ಧನುಷ್-ಐಶ್ವರ್ಯಾ ವಿಚ್ಛೇದನದ ಅಸಲಿ ಕಾರಣ ಬಹಿರಂಗ: ಕೊನೆಗೂ ಸತ್ಯ ಬಿಚ್ಚಿಟ್ಟ ಆಪ್ತ ಗೆಳೆಯ! Aishwarya and Dhanush

ಧನುಷ್-ಐಶ್ವರ್ಯಾ ವಿಚ್ಛೇದನದ ಅಸಲಿ ಕಾರಣ ಬಹಿರಂಗ: ಕೊನೆಗೂ ಸತ್ಯ ಬಿಚ್ಚಿಟ್ಟ ಆಪ್ತ ಗೆಳೆಯ! Aishwarya and Dhanush
ಧನುಷ್-ಐಶ್ವರ್ಯಾ ವಿಚ್ಛೇದನದ ಅಸಲಿ ಕಾರಣ ಬಹಿರಂಗ: ಕೊನೆಗೂ ಸತ್ಯ ಬಿಚ್ಚಿಟ್ಟ ಆಪ್ತ ಗೆಳೆಯ! Aishwarya and Dhanush
Published on

ಪ್ರಮುಖ ಮುಖ್ಯಾಂಶಗಳು

  • ಹೆಂಡತಿಯಿಂದ ದೂರವಿರಲು ಸಿನಿಮಾಗಳೇ ಆಸರೆ! ಧನುಷ್-ಐಶ್ವರ್ಯಾ ಬೇರ್ಪಡಿಕೆಯ ಹಿಂದಿದೆ ಕಣ್ಣೀರಿನ ಕಥೆ
  • ವರ್ಷಗಳಿಂದಲೇ ದೂರಾಗಿದ್ದರು! ರಜನಿಕಾಂತ್ ಮಗಳ ಡಿವೋರ್ಸ್ ಸ್ಟೋರಿಯ ಕಹಿ ಸತ್ಯ
  • ದೂರಾದರೂ ಮಕ್ಕಳಿಗಾಗಿ ಒಂದಾಗುವ ಧನುಷ್ ಮತ್ತು ಐಶ್ವರ್ಯಾ ನಡುವೆ ಇಲ್ಲ ಯಾವುದೇ ದ್ವೇಷ
Aishwarya and Dhanush : ಕಾಲಿವುಡ್​ ಸ್ಟಾರ್​ ನಟ ಧನುಷ್ ಮತ್ತು ಹಿರಿಯ ನಟ ರಜನಿಕಾಂತ್ ಅವರ ಪುತ್ರಿ, ನಿರ್ದೇಶಕಿ ಐಶ್ವರ್ಯಾ 2004 ರಲ್ಲಿ ವಿವಾಹವಾಗಿ, 18 ವರ್ಷಗಳ ಸುದೀರ್ಘ ದಾಂಪತ್ಯ ಜೀವನದ ನಂತರ 2022 ರಲ್ಲಿ ತಮ್ಮ ಡಿವೋರ್ಸ್​ ಅನ್ನು ಘೋಷಿಸಿದ್ದರು. ತದನಂತರ ನವೆಂಬರ್ 27, 2024 ರಂದು ನ್ಯಾಯಾಲಯವು ಇವರಿಗೆ ಅಧಿಕೃತವಾಗಿ ವಿಚ್ಛೇದನ ಮಂಜೂರು ಮಾಡಿತಾದರೂ, ಈ ದಂಪತಿ ತಮ್ಮ ಮಕ್ಕಳ ಭವಿಷ್ಯಕ್ಕಾಗಿ ಆಗಾಗ್ಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿರುತ್ತಾರೆ. ಇಷ್ಟು ವರ್ಷಗಳ ಕಾಲ ಜೊತೆಯಾಗಿದ್ದ ಈ ಜೋಡಿಯ ನಡುವೆ ಮುನಿಸು ಉಂಟಾಗಲು ಮತ್ತು ವಿಚ್ಛೇದನದ ಹಾದಿ ಹಿಡಿಯಲು ಅಸಲಿ ಕಾರಣವೇನು ಎಂಬುದು ಅಭಿಮಾನಿಗಳಲ್ಲಿ ದೊಡ್ಡ ಪ್ರಶ್ನೆಯಾಗಿಯೇ ಉಳಿದಿತ್ತು, ಆದರೆ ಇದೀಗ 'ಇಂಡಿಯಾ ಟುಡೇ' ಪ್ರಕಟಿಸಿರುವ ಇತ್ತೀಚಿನ ವರದಿಯೊಂದು ಇವರ ವಿಚ್ಛೇದನದ ಹಿಂದಿನ ನಿಖರ ಕಾರಣಗಳನ್ನು ಬಹಿರಂಗಪಡಿಸಿದೆ.
ಸೂಪರ್‌ಸ್ಟಾರ್ ರಜನಿಕಾಂತ್ ಅವರ ಹಿರಿಯ ಪುತ್ರಿ ಐಶ್ವರ್ಯಾ ಮತ್ತು ನಟ ಧನುಷ್ 2004ರ ನವೆಂಬರ್ 18 ರಂದು ವಿವಾಹವಾಗಿದ್ದರು. ಧನುಷ್ ನಟನೆಯ 'ಕಾದಲ್ ಕೊಂಡೇನ್' ಸಿನಿಮಾ ಬಿಡುಗಡೆಯಾದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಮೊದಲ ಬಾರಿಗೆ ಪರಿಚಯವಾಗಿತ್ತು. ಮದುವೆಯ ನಂತರ ಈ ದಂಪತಿಗೆ 2006 ರಲ್ಲಿ ಹಿರಿಯ ಮಗ 'ಯಾತ್ರಾ' ಮತ್ತು 2010 ರಲ್ಲಿ ಎರಡನೇ ಮಗ 'ಲಿಂಗಾ' ಜನಿಸಿದರು.
ಸಿನಿ ಉದ್ಯಮದಲ್ಲಿ ಮಾದರಿ ಜೋಡಿಯಾಗಿ ಬರೋಬ್ಬರಿ 18 ವರ್ಷಗಳ ಕಾಲ ಜೊತೆಯಾಗಿದ್ದ ಈ ದಂಪತಿ, ಜನವರಿ 17, 2022 ರಂದು ಹಠಾತ್ತನೆ ತಮ್ಮ ಬೇರ್ಪಡಿಕೆಯನ್ನು ಘೋಷಿಸುವ ಮೂಲಕ ಚಿತ್ರರಂಗ ಹಾಗೂ ಅಭಿಮಾನಿಗಳಿಗೆ ದೊಡ್ಡ ಆಘಾತ ನೀಡಿದ್ದರು. ತಮ್ಮ ಜಂಟಿ ಹೇಳಿಕೆಯಲ್ಲಿ, ಇಷ್ಟು ವರ್ಷಗಳ ಸುದೀರ್ಘ ಪಯಣವು ಪರಸ್ಪರ ಬೆಳವಣಿಗೆ, ತಿಳುವಳಿಕೆ ಮತ್ತು ಹೊಂದಾಣಿಕೆಯಿಂದ ಕೂಡಿತ್ತು ಎಂದಿದ್ದ ಜೋಡಿ, ಇನ್ಮುಂದೆ ತಮ್ಮ ಹಾದಿಗಳು ಬದಲಾಗುತ್ತಿದ್ದು, ವ್ಯಕ್ತಿಗತವಾಗಿ ತಮ್ಮನ್ನು ತಾವು ಅರ್ಥಮಾಡಿಕೊಳ್ಳಲು ಈ ಸಮಯದ ಅಗತ್ಯವಿದೆ ಎಂದು ತಿಳಿಸಿದ್ದರು.
ಆದರೆ, ತಾವಿಬ್ಬರೂ ದೂರಾಗಲು ಇರುವ ಅಸಲಿ ಕಾರಣವನ್ನು ಈ ದಂಪತಿ ಎಲ್ಲೂ ಬಹಿರಂಗಪಡಿಸಿರಲಿಲ್ಲ. ಇಬ್ಬರ ನಡುವಿನ ಕೌಟುಂಬಿಕ ಕಲಹಗಳು ಮತ್ತು ವೈಯಕ್ತಿಕ ಭಿನ್ನಾಭಿಪ್ರಾಯಗಳೇ ಇದಕ್ಕೆ ಕಾರಣ ಎಂಬ ದೃಢಪಡದ ವದಂತಿಗಳು ಹರಿದಾಡಿದ್ದವು. ಆದರೆ, ಇವರಿಬ್ಬರ ಅಧಿಕೃತ ವಿಚ್ಛೇದನದ ನಂತರ 'ಇಂಡಿಯಾ ಟುಡೇ' ಪ್ರಕಟಿಸಿದ ವರದಿಯ ಪ್ರಕಾರ, ಧನುಷ್ ಅವರ ಸಿನಿಮಾ ವೃತ್ತಿಜೀವನದ ಬಿಡುವಿಲ್ಲದ ವೇಳಾಪಟ್ಟಿ ಮತ್ತು ಅತಿಯಾದ ಸಿನಿಮಾಗಳ ಮೇಲಿನ ಗಮನವೇ ಅವರ ವೈವಾಹಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಿದೆ ಎಂದು ಇವರಿಬ್ಬರ ಆಪ್ತ ಸ್ನೇಹಿತರೊಬ್ಬರು ಬಹಿರಂಗಪಡಿಸಿದ್ದಾರೆ.
ನಟ ಧನುಷ್ ಅವರು ತೀವ್ರವಾಗಿ ಕೆಲಸದ ಅಮಲಿನಲ್ಲಿ ಮುಳುಗಿರುವ ವ್ಯಕ್ತಿಯಾಗಿದ್ದು (ವರ್ಕಹಾಲಿಕ್), ಅವರ ನಿರಂತರ ಪ್ರವಾಸಗಳು, ವಿದೇಶಿ ಶೂಟಿಂಗ್‌ಗಳು ಮತ್ತು ಒಪ್ಪಿಕೊಂಡ ಸಿನಿಮಾಗಳನ್ನು ಮುಗಿಸುವ ಗಡಿಬಿಡಿಯು ಅವರ ಕೌಟುಂಬಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರಿದ್ದಾಗಿ ಅವರ ಆಪ್ತ ಸ್ನೇಹಿತರೊಬ್ಬರು ಬಹಿರಂಗಪಡಿಸಿದ್ದಾರೆ.
ವೈವಾಹಿಕ ಜೀವನದಲ್ಲಿ ಏನಾದರೂ ಅಸಮಾಧಾನ ಅಥವಾ ಭಿನ್ನಾಭಿಪ್ರಾಯಗಳು ತಲೆದೋರಿದಾಗ ಧನುಷ್ ಅವರು ಹೆಂಡತಿಯಿಂದ ದೂರವಿರಲು ಕೆಲಸವನ್ನೇ ಒಂದು ಮಾರ್ಗವನ್ನಾಗಿ ಮಾಡಿಕೊಳ್ಳುತ್ತಿದ್ದರು ಮತ್ತು ತಕ್ಷಣವೇ ಮತ್ತೊಂದು ಸಿನಿಮಾ ಪ್ರಾಜೆಕ್ಟ್‌ಗೆ ಧುಮುಕುತ್ತಿದ್ದರು. ಹೀಗಾಗಿ, ಇವರಿಬ್ಬರ ಬೇರ್ಪಡಿಕೆಗೆ ಯಾವುದೇ ದಿಢೀರ್ ಭಿನ್ನಾಭಿಪ್ರಾಯ ಕಾರಣವಲ್ಲ, ಬದಲಿಗೆ ಈ ದಂಪತಿ ಕಳೆದ ಹಲವು ವರ್ಷಗಳಿಂದಲೇ ಪರಸ್ಪರ ಮಾನಸಿಕವಾಗಿ ದೂರಾಗಿದ್ದರು ಎಂದು ಈ ವರದಿ ತಿಳಿಸಿದೆ.
ವಿಚ್ಛೇದನದ ನಂತರವೂ ಧನುಷ್ ಹಾಗೂ ಐಶ್ವರ್ಯಾ ನಡುವೆ ಯಾವುದೇ ರೀತಿಯ ದ್ವೇಷ ಅಥವಾ ಕಹಿ ಭಾವನೆಗಳಿಲ್ಲ ಎಂದು ವರದಿಗಳು ತಿಳಿಸಿದ್ದು, ಇಬ್ಬರೂ ಯಾವಾಗಲೂ ತಮ್ಮಿಬ್ಬರು ಗಂಡು ಮಕ್ಕಳ ಭವಿಷ್ಯ ಹಾಗೂ ಆರೈಕೆಗೆ ಮೊದಲ ಆದ್ಯತೆ ನೀಡುತ್ತಾರೆ. ಮಕ್ಕಳ ಶಾಲಾ-ಕಾಲೇಜುಗಳ ಕಾರ್ಯಕ್ರಮಗಳಿಗೆ ಇಂದಿಗೂ ಇವರಿಬ್ಬರು ಒಟ್ಟಿಗೆ ಹಾಜರಾಗುತ್ತಿದ್ದು, ತಮ್ಮ ಬೇರ್ಪಡಿಕೆಯನ್ನು ಘೋಷಿಸಿದ ಎರಡು ವರ್ಷಗಳ ನಂತರ ಚೆನ್ನೈನ ಕೌಟುಂಬಿಕ ನ್ಯಾಯಾಲಯದಲ್ಲಿ ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 13B ಅಡಿಯಲ್ಲಿ ಪರಸ್ಪರ ಒಪ್ಪಿಗೆಯ ಮೂಲಕ (ಮ್ಯೂಚುಯಲ್ ಕನ್ಸೆಂಟ್) ಅಧಿಕೃತವಾಗಿ ವಿಚ್ಛೇದನ ಪಡೆದುಕೊಂಡಿದ್ದಾರೆ, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net