ಈ ವಾರ ಒಟಿಟಿ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್ ಆಗುವ ದಕ್ಷಿಣ ಭಾರತದ ಸಿನಿಮಾಗಳಿವು..South Indian movies

South Indian movies
South Indian movies
Published on
South Indian movies:  ಪ್ರತಿ ವಾರವೂ ಒಟಿಟಿ ಸಿನಿಮಾ ಪ್ಲಾಟ್​ಫಾರ್ಮ್​ನಲ್ಲಿ ಸಿನಿಮಾಗಳು ರಿಲೀಸ್ ಆಗುತ್ತದೆ. ಥೀಯೇಟರ್​ನಲ್ಲಿ ನೆಚ್ಚಿನ ನಟರ, ನಟಿಯರ ಸಿನಿಮಾ ನೋಡಲಾಗದ ಅಭಿಮಾನಿಗಳು HD ಕ್ವಾಲಿಟಿಯಲ್ಲಿ,  ಯಾವ ಭಾಷೆಯಲ್ಲಿ ಬೇಕೋ ಆ ಭಾಷೆಯಲ್ಲಿ ಒಟಿಟಿಯಲ್ಲಿ ವೀಕ್ಷಿಸುತ್ತಾರೆ. ಇನ್ನು ಕೆಲವರು  ಮಹತ್ವವುಳ್ಳ ವೆಬ್​ಸೀರಿಸ್​ಗಳನ್ನು ಆನ್​​ಲೈನ್​ನಲ್ಲೇ ವೀಕ್ಷಿಸಿ ಕಣ್ತುಂಬಿಕೊಳ್ಳುತ್ತಾರೆ. ಸದ್ಯ ಈ ವಾರ ಅಂದೆ ಜೂ.22ರಿಂದ  ಜೂನ್​26ರವೆಗೂ ಒಟಿಟಿಯಲ್ಲಿ ರಿಲೀಸ್​ ಆಗುವ ದಕ್ಷಿಣ ಭಾರತದ ಸಿನಿಮಾಗಳ ಪಟ್ಟಿ ಇಲ್ಲಿದೆ ನೋಡಿ..

ಈ ವಾರ ಒಟಿಟಿಯಲ್ಲಿ ರಿಲೀಸ್ ಆಗುವ ಸಿನಿಮಾಗಳು ಇವು

ಬ್ಲಾಸ್ಟ್(ತಮಿಳು)
ಎಲ್ಲಿ ನೋಡಬೇಕು: ನೆಟ್‌ಫ್ಲಿಕ್ಸ್ 
ಪಾತ್ರವರ್ಗ: ಅರ್ಜುನ್​ ಸರ್ಜಾ, ಪ್ರೀತಿ ಮುಕುಂದನ್​​​
ಬಿಡುಗಡೆ ದಿನಾಂಕ: ಜೂನ್ 25

ಅನಂತನ್ ಕಾಡು

ಬಿಡುಗಡೆ ದಿನಾಂಕ: 25 ಜೂನ್ 2026
ಪಾತ್ರವರ್ಗ: ಆರ್ಯ, ಇಂದ್ರನ್ಸ್, ರೆಜಿನಾ ಕಸ್ಸಂದ್ರ, ಸುನಿಲ್ ಮತ್ತು ನಿಖಿಲಾ ವಿಮಲ್
ನಿರ್ದೇಶಕ: ಜಿಯೆನ್ ಕೃಷ್ಣಕುಮಾರ್
ಎಲ್ಲಿ ವೀಕ್ಷಿಸಬೇಕು: ಚಿತ್ರಮಂದಿರಗಳಲ್ಲಿ

ಲಿಂಗಂ

ಬಿಡುಗಡೆ ದಿನಾಂಕ: 26 ಜೂನ್ 2026
ಪಾತ್ರವರ್ಗ: ಕತೀರ್, ದಿವ್ಯ ಭಾರತಿ, ಸತ್ಯ ಮತ್ತು ಪೂರ್ಣಿಮಾ ರವಿ
ನಿರ್ದೇಶನ: ಲಕ್ಷ್ಮಿ ಸರವಣಕುಮಾರ್
ಎಲ್ಲಿ ವೀಕ್ಷಿಸಬೇಕು: ಜಿಯೋ ಹಾಟ್​ಸ್ಟಾರ್​
ಇದು ತಮಿಳಿನ ಕ್ರೈಂ ಥ್ರಿಲ್ಲರ್​ ಸಿನಿಮಾವಾಗಿದೆ. ಪೊಲೀಸ್ ಆಗಬೇಕೆಂದುಕೊಂಡವನ ಜೀವನದಲ್ಲಿ ಏನೆಲ್ಲ ಜರುಗುತ್ತದೆ. ಆಮಧ್ಯೆ ಸಂಭವಿಸುವ ಪ್ರೀತಿ, ಅಪರಾಧದ ಸುತ್ತ ಸಿನಿಮಾವನ್ನು ಕಟ್ಟಿಕೊಡಲಾಗಿದೆ. 

ಮರೀಚಿಕಾ (ತೆಲುಗು)

ಪಾತ್ರವರ್ಗ: ಅನುಪಮಾ ಪರಮೇಶ್ವರನ್ ಅವರ 'ಮರೀಚಿಕಾ' ಕೂಡ. ಅನುಪಮಾ ಪರಮೇಶ್ವರನ್, ರೆಜಿನಾ ಮತ್ತು ವಿರಾಜ್ ಅಶ್ವಿನ್ ನಟಿಸಿರುವ ಈ ಸಿನಿಮಾ ಮಾನಸಿಕ ನಿಗೂಢ ಥ್ರಿಲ್ಲರ್ ಸಿನಿಮಾ.
ಎಲ್ಲಿ ವೀಕ್ಷಿಸಬೇಕು: ಪ್ರೈಂ ವಿಡಿಯೋ
ನಿರ್ದೇಶಕ: ಸತೀಶ್ ಕಾಸೆಟ್ಟಿ.

ಕಪ್  (ಮಲಯಾಳಂ)

ಪಾತ್ರವರ್ಗ: ಬೆಸಿಲ್ ಜೋಸೆಫ್, ಗುರು ಸೋಮಸುಂದರಂ ಮತ್ತು ಅನಿಕಾ ಸುರೇಂದ್ರನ್ ನಟಿಸಿದ್ದಾರೆ
ನಿರ್ದೇಶನ: ಸಂಜು ವಿ ಸ್ಯಾಮ್ಯುಯೆಲ್
ಎಲ್ಲಿ ವೀಕ್ಷಿಸಬೇಕು: ಮನೋರಮಾ ಮ್ಯಾಕ್ಸ್
ಬಿಡುಗಡೆ ದಿನಾಂಕ: ಜೂನ್ 25
ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಯೊಬ್ಬನ ಹೈಸ್ಕೂಲ್​ ಜೀವನದ ಸುತ್ತ ಹೆಣೆದ ಕತೆ ಇದಾಗಿದೆ.

ಮುತ್ತಾಸಿ (ಮಲಯಾಳಂ)

ಮುತ್ತಾಸಿ ಮಲಯಾಳಂ ಜಾನಪದ-ಹಾರರ್ ಮತ್ತು ನಿಗೂಢ ಥ್ರಿಲ್ಲರ್ ವೆಬ್ ಸರಣಿ
ಪಾತ್ರವರ್ಗ: ಅಮಿತ್ ಚಾಕಲಕ್ಕಲ್, ಅಖಿಲಾ, ರ್ಹಾನ್ ಹೈದರ್
ನಿರ್ದೇಶನ: ನಂದುಲಾಲ್ ಎಂ.ಎಸ್.
ಎಲ್ಲಿ ವೀಕ್ಷಿಸಬೇಕು: ZEE5 
ಬಿಡುಗಡೆ ದಿನಾಂಕ: ಜೂನ್ 26, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net