ಚಾರ್ಲಿ ಮೀಟ್ಸ್ ಧರ್ಮ; ರಕ್ಷಿತ್ ಶೆಟ್ಟಿ ಜನ್ಮದಿನಕ್ಕೆ ಬಂತು ಮುದ್ದಾದ ಟೀಸರ್​

qw
Published on

ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಜನ್ಮದಿನಕ್ಕೆ 777 ಚಾರ್ಲಿ ಚಿತ್ರದ ಟೀಸರ್​ ಬಿಡುಗಡೆ ಆಗಿದೆ. ಲೈಫ್ ಆಫ್​ ಚಾರ್ಲಿ ಶೀರ್ಷಿಕೆಯಡಿ ಹೊರಬಂದಿರುವ ಟೀಸರ್​ನಲ್ಲಿ ಚಿತ್ರದ ಮುಖ್ಯ ಪಾತ್ರಧಾರಿ ಚಾರ್ಲಿಯ ಪರಿಚಯವನ್ನು ನಿರ್ದೇಶಕರು ಮಾಡಿಕೊಟ್ಟಿದ್ದಾರೆ. ಮುದ್ದಾದ ನಾಯಿಮರಿಯ ತರಲೆ, ತುಂಟಾಟ, ಸುತ್ತಾಟವನ್ನು ಎರಡು ನಿಮಿಷದ ಟೀಸರ್​ನಲ್ಲಿ ತೋರಿಸಿದ್ದಾರೆ ನಿರ್ದೇಶಕ ಕಿರಣ್ ರಾಜ್.

ಶೂಟಿಂಗ್ ಹಂತದಿಂದಲೂ ಒಂದಿಲ್ಲೊಂದು ರೀತಿಯಲ್ಲಿ ಸದ್ದು ಮಾಡುತ್ತಲೇ ಬಂದಿದ್ದ 777 ಚಾರ್ಲಿ ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಇದೀಗ ಬಿಡುಗಡೆ ಬಗ್ಗೆ ಬಿಸಿಬಿಸಿ ಚರ್ಚೆ ನಡೆದಿರುತ್ತಿದ್ದವು. ಆದರೆ, ಕರೊನಾ ಅದಕ್ಕೆಲ್ಲ ಬ್ರೇಕ್ ಹಾಕಿದ್ದು, ಸದ್ಯದ ಮಾಹಿತಿ ಪ್ರಕಾರ ಡಿಸೆಂಬರ್ ವೇಳೆಗೆ ಸಿನಿಮಾ ಬಿಡುಗಡೆ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ವಿಶೇಷ ಎಂಬಂತೆ ಕನ್ನಡದ ಜತೆಗೆ ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿಯೂ ಈ ಸಿನಿಮಾ ಸಿದ್ಧವಾಗಿದ್ದು, ಸ್ಟಾರ್​ ಹೀರೋಗಳು ಸಿನಿಮಾ ವಿತರಣೆಯ ಹಕ್ಕುಗಳನ್ನು ಪಡೆದುಕೊಂಡಿದ್ದಾರೆ. ಟೀಸರ್ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


ನೋಬಿನ್ ಪೌಲ್ ಸಂಗೀತ ಮತ್ತು ಹಿನ್ನೆಲೆ ಸಂಗೀತದ ಜವಾಬ್ದಾರಿ ಹೊತ್ತಿದ್ದಾರೆ. ಜಿ​ಎಸ್​ ಗುಪ್ತಾ ಮತ್ತು ಪರಮ್ವಾ ಸ್ಟುಡಿಯೋಸ್ ಬ್ಯಾನರ್​ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸಂಗೀತಾ ಶೃಂಗೇರಿ ನಾಯಕಿಯಾಗಿ ನಟಿಸಿದರೆ, ರಾಜ್ ಬಿ ಶೆಟ್ಟಿ, ಬಾಬಿ ಸಿಂಹ, ದಾನಿಶ್ ಸೇಠ್ ಪ್ರಮುಖ ಪಾತ್ರದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net