗೆದುಕೊಂಡ ಘಟನೆ ನಡೆದಿತ್ತು. ಘಟನೆಗೆ ಸಂಬಂಧಿಸಿದಂತೆ ರಾಜದೀಪ್ ಸಿಂಗ್ ಎನ್ನುವ 28 ವರ್ಷದ ವ್ಯಕ್ತಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆತನ ವಿರುದ್ಧ ಬೆದರಿಕೆ ಪ್ರಕರಣವನ್ನು ದಾಖಲಿಸಿದ್ದಾರೆ. ವೃತ್ತಿಯಲ್ಲಿ ಲಾರಿ ಚಾಲಕನಾಗಿದ್ದಾನೆ ಆತ.

ಇತ್ತೀಚೆಗೆ ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಬಗ್ಗೆ ಪಾಪ್ ತಾರೆ ರಿಯಾನ್ ಎನ್ನುವಳು ಟ್ವೀಟ್ ಮಾಡಿ ಗಮನ ಸೆಳೆದಿದ್ದಳು. ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಅಜಯ್ ದೇವಗನ್ ರಿಯಾನ್ ನ್ನು ತರಾಟೆಗೆ ತೆಗೆದುಕೊಂಡು ನಮ್ಮ ದೇಶದ ಆಂತರಿಕ ವಿಚಾರದಲ್ಲಿ ಮೂಗು ತೋರಿಸಬೇಡಿ ಎಂದಿದ್ದರು.

ಈ ಘಟನೆಯಿಂದ ಸಿಟ್ಟಾಗಿದ್ದ ಸಿಖ್ ಸಮುದಾಯದ ವ್ಯಕ್ತಿಯೊಬ್ಬ ಮುಂಬೈನ ಗೋರೆಗಾಂವ್ ಬಳಿ ಅಜಯ್ ದೇವಗನ್ ತಮ್ಮ ಬಿಎಂಡಬ್ಲೂ ಕಾರ್​​ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿ ತರಾಟೆಗೆ ತೆಗೆದುಕೊಂಡಿದ್ದಾನೆ. ಅಜಯ್ ದೇವಗನ್ ನೀನು ಪಂಜಾಬ್ ವಿರುದ್ಧ ಇದ್ದೀಯಾ ಎಂದು ಹೇಳಿದ್ದಾನೆ.

ನಿನಗೆ ಪಂಜಾಬ್ ಆಹಾರ ಕೊಟ್ಟಿದೆ, ನೀನು ಪಂಜಾಬ್ ವಿರುದ್ಧ ಮಾತನಾಡುತ್ತೀಯಾ, ನಿನಗೆ ನಾಚಿಕೆ ಆಗುವುದಿಲ್ಲವಾ? ಸಿಖ್​ ರು ತೊಡುವ ಪೇಟಾಗಳನ್ನು ಸಿನಿಮಾದಲ್ಲಿ ಹೆಮ್ಮೆಯಿಂದ ತೊಡುತ್ತಿಯಾ, ಆದರೆ, ಅವರಿಗೆ ಅವಮಾನ ಆಗುವ ರೀತಿ ಮಾತನಾಡುತ್ತಿಯಾ? ನನ್ನ ಮೇಲೆ ಕಾರ್ ಹತ್ತಿಸು ನೋಡೋಣ, ಯಾಕೆ ಕಾರ್ ಇಳಿದು ಹೊರ ಬರುತ್ತಿಲ್ಲ ಎಂದು ಸೆಲ್ಪಿ ಮೊಬೈಲ್ ವಿಡಿಯೋ ಮಾಡುತ್ತಾ ಯುವಕ ಮಾತನಾಡಿದ್ದಾನೆ. ಈ ವಿಡಿಯೋ ವೈರಲ್ ಆಗಿದೆ. ನಂತರ ಭದ್ರತಾ ಸಿಬ್ಬಂದಿ ಯುವಕನನ್ನು ಸಮಾಧಾನ ಮಾಡಿ ಕಳುಹಿಸಿದ್ದಾರೆ. ಆದರೆ, ಅಜಯ್ ದೇವಗನ್ ಮಾತ್ರ ಕಾರ್ ಬಿಟ್ಟು ಕೆಳಗಡೆ ಇಳಿದಿದಿದ್ದಿಲ್ಲ.

ವಿವಾದಿತ ಮೂರು ಕೃಷಿ ಕಾಯ್ದೆಗಳ ಬಗ್ಗೆ ಪಂಜಾಬ್ ಹರ್ಯಾಣ ಭಾಗದ ಹೆಚ್ಚಿನ ರೈತರು ದೆಹಲಿಯ ಗಡಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net