ಇಂಗ್ಲಿಷ್​ನಲ್ಲೂ 83 ಸಿನಿಮಾ

cricket mar 20
Published on

ಭಾರತೀಯ ಕ್ರಿಕೆಟ್ ತಂಡ 1983ರ ವಿಶ್ವಕಪ್​ನಲ್ಲಿ ಜಯಭೇರಿ ಸಾಧಿಸಿದ್ದನ್ನೇ ಆಧರಿಸಿ ಮೂಡಿಬರುತ್ತಿರುವ ಸಿನಿಮಾ ‘83’, ಅಂತಾರಾಷ್ಟ್ರೀಯ ಮಟ್ಟದಲ್ಲೂ ಸದ್ದು ಮಾಡುವ ಸುಳಿವು ಗೋಚರಿಸಿದೆ. ಏಕೆಂದರೆ, ಹಿಂದಿಯಲ್ಲಷ್ಟೇ ನಿರ್ವಣವಾಗುತ್ತಿರುವ ಈ ಸಿನಿಮಾ ಇಂಗ್ಲಿಷ್​ನಲ್ಲೂ ಮೂಡಿಬರಲಿದೆ ಎಂಬ ಮಾಹಿತಿಯೊಂದು ಹೊರಬಿದ್ದಿದೆ.

ನಿರ್ದೇಶಕ ಕಬೀರ್ ಖಾನ್ ಆಕ್ಷನ್-ಕಟ್ ಹೇಳಿರುವ ಈ ಸಿನಿಮಾದಲ್ಲಿ ಕಥಾನಾಯಕ, ಕ್ರಿಕೆಟಿಗ ಕಪಿಲ್​ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ಕಪಿಲ್ ಪತ್ನಿ ರೋಮಿ ದೇವ್ ಪಾತ್ರದಲ್ಲಿ ರಣವೀರ್ ಪತ್ನಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ತಾಹಿರ್ ರಾಜ್ ಭಾಸಿನ್, ಸಾಖಿಬ್ ಸಲೀಮ್ ಜೀವಾ ಹಾಗೂ ಹಾರ್ಡಿ ಸಂಧು ಮುಂತಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಪಂದ್ಯದ ಗೆಲುವಿನಲ್ಲಿ ಪ್ರಮುಖ ಪಾತ್ರವಾಗಿದ್ದ ಕಪಿಲ್​ದೇವ್ ಅವರನ್ನೇ ಕೇಂದ್ರೀಕರಿಸಿ ಕಥೆ ಹೆಣೆದಿರುವುದರಿಂದ ಕಪಿಲ್ ಆಗಿ ರಣವೀರ್ ಸಿಂಗ್ ಈ ಚಿತ್ರದಲ್ಲಿ ಭರ್ಜರಿ ಮಿಂಚುವ ಸಾಧ್ಯತೆ ಇದೆ. ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಏಪ್ರಿಲ್ ಎರಡನೇ ವಾರದಲ್ಲಿ ಈ ಸಿನಿಮಾ ತೆರೆ ಕಾಣಲಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net