ನವರಸಗಳ 9 ಸುಳ್ಳು ಕಥೆಗಳು; ಚಿತ್ರದಲ್ಲಿ 100ಕ್ಕೂ ಹೆಚ್ಚು ಕಲಾವಿದರ ಸಮಾಗಮ

9 Sullu
Published on

ಬೆಂಗಳೂರು: ಶೃಂಗಾರ, ಹಾಸ್ಯ, ಕರುಣ, ರೌದ್ರ, ವೀರ, ಭಯಾನಕ, ಭೀಭತ್ಸ, ಅದ್ಭುತ, ಶಾಂತ ... ಹೀಗೆ ನವರಸಗಳಿವೆ. ಈ ಎಲ್ಲವನ್ನು ಒಂದೇ ಚಿತ್ರದಲ್ಲಿ ಅಥವಾ ಒಂದೇ ಕಥೆಯಲ್ಲಿ ಹಿಡಿದಿಡುವ ಪ್ರಯತ್ನ ಈ ಹಿಂದೆ ಆಗಿವೆ. ಈಗ ನಿರ್ದೇಶಕ ಮಂಜುನಾಥ್ ಮುನಿಯಪ್ಪ ನವರಸಗಳ ಕುರಿತಾದ ಒಂಭತ್ತು ಕಥೆಗಳುಳ್ಳ ಆಂತಾಲಜಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಟ್ರೇಲರ್ ಹಾಗೂ ಹಾಡುಗಳ ಬಿಡುಗಡೆ ಮಾಡಲಾಯಿತು.

ಮಂಜುನಾಥ್ ಮುನಿಯಪ್ಪ ಮೂಲತಃ ರಂಗಕರ್ವಿು. ಹಲವು ವರ್ಷಗಳ ರಂಗಭೂಮಿ ಅನುಭವದೊಂದಿಗೆ ಚೊಚ್ಚಲ ಸಿನಿಮಾ ನಿರ್ದೇಶಿಸಿದ್ದಾರೆ. ‘ಇದು ನೈಜ ಘಟನೆ ಆಧಾರಿತ ಚಿತ್ರ. ಪ್ರಮೋದ್ ಶೆಟ್ಟಿ, ವಿನಾಯಕ್ ಜೋಶಿ, ಕರಿ ಸುಬ್ಬು, ಸುಕೃತಾ ವಾಗ್ಲೆ, ಕೃಷ್ಣ ಹೆಬ್ಬಾಳೆ, ಲಕ್ಷ್ಮೀ ಚಂದ್ರಶೇಖರ್, ಸುಂದರ್ ವೀಣಾ, ನಂದಗೋಪಾಲ್, ಸುನೇತ್ರಾ ಪಂಡಿತ್, ಸುಪ್ರಿತಾ ಶೆಟ್ಟಿ, ವೀಳ್ಯಾ ರಾಘವೇಂದ್ರ ಸೇರಿದಂತೆ 100ಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಶಿವರಾಜ್​ಕುಮಾರ್ ಅವರು ಟ್ರೇಲರ್​ಗೆ ಧ್ವನಿ ನೀಡಿದ್ದಾರೆ’ ಎಂದು ಚಿತ್ರದ ಬಗ್ಗೆ ಮಾಹಿತಿ ನೀಡಿದರು.

ಚಿತ್ರದಲ್ಲಿ ಒಟ್ಟು ಆರು ಹಾಡುಗಳಿದ್ದು ಪ್ರದೀಪ್ ಮತ್ತು ಪ್ರವೀಣ್ ಸಹೋದರರು ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕಾಗಿ ಮಂಡಿನೋವಿನ ನಡುವೆಯೂ ಮೈಲಿಗಟ್ಟಲೆ ಓಡಿದ ಅನುಭವ ಹಂಚಿಕೊಂಡರು ಹಿರಿಯ ನಟಿ ಲಕ್ಷ್ಮೀ ಚಂದ್ರಶೇಖರ್.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net