ಜಾರಕಿಹೊಳಿ ಸೆಕ್ಸ್​ ವಿಡಿಯೋ ಬಹಿರಂಗ ಮಾಡಿರುವ ದಿನೇಶ್ ಕಲ್ಲಹಳ್ಳಿ ವಿರುದ್ಧ ದೂರು

dinesh kallahalli
dinesh kallahalli and Ramesh jarakiholi
Published on

ಬೆಂಗಳೂರು: ಸಚಿವರಾಗಿದ್ದ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸೆಕ್ಸ್​ ವಿಡಿಯೋ ಬಿಡುಗಡೆ ಮಾಡಿ ಸಂಚಲನ ಸೃಷ್ಟಿಸಿರುವ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಕರ್ನಾಟಕ ಕನ್ನಡಪರ ಓಕ್ಕೂಟದಿಂದ ದೂರು ನೀಡಲಾಗಿದ್ದು, ಸಚಿವರ ತೇಜೊವದೆ ಮಾಡಲು ವಿಡಿಯೋ ಬಹಿರಂಗ ಮಾಡಿದ್ದಾರೆ. ಇದೊಂದು ರಾಜಕೀಯ ಷಡ್ಯಂತ್ರ. ದಿನೇಶ್ ಕಲ್ಲಹಳ್ಳಿಗೂ ಈ ಪ್ರಕರಣಕ್ಕೂ ಸಂಬಂಧವಿಲ್ಲ. ಅನ್ಯಾಯ ಆಗಿರುವುದು ಯುವತಿಗೆ. ಆದ್ರೆ, ಯುವತಿ ಇದುವರೆಗೆ ದೂರು ನೀಡಿಲ್ಲ. ಹೀಗಾಗಿ ಈ ವಿಷಯದಲ್ಲಿ ಸಾಕಷ್ಟು ಅನುಮಾನಗಳು ಮೂಡುತ್ತವೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ವಿಡಿಯೋ ನೋಡಿದ್ರೆ ಸಮ್ಮತಿ ಸೆಕ್ಸ್ ತರ ಕಾಣುತ್ತಿದೆ, ಆ ವಿಡಿಯೋವನ್ನ ಸಂಪೂರ್ಣವಾಗಿ ಎಡಿಟ್ ಮಾಡಿಸಲಾಗಿದೆ. ಅದನ್ನ ಮಾಡಿಸಿದ್ದು ಯಾರು..?? ಇದು ಬ್ಲಾಕ್ ಮೇಲ್ ರಾಜಕಾರಣ ಹಾಗಾಗಿ ದಿನೇಶ್ ಕಲ್ಲಹಳ್ಳಿಯನ್ನು ತನಿಖೆ ನಡೆಸಬೇಕಿದೆ ಎಂದು ಕರ್ನಾಟಕ ಕನ್ನಡ ಒಕ್ಕೂಟದ ಅದ್ಯಕ್ಷ ಕೃಷ್ಣ ಎನ್ನುವರು ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net