8 ವರ್ಷದ ಹಿಂದೆ ನನ್ನ ಹೆಸರು ಯಾರಿಗೂ ಗೊತ್ತಿರಲಿಲ್ಲ, ಈಗ... ಹೀಗೆಂದು ಅಭಿಮಾನಿಗಳಿಗೆ ಭಾವನಾತ್ಮಕ ಸಾಲು ಬರೆದ ವಿಜಯ್​ದೇವರಕೊಂಡ

Vijay Devarakonda
Published on

ಹೈದರಾಬಾದ್​: ತಮ್ಮ ಅಭಿಮಾನಿಗಳಲ್ಲಿ ಆಗ್ಗಾಗ್ಗೆ ಸಿನಿಮಾ ನಟರು ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವುದು ಹಾಗೂ ಅಭಿಮಾನಿಗಳಿಂದ ಉತ್ತರ ಪಡೆಯುವುದು ಸಾಮಾನ್ಯವಾದರೂ ಕೆಲವು ಭಾರೀ ವಿಶೇಷತೆಯನ್ನು ಪಡೆದುಕೊಂಡಿರುತ್ತವೆ.

ಇದೇ ರೀತಿ ಈಗ, ತಮ್ಮ ಹಿಂದಿನ ದಿನಗಳನ್ನು ಸ್ಮರಿಸಿ, ಕೆಲವೇ ವರ್ಷಗಳ ಹಿಂದೆ ನಾನೇನೂ ಆಗಿರಲಿಲ್ಲ, ನಾನು ಯಾರೂ ಎಂದೇ ಗೊತ್ತಿರಲಿಲ್ಲ ಆದರೆ ಇಂದು ಎಲ್ಲರಿಗೂ ಗೊತ್ತಿದೆ ಎಂದು ಹೇಳುವ ಮೂಲಕ ತೆಲುಗು ಚಿತ್ರರಂಗದ ಖ್ಯಾತನಟ ವಿಜಯ್​ ದೇವರಕೊಂಡ ಇನ್​ಸ್ಟಾಗ್ರಾಂ ಪೋಸ್ಟ್ ಮಾಡಿದ್ದಾರೆ.

ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿ ವಿಜಯ್​ಗೆ ಅಭಿಮಾನಿಗಳಿಂದ ಶುಭಾಷಯದ ಮಹಾಪೂರವೇ ಹರಿದುಬಂದಿತ್ತು. ಇದರಿಂದ ಭಾವನಾತ್ಮಕತೆಗೊಳಗಾದ ನಟ ತಮ್ಮ ತಾಯಿ ಮಾಧವಿ ದೇವರಕೊಂಡ ಅವರೊಂದಿಗಿರುವ ಚಿತ್ರವನ್ನು ಪೋಸ್ಟ್​ ಮಾಡುವ ಮೂಲಕ ತಾಯಿ ಮೇಲಿನ ಪ್ರೀತಿಯನ್ನು ಹಂಚಿಕೊಂಡಿದ್ದಾರೆ.

ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ವರ್ಷಗಳ ಹಿಂದೆ, ನನ್ನ ಹೆಸರು, ನನ್ನ ಅಸ್ತಿತ್ವದ ಬಗ್ಗೆ ನಿಮಗೆ ತಿಳಿದಿರಲಿಲ್ಲ, ಇಂದು ನನ್ನನ್ನು ನಂಬುತ್ತೀರಿ, ಬಹಳ ಇಷ್ಟಪಡುತ್ತೀರಿ, ನಾನು ನಿಮ್ಮಿಂದ ಪ್ರೀತಿಯನ್ನು ಪಡೆದಿದ್ದೇನೆ. ನಾನು ಎಂದಿಗೂ ನಿಮ್ಮ ಮನುಷ್ಯನಾಗಿರುತ್ತೇನೆ ಎಂದು ಹೇಳಿಕೊಂಡಿದ್ದಾರೆ. ತನ್ನ ತಾಯಿ ಹಾಗೂ ಅಭಿಮಾನಿಗಳ ಮೇಲಿನ ಪ್ರೀತಿಯನ್ನು ಈ ರೀತಿ ವಿಜಯ್​ ದೇವರಕೊಂಡ ವ್ಯಕ್ತಪಡಿಸಿರುವುದು ಅಭಿಮಾನಿಗಳಿಂದ ಭಾರೀ ಮೆಚ್ಚುಗೆಯನ್ನು ಗಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net