'ಜೈಲರ್​ 2', 'ರಣಬಾಲಿ'... ಅಕ್ಟೋಬರ್​ನಲ್ಲಿ ರಿಲೀಸ್​ ಆಗುತ್ತಿವೆ ಬರೋಬ್ಬರಿ 16 ಬಹುನಿರೀಕ್ಷಿತ ಸೌತ್​ ಸಿನಿಮಾಗಳು | South Films

ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳಿಗೆ ತುತ್ತಾಗಿ ಬಾಕ್ಸ್ ಆಫೀಸ್​ ರೇಸ್​ನಿಂದಲೇ ಹೊರಬಿದ್ದಿದೆ. ಮತ್ತೊಂದೆಡೆ, ನಿರ್ಮಾಪಕರು ಹಾಕಿದ್ದ ಬಂಡವಾಳವನ್ನೂ ಈ ಚಿತ್ರಗಳು ತಲುಪುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂಬುದು ನಿಜಕ್ಕೂ ಬೇಸರದ ಸಂಗತಿ.
South Films
'ಜೈಲರ್​ 2', 'ರಣಬಾಲಿ'... ಅಕ್ಟೋಬರ್​ನಲ್ಲಿ ರಿಲೀಸ್​ ಆಗುತ್ತಿವೆ ಬರೋಬ್ಬರಿ 19 ಬಹುನಿರೀಕ್ಷಿತ ಸಿನಿಮಾಗಳು | South Films
Published on: 

ಬೆಂಗಳೂರು: ಈ ವರ್ಷದ ಮೊದಲಾರ್ಧ ಮುಗಿಸಿ ದ್ವಿತೀಯಾರ್ಧ ಕಡೆಗ ಮುಖ ಮಾಡಿರುವ ಭಾರತೀಯ ಚಲನಚಿತ್ರೋದ್ಯಮದಿಂದ ಹಲವು ಜಾನರ್​ನ ಬಹುನಿರೀಕ್ಷಿತ ಸಿನಿಮಾಗಳೇ ಬೆಳ್ಳಿಪರದೆಗೆ ಎಂಟ್ರಿಕೊಡುತ್ತಿವೆ. ಈಗಾಗಲೇ ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಚಿತ್ರರಂಗದಿಂದ ಸಾಕಷ್ಟು ಚಿತ್ರಗಳು ತೆರೆಗೆ ಅಪ್ಪಳಿಸಿದ್ದು, ಈ ಪೈಕಿ 'ಧುರಂಧರ್​ 2' (ಹಿಂದಿ), 'ಹನುಮಾನ್​ ಅಂಶ್' (ಹಿಂದಿ)​, 'ಬೆತ್ಲಹೆಮ್​ ಕುಟುಂಬ ಯೂನಿಟ್​' (ಮಲಯಾಳಂ) ಸೇರಿದಂತೆ ಬೆರಳೆಣಿಕೆಯಷ್ಟು ಮಾತ್ರ ಸೂಪರ್​ಹಿಟ್ ಕಂಡಿದ್ದಲ್ಲದೇ, ಬಾಕ್ಸ್ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್​ ಕಂಡಿವೆ.

ಈಗ ದ್ವಿತೀಯಾರ್ಧದಲ್ಲಿ ಪೈಪೋಟಿಗಿಳಿದಿರುವ ಸಿನಿಮಾಗಳ ಪೈಕಿ ಇತ್ತೀಚೆಗಷ್ಟೇ ತೆರೆಕಂಡ ನ್ಯಾಚುರಲ್​ ಸ್ಟಾರ್ ನಾನಿ ನಟನೆಯ 'ದಿ ಪ್ಯಾರಡೈಸ್'​ ಮತ್ತು ಯಶ್​ ಅಭಿನಯದ 'ಟಾಕ್ಸಿಕ್​'ನಂತಹ ಬಿಗ್ ಬಿಜೆಟ್​ ಸಿನಿಮಾಗಳು ನಿರೀಕ್ಷೆಯ ಗಡಿಯನ್ನೂ ತಲುಪದೆ, ಸಿನಿಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆಗಳಿಗೆ ತುತ್ತಾಗಿ ಬಾಕ್ಸ್ ಆಫೀಸ್​ ರೇಸ್​ನಿಂದಲೇ ಹೊರಬಿದ್ದಿದೆ. ಮತ್ತೊಂದೆಡೆ, ನಿರ್ಮಾಪಕರು ಹಾಕಿದ್ದ ಬಂಡವಾಳವನ್ನೂ ಈ ಚಿತ್ರಗಳು ತಲುಪುವಲ್ಲಿ ಸಂಪೂರ್ಣವಾಗಿ ವಿಫಲಗೊಂಡಿದೆ ಎಂಬುದು ನಿಜಕ್ಕೂ ಬೇಸರದ ಸಂಗತಿ.

ಸೆಪ್ಟೆಂಬರ್​ ಮುಗಿದು ಈಗ ಅಕ್ಟೋಬರ್​ಗೆ ಕಾಲಿಡುತ್ತಿದ್ದಂತೆ ಉತ್ತರಕ್ಕಿಂತ ದಕ್ಷಿಣ ಭಾರತದ ಹಲವು ಬಹುನಿರೀಕ್ಷಿತ ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ. ಇದರಲ್ಲಿ ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಯ ಸಿನಿಮಾಗಳು ಮುಂಚೂಣಿಲ್ಲಿವೆ. ಹಾಗಿದ್ದರೆ, ಯಾವೆಲ್ಲ ಭಾಷೆಗಳ ಚಿತ್ರಗಳು ಈ ತಿಂಗಳಲ್ಲಿ ಬಿಡುಗಡೆಗೊಳ್ಳುತ್ತಿವೆ. ಯಾವ ಸ್ಟಾರ್​ ನಟರ ಸಿನಿಮಾಗಳು ಚಿತ್ರಮಂದಿರಗಳಲ್ಲಿ ತೆರೆ ಕಾಣುತ್ತಿವೆ ಎಂಬುದರ ವಿವರ ಇಲ್ಲಿದೆ ನೋಡಿ.

16 ಸಿನಿಮಾಗಳು ತೆರೆಗೆ

1. ಬೀರ್​ಬಲ್​ 2 (ಕನ್ನಡ)

ರಿಲೀಸ್​: ಅಕ್ಟೋಬರ್ 23

2. ಜೈಲರ್ 2 (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 15

3. ಬತ್ತ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 1

4. ಬೇಲ್​ (ಕನ್ನಡ)

ಬಿಡುಗಡೆ ದಿನಾಂಕ: ಅಕ್ಟೋಬರ್ 2

5. ಡೋಂಟ್ ಟ್ರಬಲ್ ದಿ ಟ್ರಬಲ್ (ತೆಲುಗು-ಮಲಯಾಳಂ)

ಬಿಡುಗಡೆ ದಿನಾಂಕ: ಅಕ್ಟೋಬರ್ 2, 2026

6. ಆದರ್ಶ ಕುಟುಂಬ ಮನೆ ನಂ: 47 - ಎಕೆ 47 (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 9

7. ಸಿಗ್ಮಾ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 2

8. ಯೆಝು ಕಡಲ್ ಏಳು ಮಲೈ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 1

Also Read
ವಿಧಾನಸೌಧದ ಮೆಟ್ಟಿಲಲ್ಲಿ ಉರ್ದು ಹಬ್ಬ ವಿವಾದ: ಈ ಬಗ್ಗೆ ಸಿಎಂ ಕಚೇರಿ ಕೊಟ್ಟ ಸ್ಪಷ್ಟನೆ ಹೀಗಿದೆ | Urdu Row
South Films

9. ಇಟ್ಲು ಅರ್ಜುನ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 30

10. ಇರಂದು ವನಂ (ತಮಿಳು)

ಬಿಡುಗಡೆ ದಿನಾಂಕ: ಅಕ್ಟೋಬರ್ 23

11. #ಕಲ್ಟ್ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 30

12. ರಣಬಾಲಿ (ತೆಲುಗು)

ಬಿಡುಗಡೆ ದಿನಾಂಕ: ಅಕ್ಟೋಬರ್ 16

13. ದೃಶ್ಯಂ: ದಿ ಕನ್​ಕ್ಲೂಷನ್​ (ಹಿಂದಿ)

ಬಿಡುಗಡೆ ದಿನಾಂಕ: ಅಕ್ಟೋಬರ್ 02

14. ಪ್ರೇಮ್​ ಕೀತನೂ (ಹಿಂದಿ)

ಬಿಡುಗಡೆ ದಿನಾಂಕ: ಅಕ್ಟೋಬರ್ 02

15. ನಯೀ ನವೇಲ್ಲಿ (ಹಿಂದಿ)

ಬಿಡುಗಡೆ ದಿನಾಂಕ: ಅಕ್ಟೋಬರ್ 16

16. ತು ಹೈ ಮೇರಿ ಕಿರಣ್​ (ಹಿಂದಿ)

ಬಿಡುಗಡೆ ದಿನಾಂಕ: ಅಕ್ಟೋಬರ್ 23

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net