131 ನುರಿತ ಕರಕುಶಲಕರ್ಮಿಗಳಿಂದ 256 ಗಂಟೆಗಳಲ್ಲಿ ಸಿದ್ಧವಾದ 'ರೂಬಿ' ವೆಡ್ಡಿಂಗ್ ರಿಂಗ್; ಆಮೀರ್ ಖಾನ್ ಪತ್ನಿಗೆ ತೊಡಿಸಿದ ಉಂಗುರದ ವಿಶೇಷತೆ ಏನು?

Aamir Khan Gauri Spratt wedding ruby ring
Aamir Khan Gauri Spratt wedding ruby ring
Published on

ಪ್ರಮುಖ ಮುಖ್ಯಾಂಶಗಳು

  • ಬಾಂದ್ರಾದ ನಿವಾಸದಲ್ಲಿ ಅಮೀರ್ ಖಾನ್-ಗೌರಿ ವಿವಾಹ.
  • ಗೌರಿ ತೊಟ್ಟಿದ್ದ ಉಂಗುರ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಸುದ್ದಿ
  • ಉಂಗುರದಲ್ಲಿರುವ ಮಾಣಿಕ್ಯವನ್ನು ಆಫ್ರಿಕಾದ ಮಡಗಾಸ್ಕರ್‌ನಿಂದ ತರಿಸಲಾಗಿದೆ.
  • ಉಂಗುರ ಸಿದ್ಧಪಡಿಸಲು 131 ಜನ ಕರಕುಶಲಕರ್ಮಿಗಳಿಂದ 256 ಗಂಟೆಗಳ ಕೆಲಸ.
ಮುಂಬೈ: ಜುಲೈ5ರಂದು ಆಮೀರ್​ ಖಾನ್​ ಹೊಸದಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಬಹುಕಾಲದ ಗೆಳತಿ ಗೌರಿ ಸ್ಪ್ರಾಟ್ ಜೊತೆಗೆ ಮೂರನೇ ಮದುವೆಯಾಗಿದ್ದಾರೆ. ಮಕ್ಕಳು ಹಾಗೂ ಆಪ್ತರು, ಸ್ನೇಹಿತ ಸಮ್ಮುಖದಲ್ಲಿ ಈ ಸಮಾರಂಭ ಸರಳವಾಗಿ ನೆರವೇರಿತು.
ಮದುವೆ ದಿನ ಆಮೀರ್​ ಖಾನ್​ ಬ್ರೋಚ್ ಧರಿಸಿದ ಐವರಿ ಧೋತಿ-ಕುರ್ತಾದಲ್ಲಿ ಮಿಂಚುತ್ತಿದ್ದರು. 60ಕ್ಕೂ ಹೆಚ್ಚು ವಯಸ್ಸಾದರೂ ಅವರ ಮುಖದಲ್ಲಿ ನಾಚಿಕೆ, ಸಂತೋಷ ಎದ್ದು ಕಾಣುತ್ತಿತ್ತು. ಇನ್ನು ಗೌರಿ ಅವರು ತಿಳಿ ಬಣ್ಣದ ಲೆಹೆಂಗಾ, ಪದರಗಳ ಹಾರ ಹಾಗೂ ಮಲ್ಲಿಗೆ ಮುಡಿದು ಸುಂದರವಾಗಿ ಕಾಣುತ್ತಿದ್ದರು. ಆದರೆ, ಈ ಮದುವೆಯಲ್ಲಿ ಎಲ್ಲರ ಗಮನ ಸೆಳೆದಿದ್ದು ಮಾತ್ರ ಗೌರಿ ಅವರ ಕೈಯಲ್ಲಿದ್ದ ಆಕರ್ಷಕ ಮಾಣಿಕ್ಯದ ವೆಡ್ಡಿಂಗ್ ರಿಂಗ್!

ಉಂಗುರ ತಯಾರಿಸಿದ ಕಂಪನಿ ಹೇಳಿದ್ದೇನು?

ಹೌದು, ಐಷಾರಾಮಿ ಜ್ಯುವೆಲ್ಲರಿ ಬ್ರ್ಯಾಂಡ್ 'ಕ್ವೀನ್' ಸಂಸ್ಥೆ ವಿನ್ಯಾಸಗೊಳಿಸಿರುವ ರೂಬಿ ಉಂಗುರ ಸದ್ಯ ಸೆಂಟರ್​ ಆಫ್​ ಆಟ್ರ್ಯಾಕ್ಷನ್​ ಆಗಿದೆ. ಈ ವೆಡ್ಡಿಂಗ್​ ರಿಂಗ್​ ಬಗ್ಗೆ ಕ್ವೀನ್ ಸಂಸ್ಥೆಯ ಸಹ-ಸ್ಥಾಪಕ ಮತ್ತು ಸಿಇಒ ಅಮಿತ್ ಕುಮಾರ್ ಮಾಧ್ಯಮದ ಜೊತೆಗೆ ಮಾಹಿತಿ ಹಂಚಿಕೊಂಡಿದ್ದು ಹೀಗೆ..

ಮಡಗಾಸ್ಕರ್ ಮಾಣಿಕ್ಯಕ್ಕಾಗಿ ತೀವ್ರ ಹುಡುಕಾಟ

ಈ ಉಂಗುರಕ್ಕೆ ಅಳವಡಿಸುವ ಮಾಣಿಕ್ಯಕ್ಕಾಗಿ ಭಾರೀ ಹುಡುಕಾಟ ನಡೆಸಿದ್ದೆವು ಬರೋಬ್ಬರಿ ಮೂರಕ್ಕಿಂತ ಹೆಚ್ಚು ತಿಂಗಳು ತೆಗೆದುಕೊಂಡೆವು. ಜಗತ್ತಿನ ಹತ್ತು ಲಕ್ಷ ಮಾಣಿಕ್ಯಗಳಲ್ಲಿ ಒಂದಷ್ಟೇ ಅಪರೂಪವಾಗಿರುವ ಮಡಗಾಸ್ಕರ್ ಮಾಣಿಕ್ಯ ಇದಾಗಿದೆ. ಆಫ್ರಿಕಾದ ಪೂರ್ವ ಕರಾವಳಿಯಲ್ಲಿರುವ ಮಡಗಾಸ್ಕರ್​​ನಿಂದ ಮಾಣಿಕ್ಯ ತರಲಾಗಿದೆ. ಈ ವೆಡ್ಡಿಂಗ್ ರಿಂಗ್ ಅನ್ನು ಅಕ್ಷರಶಃ ರಾಜಮನೆತನದ ಶೈಲಿಯಲ್ಲಿಯೇ ವಿನ್ಯಾಸಗೊಳಿಸಲಾಗಿದೆ.

256 ಗಂಟೆ, 131 ಕುಶಲಕರ್ಮಿಗಳು ಕೆಲಸ

ಉಂಗುರ ತಯಾರಿ ಮಾಡಲು 256 ಗಂಟೆಗಳಿಗೂ ಹೆಚ್ಚು ಸಮಯ ಹಿಡಿಯಿತು. 131 ನುರಿತ ಕುಶಲಕರ್ಮಿಗಳು ಕೆಲಸ ಮಾಡಿದ್ದಾರೆ ಎನ್ನಲಾಗಿದೆ. ಇದೊಂದು ಸಾಮಾನ್ಯ ಉಡುಗೊರೆ ಎಂದು ಕಾಣೋದಿಲ್ಲ. ಬದಲಾಗಿ ತಲತಲಾಂತರದಿಂದ ಬಂದಂತಹ ಉಂಗುರ ಯಾರಿಗೋ ಉಡುಗೊರೆಯಾಗಿ ಕೊಟ್ಟಂತೆ ಕಾಣಿಸುತ್ತದೆ ಎಂದು ಸಿಇಒ ಅಮಿತ್ ಕುಮಾರ್ ಮಾಧ್ಯಮದ ಜೊತೆ ಮಾಹಿತಿ ಹಂಚಿಕೊಂಡರು.

ರೂಬಿ ಉಂಗುರ ವಿನ್ಯಾಸ ಹೇಗಿದೆ?

ಸಾಮಾನ್ಯವಾಗಿ ಸೆಲಬ್ರೆಟಿಗಳು ಸಹ ಸಿಂಪಲ್​ ಉಂಗುರಗಳನ್ನು ತೊಡಿಸುತ್ತಾರೆ. ಆದರೆ, ಈ ಉಂಗುರದ ವಿನ್ಯಾಸ ತೀರಾ ಭಿನ್ನವಾಗಿದೆ. ಆಫ್ರಿಕಾ ಮಡಗಾಸ್ಕರ್ ಮಾಣಿಕ್ಯವನ್ನು ಕಿರೀಟದಂತಹ ಚಿನ್ನದ ವಿನ್ಯಾಸದೊಳಗೆ ಅಳವಡಿಸಲಾಗಿದೆ. 'ಕ್ಯಾಬೋಚನ್ ಕಟ್' ನೀಡಲಾಗಿದೆ. ಅಂದರೆ, ಅಂದರೆ ಮೂಲೆಗಳಿಲ್ಲದೆ ನಯವಾಗಿ ಮತ್ತು ಗುಮ್ಮಟದ ಆಕಾರದಲ್ಲಿ ಹೊಳಪು ನೀಡಲಾಗಿದೆ. ಇದು ರತ್ನದ ದಟ್ಟವಾದ ಕೆಂಪು ಬಣ್ಣವನ್ನು ಮತ್ತಷ್ಟು ಉಜ್ವಲವಾಗಿ ಪ್ರದರ್ಶಿಸುತ್ತದೆ.
ಚಿನ್ನದ ಕಿರೀಟದಂತಹ ವಿನ್ಯಾಸದ ಅಂಚುಗಳು ಮೇಲಕ್ಕೆ ಎದ್ದು ಕಾಣುವಂತೆ ಮಾಡಲಾಗಿದ್ದು, ಅದರ ಸುತ್ತಲೂ ಸೂಕ್ಷ್ಮವಾದ ಮಣಿ ಮಾದರಿಯಕೆತ್ತನೆ ಇದೆ. ಇಂತಹ ವಿನ್ಯಾಸಗಳನ್ನು ರಾಜಮನೆತನದ ಪಟ್ಟಾಭಿಷೇಕದ ಒಡವೆಗಳಲ್ಲಿ ಬಳಸಲಾಗುತ್ತಿತ್ತು. ಅಪರೂಪದ ಮಡಗಾಸ್ಕರ್ ಮಾಣಿಕ್ಯ, ವಜ್ರದ ಸಣ್ಣ ವಿನ್ಯಾಸಗಳು ಮತ್ತು ಅದ್ಭುತ ಕರಕುಶಲತೆಯನ್ನು ಹೊಂದಿರುವ ಈ ಉಂಗುರವು ರಾಜಮನೆತನದ ಭವ್ಯತೆಯನ್ನು ಸಾರುತ್ತದೆ.

ಆಮೀರ್​ ಮದುವೆ ಜೀವನ

ಆಮೀರ್​ ಖಾನ್​ ಅವರು 1986 ರಲ್ಲಿ ರೀನಾ ದತ್ತಾ ಅವರನ್ನು ವಿವಾಹವಾದರು. 2002ರಲ್ಲಿ ವೈಯಕ್ತಿಕ ಕಾರಣದಿಂದ ಡಿವೋರ್ಸ್​​ ಪಡೆದುಕೊಂಡರು. 2005 ರಲ್ಲಿ ಚಲನಚಿತ್ರ ನಿರ್ಮಾಪಕಿ ಕಿರಣ್ ರಾವ್ ಅವರನ್ನು ಮದುವೆ ಮಾಡಿಕೊಂಡರು. 15 ವರ್ಷಗಳ ಸಹಜೀವನ ನಡೆಸಿದ ಅವರು 2021 ರಲ್ಲಿ ಇಬ್ಬರು ಡಿವೋರ್ಸ್​ ಪಡೆದುಕೊಂಡರು, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net