ಹೀಗೆ, ನಟಿ ಶಿಲ್ಪಾ ಶೆಟ್ಟಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು 21 ವರ್ಷದ ಹರ್ನಾಜ್ ಸಂಧುಗೆ ಶುಭಾಶಯಗಳನ್ನು ತಿಳಿಸಿದ್ದಾರೆ. ಏತನ್ಮಧ್ಯೆ, ಚಂಡೀಗಢ ಮೂಲದ ಹರ್ನಾಜ್ ಅವರು ನಿಜವಾದ ದೇಸಿ ಶೈಲಿಯಲ್ಲಿ "ಚಕ್ ದೇ ಫಟ್ಟೇ, ಇಂಡಿಯಾ!'' ಎಂದು ಹೇಳುತ್ತಾ ತಮ್ಮ ಅಪರೂಪದ ಈ ಗೆಲುವನ್ನು ಸಂಭ್ರಮಿಸಿದರು. ವಿಡಿಯೋ ಒಂದರಲ್ಲಿ ಸಂಧು, "ಇಡೀ ವಿಶ್ವಕ್ಕೆ ನಮಸ್ತೆ. ಮೊದಲ ದಿನದಿಂದ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಪ್ರತಿಯೊಬ್ಬರಿಗೂ ತುಂಬಾ ಧನ್ಯವಾದಗಳು. ಯಾವಾಗಲೂ ನನ್ನನ್ನು ನಂಬಿ ಮತ್ತು ನನಗೆ ಸಹಾಯ ಮಾಡಿದ ಎಲ್ಲರಿಗೂ ಮತ್ತೆ ಧನ್ಯವಾದಗಳು ಮತ್ತು ಎಲ್ಲರನ್ನು ಪ್ರೀತಿಸುತ್ತೇನೆ.", ಎಂದು ಗೆಲುವಿನ ನಂತರ ತಮ್ಮ ಮೊದಲ ಸಂದೇಶವನ್ನು ಎಲ್ಲರಿಗೂ ನೀಡಿದ್ದಾರೆ. ಜೊತೆಗೆ, ಈಗ #CongratulationsHarnaazSandhu ಎಂಬ ಹ್ಯಾಶ್ಟ್ಯಾಗ್ ಟ್ವಿಟರ್ನಲ್ಲಿ ಟ್ರೆಂಡಿಂಗ್ ಆಗಿದೆ.